ಕ್ರಿಕೆಟ್ಮತ್ತೆ ವಿರಾಟ ದರ್ಶನ... ಸೂಪರ್ ಕಿಂಗ್ಸ್ ವಿರುದ್ಧ R.C.B ಗೆ ಸೂಪರ್...

ಮತ್ತೆ ವಿರಾಟ ದರ್ಶನ… ಸೂಪರ್ ಕಿಂಗ್ಸ್ ವಿರುದ್ಧ R.C.B ಗೆ ಸೂಪರ್ ಜಯ

-

- Advertisment -spot_img
ಐ.ಪಿ.ಎಲ್ ಹಣಾಹಣಿಯ ಎರಡು ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವಾಗಿ  ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಬಹುಕುತೂಹಲಕಾರಿ ಪಂದ್ಯದಲ್ಲಿ R.C.B ತನ್ನ ಸರ್ವಾಂಗೀಣ ಪ್ರದರ್ಶನದೊಂದಿಗೆ ಅಧಿಕಾರಯುತವಾದ ಗೆಲುವನ್ನು ದಾಖಲಿಸಿತು
.
ಚಾಂಪಿಯನ್ ಕ್ಯಾಪ್ಟನ್ ವಿರುದ್ದವಾಗಿ  ಚಾಂಪಿಯನ್ ಬ್ಯಾಟ್ಸ್ ಮನ್ ಸೊಗಸಾದ ಆಟ ತಂಡಕ್ಕೆ ಜಯವನ್ನು ತಂದುಕೊಟ್ಟಿತು.
ಟಾಸ್ ಅನ್ನು ಜಯಿಸಿದ ಕೊಹ್ಲಿ  ದೊಡ್ಡ ಮೊತ್ತವನ್ನು ಪೇರಿಸುವ ಸಲುವಾಗಿ  ಮೊದಲು ಬ್ಯಾಟಿಂಗ್ ನ್ನು ಆಯ್ದುಕೊಂಡು ಬಹುದೊಡ್ಡ ಗುರಿಯನ್ನು ನೀಡಬೇಕೆಂದು ತಮ್ಮ ನಿರ್ಣಯವನ್ನು ಸಮರ್ಥಿಸಿಕೊಳ್ಳಬೇಕೆಂಬ ಹೊತ್ತಿಗೆ c.s.k, ಯ ಬೌಲರ್ ಗಳು r.c.b ದಾಂಡಿಗರನ್ನು ಬಲವಾಗಿ ಕಾಡಿದ್ದರು.
ಆ ಹೊತ್ತಿಗೆ  ಎಂದಿನಂತೆ ತನ್ನ ಸ್ಪೋಟಕ ಬ್ಯಾಂಟಿಂಗ್ ನ ಮೂಲಕ ಕೊಹ್ಲಿಯ ಆರ್ಭಟ ಚೈನ್ನೈ ತಂಡದ ತಂತ್ರವನ್ನು ತೆಲೆಕೆಳಗೆ ಮಾಡಿಬಿಟ್ಟಿತ್ತು.  ಭರ್ಜರಿ ಬ್ಯಾಟಿಂಗ್ ಮೂಲಕ ತನ್ನನ್ನು ಟೀಕಿಸುತ್ತಿದ್ದವರಿಗೆ ಕೊಹ್ಲಿಯ ಉತ್ತರ ರವಾನೆಯಾಯಿತು. 170 ರ ಗುರಿಯನ್ನು ತಲುಪಬೇಕಿದ್ದ ಚೆನ್ನೈ ಮತ್ತೆ ತನ್ನ ಬಿರುಸಿನ ಬ್ಯಾಟಿಂಗ್ ಹಾಗೂ ಹೊಂದಾಣಿಕೆ ಕೊರತೆಯನ್ನು ಅನುಭವಿಸಿತು. .ಧೋನಿಯ ನಾಯಕತ್ವದ ಜಾಣ್ಮೆ ಮೊದಮೊದಲು ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿದರೂ ಕೊಹ್ಲಿಯ ಅಬ್ಬರದ ನಡುವೆ ನಿರಸ ಪ್ರದರ್ಶನದೊಂದಿಗೆ ಧೋನಿ ಬಳಗ ಕೊಹ್ಲಿ ಬಳಗಕ್ಕೆ ಶರಣಾಯಿತು. ಈ ಹಂತದಲ್ಲಿ ಪ್ರಬಲ ದಾಳಿಯನ್ನು ಸಂಘಟಿಸಿದ R.C.B ಬೌಲರ್ ಗಳು ತಮ್ಮ ನೈಜ ತಾಕತ್ತನ್ನು ತೋರ್ಪಡಿಸಿದರು. ಅತ್ಯುತ್ತಮ  ಕ್ಷೇತ್ರರಕ್ಷಣೆಯು R.C.B ಬೌಲಿಂಗ್ ಗೆ ಪ್ರಮುಖ ಸಾಥ್ ನೀಡಿತು. ಧೋನಿಎಂಬ  ಚಾಂಪಿಯನ್ ಕ್ಯಾಪ್ಟನ್ ನ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಕೊಹ್ಲಿ ಎಂಬ ಚಾಂಪಿಯನ್ ಆಟಗಾರನ ತಂಡ ತನ್ನ ಸರ್ವಾಂಗೀಣ ಪ್ರದರ್ಶನವನ್ನು ತೋರಿ  ಪಂದ್ಯವನ್ನು ಗೆದ್ದು ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿತು…

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

2 × two =

Latest news

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026 ಮಂಗಳೂರು: ಜಿಎಸ್‌ಬಿ ಸಮುದಾಯದ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಿರುವ ಪ್ರತಿಷ್ಠಿತ **ಪ್ಯಾಂಥರ್ಸ್ ಸೂಪರ್...

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 96 ರನ್: ವೈಭವ್ ಸೂರ್ಯವಂಶಿಯ ಸ್ಫೋಟಕ ಪ್ರತಿಭೆಗೆ ಕ್ರಿಕೆಟ್ ಲೋಕ ಫಿದಾ 15 ವರ್ಷದ...

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026 ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ಮೇರಾ ಯುವ ಭಾರತ್, ಉಡುಪಿ...

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...
- Advertisement -spot_imgspot_img

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ – ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ - ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ...

Must read

- Advertisement -spot_imgspot_img

You might also likeRELATED
Recommended to you