ಕ್ರಿಕೆಟ್ರೋಹಿತ್ ಶರ್ಮಾ ಭಾರತ ತಂಡಕ್ಕೆ 16 ವರ್ಷಗಳನ್ನು ನೀಡಿದ.. ಆದರೆ ಇವರು...

ರೋಹಿತ್ ಶರ್ಮಾ ಭಾರತ ತಂಡಕ್ಕೆ 16 ವರ್ಷಗಳನ್ನು ನೀಡಿದ.. ಆದರೆ ಇವರು ಅವನಿಗೆ ಒಂದು ವರ್ಷವನ್ನೂ ಕೊಡಲಿಲ್ಲ..!

-

- Advertisment -spot_img

ರೋಹಿತ್ ಶರ್ಮಾ ಭಾರತ ತಂಡಕ್ಕೆ 16 ವರ್ಷಗಳನ್ನು ನೀಡಿದ.. ಆದರೆ ಇವರು ಅವನಿಗೆ ಒಂದು ವರ್ಷವನ್ನೂ ಕೊಡಲಿಲ್ಲ..!

8 ತಿಂಗಳಲ್ಲಿ 2 ಐಸಿಸಿ ಟ್ರೋಫಿ. ಅದರಲ್ಲೊಂದು ಟಿ20 ವಿಶ್ವಕಪ್, ಮತ್ತೊಂದು ಚಾಂಪಿಯನ್ಸ್ ಟ್ರೋಫಿ..

ನಾಯಕನಾಗಿ ಕೊನೆಯ ಮೂರು ಐಸಿಸಿ ಟೂರ್ನಿಗಳಲ್ಲಿ 25 ಪಂದ್ಯಗಳು.. ಸೋತದ್ದು ಒಂದೇ ಪಂದ್ಯ.., ಟ್ರೋಫಿ ಗೆಲ್ಲಲಾಗದೆ ವಾಪಸ್ ಬಂದದ್ದು ಒಂದೇ ಟೂರ್ನಿ; ಅದು 2023ರ ಏಕದಿನ ವಿಶ್ವಕಪ್.

ಕಳೆದ ಮಾರ್ಚ್ ತಿಂಗಳಲ್ಲಿಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬೆನ್ನಲ್ಲೇ ಪತ್ರಿಕಾಕೋಷ್ಠಿಗೆ ಬಂದಿದ್ದ ರೋಹಿತ್ ಶರ್ಮಾ ಅಲ್ಲೊಂದು ಮಾತು ಹೇಳುತ್ತಾನೆ. ‘’ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದೇವೆ, ಖುಷಿಯಿದೆ. ಆದರೆ 50 ಓವರ್’ಗಳ ಏಕದಿನ ವಿಶ್ವಕಪ್ ಗೆಲ್ಲಬೇಕು. ನಾವು ಅದನ್ನೇ ನೋಡುತ್ತಾ ಬೆಳೆದವರು. ನಮ್ಮ ಬಾಲ್ಯದಲ್ಲಿ ಟಿ20 ವಿಶ್ವಕಪ್, ಟೆಸ್ಟ್ ಚಾಂಪಿಯನ್’ಶಿಪ್, ಚಾಂಪಿಯನ್ಸ್ ಟ್ರೋಫಿ ಇರಲೇ ಇರಲೇ ಇಲ್ಲ. ನಮಗಿದ್ದ ಕನಸು ಒಂದೇ. ಅದು ಏಕದಿನ ವಿಶ್ವಕಪ್. ಅದು ನಮ್ಮದಾಗಬೇಕು. ಅಂದ ಹಾಗೆ ನಾನು ನಿವೃತ್ತಿಯಾಗುವುದಿಲ್ಲ’’.

ಅವನು ನಿಸ್ಸಂದೇಹವಾಗಿ 2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದ. ತನ್ನ ನಾಯಕತ್ವದಲ್ಲೇ ವಿಶ್ವಕಪ್ ಗೆಲ್ಲುವ ಯೋಜನೆಯಲ್ಲಿದ್ದ. ಅದಕ್ಕಾಗಿ ಸಿದ್ಧತೆಯನ್ನೂ ಆರಂಭಿಸಿದ್ದ. ಫಿಟ್ನೆಸ್ ಉತ್ತಮ ಪಡಿಸಿಕೊಳ್ಳಲು ಕನಿಷ್ಠ 10 ಕೆ.ಜಿ ದೇಹ ತೂಕ ಇಳಿಸಿದ್ದ.

