ಐ.ಪಿ.ಎಲ್ ಹಣಾಹಣಿಯ ಎರಡು ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವಾಗಿ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಬಹುಕುತೂಹಲಕಾರಿ ಪಂದ್ಯದಲ್ಲಿ R.C.B ತನ್ನ ಸರ್ವಾಂಗೀಣ ಪ್ರದರ್ಶನದೊಂದಿಗೆ ಅಧಿಕಾರಯುತವಾದ ಗೆಲುವನ್ನು ದಾಖಲಿಸಿತು
.
ಚಾಂಪಿಯನ್ ಕ್ಯಾಪ್ಟನ್ ವಿರುದ್ದವಾಗಿ ಚಾಂಪಿಯನ್ ಬ್ಯಾಟ್ಸ್ ಮನ್ ಸೊಗಸಾದ ಆಟ ತಂಡಕ್ಕೆ ಜಯವನ್ನು ತಂದುಕೊಟ್ಟಿತು.
ಟಾಸ್ ಅನ್ನು ಜಯಿಸಿದ ಕೊಹ್ಲಿ ದೊಡ್ಡ ಮೊತ್ತವನ್ನು ಪೇರಿಸುವ ಸಲುವಾಗಿ ಮೊದಲು ಬ್ಯಾಟಿಂಗ್ ನ್ನು ಆಯ್ದುಕೊಂಡು ಬಹುದೊಡ್ಡ ಗುರಿಯನ್ನು ನೀಡಬೇಕೆಂದು ತಮ್ಮ ನಿರ್ಣಯವನ್ನು ಸಮರ್ಥಿಸಿಕೊಳ್ಳಬೇಕೆಂಬ ಹೊತ್ತಿಗೆ c.s.k, ಯ ಬೌಲರ್ ಗಳು r.c.b ದಾಂಡಿಗರನ್ನು ಬಲವಾಗಿ ಕಾಡಿದ್ದರು.
ಆ ಹೊತ್ತಿಗೆ ಎಂದಿನಂತೆ ತನ್ನ ಸ್ಪೋಟಕ ಬ್ಯಾಂಟಿಂಗ್ ನ ಮೂಲಕ ಕೊಹ್ಲಿಯ ಆರ್ಭಟ ಚೈನ್ನೈ ತಂಡದ ತಂತ್ರವನ್ನು ತೆಲೆಕೆಳಗೆ ಮಾಡಿಬಿಟ್ಟಿತ್ತು. ಭರ್ಜರಿ ಬ್ಯಾಟಿಂಗ್ ಮೂಲಕ ತನ್ನನ್ನು ಟೀಕಿಸುತ್ತಿದ್ದವರಿಗೆ ಕೊಹ್ಲಿಯ ಉತ್ತರ ರವಾನೆಯಾಯಿತು. 170 ರ ಗುರಿಯನ್ನು ತಲುಪಬೇಕಿದ್ದ ಚೆನ್ನೈ ಮತ್ತೆ ತನ್ನ ಬಿರುಸಿನ ಬ್ಯಾಟಿಂಗ್ ಹಾಗೂ ಹೊಂದಾಣಿಕೆ ಕೊರತೆಯನ್ನು ಅನುಭವಿಸಿತು. .ಧೋನಿಯ ನಾಯಕತ್ವದ ಜಾಣ್ಮೆ ಮೊದಮೊದಲು ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿದರೂ ಕೊಹ್ಲಿಯ ಅಬ್ಬರದ ನಡುವೆ ನಿರಸ ಪ್ರದರ್ಶನದೊಂದಿಗೆ ಧೋನಿ ಬಳಗ ಕೊಹ್ಲಿ ಬಳಗಕ್ಕೆ ಶರಣಾಯಿತು. ಈ ಹಂತದಲ್ಲಿ ಪ್ರಬಲ ದಾಳಿಯನ್ನು ಸಂಘಟಿಸಿದ R.C.B ಬೌಲರ್ ಗಳು ತಮ್ಮ ನೈಜ ತಾಕತ್ತನ್ನು ತೋರ್ಪಡಿಸಿದರು. ಅತ್ಯುತ್ತಮ ಕ್ಷೇತ್ರರಕ್ಷಣೆಯು R.C.B ಬೌಲಿಂಗ್ ಗೆ ಪ್ರಮುಖ ಸಾಥ್ ನೀಡಿತು. ಧೋನಿಎಂಬ ಚಾಂಪಿಯನ್ ಕ್ಯಾಪ್ಟನ್ ನ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಕೊಹ್ಲಿ ಎಂಬ ಚಾಂಪಿಯನ್ ಆಟಗಾರನ ತಂಡ ತನ್ನ ಸರ್ವಾಂಗೀಣ ಪ್ರದರ್ಶನವನ್ನು ತೋರಿ ಪಂದ್ಯವನ್ನು ಗೆದ್ದು ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿತು…
K I N G. K O H L I showing CSK their airport route to India😂😂😂😂 pic.twitter.com/iYBfQkkgfU
— Dark Passenger (@tweet_umpire) October 10, 2020
While Captain Kohli’s masterclass on pacing a T20 innings caught everyone’s attention, it was a thorough team effort that took us across the finish line.
Here’s a sneak peek into the dressing room post the win against CSK.#PlayBold #WeAreChallengers #Dream11IPL #CSKvRCB pic.twitter.com/SwHSb4X4EI
— Royal Challengers Bangalore (@RCBTweets) October 11, 2020