ಟಾಸ್ ಗೆದ್ದ ವಿರಾಟ್ ಪಡೆ ಬಾ ಗುರು ಬೌಲಿಂಗ್ ಮಾಡೋಣ ಅಂದರು. ಚಾಲೆಂಜ್ ಸ್ವೀಕರಿಸಿದ ರಾಹುಲ್ ಪಡೆ ಪ್ರೀತಿಯಿಂದ ತಗೋ 179 ರನ್ನು ಎಂದರು.
ಆರಂಭದಲ್ಲಿ ಆನೆ ಹೆಜ್ಜೆ ಇಟ್ಟು ಕೊನೆಕೊನೆಗೆ ಹುಲಿಯಾದ ರಾಹುಲ್. ಪಂಜಾಬಿಗೆ ಸೇಲಾದ ಕ್ರಿಸ್ ಗೇಲ್ ಚಚ್ಚಿದ್ದು 41 ರನ್ನುಗಳ ಹೋಲ್ ಸೇಲ್. ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಮಿಂಚಿದ ಯುವ ಹರಪ್ರೀತ್ ಬ್ರಾರ್. ಅರೇ ಯೆ ತೋ ಸೇಮ್ ಟು ಸೇಮ್ ಯುವರಾಜ್ ಸಿಂಗ್ ಹೈ ಯಾರ್. ಕೈ ಬಿಗಿ ಹಿಡಿದು ಬೌಲಿಂಗ್ ಮಾಡಿದ ಆರ್ಸಿಬಿ ಬೌಲರಗಳ ಶ್ರಮ ಆಯ್ತ ವ್ಯರ್ಥ, ಕೊನೆ ಓವರನ್ನ ಹರ್ಷಲ್ ಗೆ ಕೊಟ್ಟಿದ್ದರಲ್ಲಿ ಇರಲಿಲ್ಲ ಯಾವುದೇ ಅರ್ಥ.
180 ರ ಗುರಿ ದಾಟಲು ಅಂಗಳಕ್ಕಿಳಿದ ಕೊಹ್ಲಿ ಪಡೆ ಆದರೆ ಪಂದ್ಯ ಸಂಪೂರ್ಣವಾಗಿ ವಾಲಿದ್ದು ಪಂಜಾಬ್ ಕಡೆ. ಕ್ಲಾಸಿಕ್ ಕ್ರಿಕೆಟ್ ಶಾಟ್ಸ್ ಆಡಿದ ವಿರಾಟ ಆದರೆ ನಿಧಾನವಾಗಿ ಆಡಿದಕ್ಕೆ ಅಭಿಮಾನಿಗಳ ಚೀರಾಟ. ಏಳರ ನಂತರ ಏಳಲೇ ಇಲ್ಲ
ಪಡಿಕಲ್ಲು ಆರಂಭದ ಜೊತೆಯಾಟಕ್ಕೆ ಹಾಕಲೇ ಇಲ್ಲ ಅಡಿಗಲ್ಲು. ಪಟ್ಟು ಹಿಡಿದು ನಿಂತ ಪಾಟಿದಾರ ಕೆಲ ಅಗತ್ಯ ರನ್ನುಗಳ ಜೊತೆಯಾಟಕ್ಕಾದ ಪಾಲುದಾರ. ಹರಪ್ರೀತನ ಆಫ್ ಸ್ಪಿನ್ ಮೋಡಿಗೆ ಮರುಳಾಗಿಬಿಟ್ಟಿತು
ಮ್ಯಾಕ್ಸು, ಎಬಿಡಿ ಜೋಡಿ. ಬೌಲಿಂಗಲ್ಲಿ ದುಬಾರಿಯಾಗಿ ಬ್ಯಾಟಿಂಗಲ್ಲಿ ಗೆಲುವಿನ ರೂವಾರಿಯಾಗಲು ಹೊರಟಿದ್ದ ಹರ್ಶಲ್ ನ ವೀರಾವೇಶ ಸಾಕಾಗಿರಲಿಲ್ಲ, ಪಾಯಿಂಟ್ ಟೇಬಲಲ್ಲಿ ಮೂರಕ್ಕಿಳಿಯುವುದು ಆರ್.ಸಿ.ಬಿ ಅಭಿಮಾನಿಗಳಿಗೆ ಬೇಕಾಗಿರಲಿಲ್ಲ
.