ಆದರೆ..,
ಭಾರತೀಯ ಕ್ರಿಕೆಟ್’ನಲ್ಲಿ ‘ನಾಯಕ ರೋಹಿತ್ ಶರ್ಮಾ’ನ ಮಹೋನ್ನತ ಅಧ್ಯಾಯಕ್ಕೆ ತೆರೆ ಬಿದ್ದಿದೆ. ಇನ್ನು ಮುಂದೆ ರೋಹಿತ್ ಕ್ರಿಕೆಟ್ ಮೈದಾನದಲ್ಲಿ ಸಾರಥಿಯಲ್ಲ, ಒಬ್ಬ ಸೈನಿಕ ಅಷ್ಟೇ. 2027ರ ವಿಶ್ವಕಪ್ ಆಡುತ್ತಾನಾ..? ಹಿರಿಯ ಆಟಗಾರರನ್ನು ಈಗಿನ ಕ್ರಿಕೆಟ್ ವ್ಯವಸ್ಥೆ ನಡೆಸಿಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಅದು ಅನುಮಾನ.

ಈ ಹಿಂದೆ ಸಾಕಷ್ಟು ಬಾರಿ ರೋಹಿತ್ ಶರ್ಮಾನನ್ನು ಟೀಕಿಸಿ ಬರೆದಿದ್ದೆ. ಅದು ಟೆಸ್ಟ್ ಕ್ರಿಕೆಟ್’ಗೆ ಸಂಬಂಧಪಟ್ಟದ್ದು. ಅದಕ್ಕೆ ಈಗಲೂ ಬದ್ಧ. ಆದರೆ ವೈಟ್ ಬಾಲ್ ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ ಒಂದು ಅದ್ಭುತ. ಅವನ ಆಟದಂತೆ ನಾಯಕತ್ವವೂ ಒಂದು ಚರಿತ್ರೆ.
2014ರಿಂದ 2024. ಸತತ 10 ವರ್ಷ.. ಕ್ರಿಕೆಟ್ ಜಗತ್ತಿನ ಪವರ್ ಹೌಸ್ ಭಾರತಕ್ಕೆ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲಲಾಗಿರಲಿಲ್ಲ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ
ಮೂರು ಬಾರಿ ಹತ್ತಿರ ಹತ್ತಿರ ಬಂದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆ 10 ವರ್ಷಗಳ ಕೊರಗನ್ನು ನೀಗಿಸಿದವನು ರೋಹಿತ್ ಶರ್ಮಾ.

ರೋಹಿತ್ ಶರ್ಮಾ ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡದ್ದು 2021ರಲ್ಲಿ. ನಾಲ್ಕು ವರ್ಷಗಳಲ್ಲಿ ನಾಲ್ಕು ಐಸಿಸಿ ಫೈನಲ್ಸ್. ಎರಡು ಚಾಂಪಿಯನ್ ಕಿರೀಟ. ಏಕದಿನ ಕ್ರಿಕೆಟ್’ನಲ್ಲಿ ನಾಯಕನಾಗಿ 56 ಪಂದ್ಯಗಳಲ್ಲಿ 42 ಗೆಲುವು. ರೋಹಿತಾ ಶರ್ಮಾ ಒಬ್ಬ ಚತುರ ಚಾಣಾಕ್ಷ ನಾಯಕ ಎಂಬುದಕ್ಕೆ ಸಾಧನೆಗಳೇ ಸಾಕ್ಷಿ ನುಡಿಯುತ್ತವೆ.

2024ರ ಟಿ20 ವಿಶ್ವಕಪ್ ಗೆದ್ದ ಕ್ಷಣವೇ ‘ಇನ್ನು ಸಾಕು ಚುಟುಕು ಕ್ರಿಕೆಟ್’ ಎಂದು ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದ. ‘ಇನ್ನೂ ಒಂದು ವರ್ಷ ಆಡುತ್ತೇನೆ’ ಎಂದಿದ್ದರೆ ಅವನನ್ನು ತಡೆಯುವವರು ಯಾರಿದ್ದರು..?ಆದರೆ ರೋಹಿತ್ ಹಾಗೆ ಮಾಡಲಿಲ್ಲ. ಹೊಸ ಹುಡುಗರಿಗೆ ದಾರಿ ಮಾಡಿಕೊಟ್ಟ.

