ಕ್ರೀಡಾ ಪ್ರೋತ್ಸಾಹಕರು ಹಾಗೂ ಪ್ರಸಿದ್ಧ ಉದ್ಯಮಿ,ಶೆಫ್ ಟಾಕ್ ಕಂಪೆನಿಯ ಸಂಸ್ಥಾಪಕ ಬೈಂದೂರು ಗೋವಿಂದ ಬಾಬು ಪೂಜಾರಿ ಮಾಲೀಕತ್ವದ ಮತ್ಸ್ಯ ದರ್ಶಿನಿ ಮತ್ತು ಪ್ರಗ್ನ್ಯಾ ಸಾಗರ ಹೋಟೆಲ್ ಹಾಗೂ ಫಿಶ್ ಔಟ್‌ಲೆಟ್ ಗುರುವಾರ ಬೆಂಗಳೂರಿನ ಹರಳೂರು ಮುಖ್ಯರಸ್ತೆಯ ಗುರುಸಾಯಿ ಆರ್ಕೇಡ್ ಬಿಲ್ಡಿಂಗ್ ನಲ್ಲಿ ಶುಭಾರಂಭಗೊಂಡಿತು.
ಮಾನ್ಯ ಮುಜರಾಯಿ, ಬಂದರು ಹಾಗೂ ಮೀನುಗಾರಿಕಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮತ್ಸ್ಯ ದರ್ಶಿನಿ ಹಾಗೂ ಪ್ರಜ್ಞ್ನಾ ಸಾಗರ ಹೋಟೆಲ್ ಉದ್ಘಾಟಿಸಿ ಶುಭಹಾರೈಸಿದರು. ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ಪಿ. ಸಿ. ರಾವ್ ಅವರು ಪ್ರಜ್ಞ್ನಾ ಸಾಗರ ಹೋಟೆಲ್‌ನ 2ನೇ ಯುನಿಟ್ ಹಾಗೂ ಬೆಂಗಳೂರು ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷರಾದ ವೇದಕುಮಾರ್ ಅವರು ಫೀಶ್ ಔಟ್‌ಲೆಟ್
ಉದ್ಘಾಟಿಸಿದರು.