ನ್ಯಾಶ್ ಟ್ರೋಫಿ-2020
ಜನವರಿ 31 ರಿಂದ ಫೆಬ್ರವರಿ 2 ರ ತನಕ.
ಕಳೆದ 10 ವರ್ಷಗಳಿಂದ ಟೆನ್ನಿಸ್ ಕ್ರಿಕೆಟ್ ನಲ್ಲಿ ಪ್ರಭುತ್ವ ಸಾಧಿಸಿದ ತಂಡ ನ್ಯಾಶ್ ಬೆಂಗಳೂರು ತಂಡ
ತೃತೀಯ ಬಾರಿಗೆ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಪಂದ್ಯಾವಳಿ ಆಯೋಜಿಸಿದ್ದು,ಮಲ್ಲೇಶ್ವರಂ 18 ನೇ ಕ್ರಾಸ್ ಮೈದಾನದಲ್ಲಿ
ಜನವರಿ 31 ರಿಂದ ಫೆಬ್ರವರಿ 2ರ ತನಕ ಮೂರು ದಿನಗಳ ಕಾಲ ಹಗಲಿನಲ್ಲಿ ನಡೆಯಲಿದೆ.
ರಾಜ್ಯದ 20 ತಂಡಗಳು ಭಾಗವಹಿಸುವ ಈ ಪಂದ್ಯಾವಳಿ ನಾಕೌಟ್ ಮಾದರಿಯಲ್ಲಿ ನಡೆಯಲಿದ್ದು,ಪ್ರಥಮ ಪ್ರಶಸ್ತಿ ವಿಜೇತ ತಂಡ 2 ಲಕ್ಷ ನಗದು ಹಾಗೂ ದ್ವಿತೀಯ ಸ್ಥಾನಿ ತಂಡ 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳು ಹಾಗೂ ಸೆಮಿಫೈನಲ್ ಪರಾಜಿತ ತಂಡಗಳು 15,000 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಇನ್ನಿತರ ವೈಯಕ್ತಿಕ ಶ್ರೇಷ್ಟ ನಿರ್ವಹಣೆ ಪ್ರದರ್ಶಿಸಿದ ಆಟಗಾರರು ಅರ್ಹ ಪುರಸ್ಕಾರಗಳನ್ನು ಪಡೆಯಲಿದ್ದಾರೆ.
M.ಸ್ಪೋರ್ಟ್ಸ್ ಪಂದ್ಯಾವಳಿಯ ನೇರ ಪ್ರಸಾರವನ್ನು ಬಿತ್ತರಿಸಲಿದೆ.
ಆರ್.ಕೆ.ಆಚಾರ್ಯ ಕೋಟ.