ರೋಹಿತ್ ಶರ್ಮಾ ಹೊಸ ಆಟಗಾರರನ್ನು ರೆಡಿ ಮಾಡಿದ ನಾಯಕ. ಅವರಿಗೆ ಗೆಲ್ಲುವುದನ್ನು ಕಲಿಸಿಕೊಟ್ಟ ನಾಯಕ. ಈಗ ಏಷ್ಯಾ. ಕಪ್’ನಲ್ಲಿ ಭಾರತ ಸೋಲೇ ಇಲ್ಲದೆ ಚಾಂಪಿಯನ್ ಆಗಿದೆ ಎಂದರೆ, ಇದು ರೋಹಿತ್ ಶರ್ಮಾ ಕಲಿಸಿದ ಪಾಠ.
ಈಗ ರೋಹಿತ್ ಉತ್ತರಾಧಿಕಾರಿಯಾಗಿ ನಾಯಕ ಪಟ್ಟವೇರಿರುವ ಶುಭಮನ್ ಗಿಲ್ ಬೆನ್ನ ಹಿಂದೆ ಬಂಡೆಯಂತೆ ನಿಂತವನೇ ರೋಹಿತ್ ಶರ್ಮಾ.
2022.. ಡಿಸೆಂಬರ್ 10. ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಇಶಾನ್ ಕಿಶನ್.. ಅಚ್ಚರಿ ಏನು ಗೊತ್ತೇ.. ಭಾರತ ಆಡಿದ ಮುಂದಿನ ಮೂರು ಏಕದಿನ ಪಂದ್ಯಗಳಲ್ಲಿ ಇಶಾನ್ ಕಿಶನ್’ನನ್ನು ಆಡುವ ಬಳಗದಿಂದ ಹೊರಗಿಡಲಾಗಿತ್ತು. ಕಾರಣ, ಶುಭಮನ್ ಗಿಲ್.. ಪಂಜಾಬ್ ಹುಡುಗನಿಗಾಗಿ ಇಶಾನ್’ನನ್ನು ಹೊರಗಿಡುವ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದ ನಾಯಕ ರೋಹಿತ್. ಶುಭಮನ್ ಗಿಲ್’ನಲ್ಲಿ ಭವಿಷ್ಯದ ನಾಯಕನನ್ನು ರೋಹಿತ್ ಅವತ್ತೇ ಗುರುತಿಸಿದ್ದ. ಫಲಿತಾಂಶ ಈಗ ಕಣ್ಣ ಮುಂದೆಯೇ ಇದೆ.

‘’Rohit was the burning light in the candle’’ ರವಿಚಂದ್ರನ್ ಅಶ್ವಿನ್ ಆಡಿರುವ ಈ ಮಾತು ಅದೆಷ್ಟು ಸತ್ಯ..!

ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಿದ ಕೊನೆಯ ಪಂದ್ಯದಲ್ಲಿ ಅವನೇ ಮ್ಯಾನ್ ಆಫ್ ದಿ ಮ್ಯಾಚ್(ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್). ತಂಡದ ಚುಕ್ಕಾಣಿ ಹಿಡಿದ ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಐಸಿಸಿ ಚಾಂಪಿಯನ್ ಪಟ್ಟ.

Rohit Sharma..
Thank you so much. You were a phenomenal captain. You taught current team what it takes to win.
ವೈಟ್ ಬಾಲ್ ಕ್ರಿಕೆಟ್’ನಲ್ಲಿ ನಾಯಕನಾಗಿ ನೀನೊಂದು ದಂತಕಥೆ.
-ಸುದರ್ಶನ್

LEAVE A REPLY

Please enter your comment!
Please enter your name here

5 × two =

Latest news

Lucky Vibe Casino: Your Destination for Short, High‑Intensity Gaming Sessions

1. The Quick‑Hit Experience at Lucky Vibe CasinoWhen you log into Lucky Vibe Casino, the first thing that strikes...

MaxiSpin – Quick‑Play Slots and Instant Wins for the Modern Gambler

1. The Quick‑Play Pulse – Why Short Sessions RuleMaxiSpin is built around players who crave instant gratification. In a...

Roby Casino: Quick‑Hit Gaming for the Modern Player

1. The Pulse of Fast PlayRoby Casino has carved a niche for players who crave adrenaline in a tight...

Winning Casino – Experience Rapid Wins with Every Spin

Welcome to Winning – Quick Wins AwaitIn a world where time is gold, Winning casino offers a playground designed...
- Advertisement -spot_imgspot_img

Burswood Online Casino: Quick‑Spin Thrills for the Fast‑Paced Player

1 – The Pulse of a Rapid‑Fire SessionFor many casino enthusiasts the game‑playing window is a burst of adrenaline:...

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

Must read

- Advertisement -spot_imgspot_img

You might also likeRELATED
Recommended to you