ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ 24 ವರ್ಷದ ಪ್ರಿಯಾ ಪೂನಿಯಾ ಅವರ ತಾಯಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಭಾರತೀಯ ( ಕರ್ನಾಟಕದವರು ) ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರು ಕೊರೋನಾ ಸೋಂಕಿಗೆ ಒಳಗಾಗಿದ್ದ ತಾಯಿ ಮತ್ತು ಅಕ್ಕನನ್ನು ಕಳೆದುಕೊಂಡಿದ್ದರು.
ಪ್ರಿಯಾ ಪೂನಿಯಾ ಅಮ್ಮನ ಅಗಲಿಕೆಯ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಮಾನಿಗಳು ಮತ್ತು ಸ್ನೇಹಿತರ ಜೊತೆ ಹಂಚಿಕೊಂಡಿದ್ದಾರೆ. ಅಮ್ಮ ಬಲಿಷ್ಠವಾಗಿರು ಎಂದು ನೀನು ಯಾಕೆ ಯಾವಾಗಲೂ ನನಗೆ ಹೇಳುತ್ತಿದ್ದೆ ಎಂಬುದರ ಸತ್ಯ ನಿನ್ನನ್ನು ಕಳೆದು ಕೊಂಡ ಕ್ಷಣವೇ ನನಗೆ ಅರ್ಥವಾಗಿದೆ. ಒಂದು ದಿನ ನಿನ್ನ ಅಗಲುವಿಕೆಯ ನೋವನ್ನು ಸಹಿಸಿಕೊಳ್ಳಲು ನಾನು ಶಕ್ತಳಾಗಿರಬೇಕೆಂದು ನಿನಗೆ ಗೊತ್ತಿತ್ತು. ಅಮ್ಮ ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವೆ. ನೀನು ಯಾವಾಗಲೂ ನನ್ನ ಬೆನ್ನಿಗಿರುವೆ ಎಂಬುದು ನನಗೆ ಗೊತ್ತಿದೆ.ನಾನು ಈ ಹಂತಕ್ಕೆ ಬರಲು ನಿನು ಕೊಟ್ಟ ಧೈರ್ಯ ಮಾರ್ಗದರ್ಶನ, ಪ್ರೀತಿ ಅಮ್ಮ… ನಿನ್ನನ್ನು ನಾನು ಕ್ಷಣ ಕ್ಷಣವೂ ಪ್ರೀತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ…..
ಪ್ರಿಯಾ ಅವರ ಅಮ್ಮನ ಆತ್ಮಕ್ಕೆ ಚಿರಶಾಂತಿ ಸಿಗಲಿ.
ಬರುವ ದಿನಗಳಲ್ಲಿ ಪ್ರಿಯಾ ಪೂನಿಯಾ ಭಾರತೀಯ ಮಹಿಳಾ ಕ್ರಿಕೆಟ್ ನ ಬಲಿಷ್ಠ ಆಟಗಾರ್ತಿಯಾಗಿ ಅಮ್ಮನ ಆಸೆ ಈಡೇರಿಸುವಂತಾಗಲಿ