2024-25ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಗೆ 36 ಮಂದಿ ಸದಸ್ಯರ ಕರ್ನಾಟಕದ ಸಂಭಾವ್ಯರ ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿಯ ಸಂಗತಿ ಏನೆಂದರೆ ಭರವಸೆಯ ಆಲ್ರೌಂಡರ್ ಮನೋಜ್ ಭಾಂಡಗೆಗೆ ಈ 36 ಮಂದಿಯ ತಂಡದಲ್ಲೂ ಸ್ಥಾನ ನೀಡಲಾಗಿಲ್ಲ.
ಬಲಗೈ ಮಧ್ಯಮ ವೇಗದ ಬೌಲರ್ ಹಾಗೂ ಎಡಗೈ ಸ್ಫೋಟಕ ದಾಂಡಿಗನಾಗಿರುವ ಮನೋಜ್ ಭಾಂಡಗೆಗೆ ರಣಜಿ ಸಂಭಾವ್ಯರ ತಂಡದಲ್ಲೂ ಸ್ಥಾನ ನೀಡದಿರುವುದು ಅಚ್ಚರಿಗೆ ಕಾರಣವಾಗಿದೆ.
ದಿ ಗ್ರೇಟ್ ವಾಲ್ ಆಫ್ ಇಂಡಿಯಾ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಇದೇ ಮೊದಲ ಬಾರಿ ರಣಜಿ ಸಂಭಾವ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ರಾಜ್ಯದ ಅನುಭವಿ ಆಫ್’ಸ್ಪಿನ್ನರ್ ಕೆ.ಗೌತಮ್ ಅವರನ್ನು ಸಂಭಾವ್ಯರ ತಂಡದಿಂದ ಹೊರಗಿಡಲಾಗಿದೆ. ಇದು ಕರ್ನಾಟಕ ತಂಡದೊಂದಿಗೆ ಗೌತಮ್ ಅವರ ಪ್ರಯಾಣದ ಅಂತ್ಯವೆಂದೇ ಹೇಳಲಾಗುತ್ತಿದೆ.
Karnataka probable’s for ರಣಜಿ ಟ್ರೋಫಿ 2024-25
1. ಮಯಾಂಕ್ ಅಗರ್ವಾಲ್
2. ಕೆ.ಎಲ್ ರಾಹುಲ್
3. ಮನೀಶ್ ಪಾಂಡೆ
4. ದೇವದತ್ತ್ ಪಡಿಕ್ಕಲ್
5. ಅನೀಶ್ ಕೆ.ವಿ
6. ಸ್ಮರಣ್ ಆರ್.
7. ಕಿಶನ್ ಬೆದರೆ
8. ನಿಕಿನ್ ಜೋಸ್
9. ಅಭಿನವ್ ಮನೋಹರ್
10. ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್)
11. ಸುಜಯ್ ಸತೇರಿ (ವಿಕೆಟ್ ಕೀಪರ್)
12. ಕೃತಿಕ್ ಕೃಷ್ಣ (ವಿಕೆಟ್ ಕೀಪರ್)
13. ಶ್ರೇಯಸ್ ಗೋಪಾಲ್
14. ರೋಹಿತ್ ಕುಮಾರ್ ಎ.ಸಿ.
15. ಶಶಿಕುಮಾರ್ ಕೆ.
16. ಮೊಹ್ಸಿನ್ ಖಾನ್
17. ವೈಶಾಖ್ ವಿಜಯ್ ಕುಮಾರ್
18. ವಿದ್ವತ್ ಕಾವೇರಪ್ಪ
19. ವಿ.ಕೌಶಿಕ್
20. ಪ್ರಸಿದ್ಧ್ ಕೃಷ್ಣ
21. ಅಭಿಲಾಷ್ ಶೆಟ್ಟಿ
22. ವಿದ್ಯಾಧರ್ ಪಾಟೀಲ್
23. ಎಂ.ವೆಂಕಟೇಶ್
24. ಸಮಿತ್ ದ್ರಾವಿಡ್
25. ಹಾರ್ದಿಕ್ ರಾಜ್
26. ಧೀರಜ್ ಜೆ.ಗೌಡ
27. ಕಾರ್ತಿಕೇಯ ಕೆ.ಪಿ.
28. ಶುಭಾಂಗ್ ಹೆಗ್ಡೆ
29. ಅಧೋಕ್ಷ್ ಹೆಗ್ಡೆ
30. ಶಿಖರ್ ಶೆಟ್ಟಿ
31. ಯಶೋವರ್ಧನ್ ಪರಂತಪ್
32. ವಿಶಾನ್ ಓನಟ್
33. ಜಸ್ಪೆರ್ ಇ.ಜೆ
34. ಸಮರ್ಥ್ ನಾಗರಾಜ್
35. ಲವನೀತ್ ಸಿಸೋಡಿಯಾ (ವಿಕೆಟ್ ಕೀಪರ್)
36. ಚೇತನ್ ಎಲ್.ಆರ್.