ಎಸ್.ಎಸ್.ಸಿ.ಸಿ ಮುಕ್ಕ ತಂಡಕ್ಕೆ-ಸೈಮಂಡ್ಸ್ “ಗಣರಾಜ್ಯೋತ್ಸವ ಕಪ್-2020”
ಸೈಮಂಡ್ಸ್ ಕ್ರಿಕೆಟ್ ಕ್ಲಬ್
ಕಡಿಯಾಳಿ ಇವರ ಆಶ್ರಯದಲ್ಲಿ
“ಸ್ಪಂದನ ಬುದ್ಧಿಮಾಂದ್ಯ ಶಾಲೆಗೆ ಆರ್ಥಿಕ ಕೊಡುಗೆ ಹಾಗೂ ಅನಾರೋಗ್ಯ ಪೀಡಿತರಿಗೆ ಧನಸಹಾಯದ ಸದುದ್ದೇಶದಿಂದ
ಉಡುಪಿಯ ಎಮ್.ಜಿ.ಎಮ್ ಕಾಲೇಜ್ ಅಂಗಣದಲ್ಲಿ ಏರ್ಪಡಿಸಲಾಗಿದ್ದಮೂರು ದಿನಗಳ ಲೀಗ್ ಮಾದರಿಯ
ಅತ್ಯಂತ ಶಿಸ್ತುಬದ್ಧ ಪಂದ್ಯಾವಳಿ “ಗಣರಾಜ್ಯೋತ್ಸವ ಕಪ್-2020” ಎಸ್.ಎಸ್.ಸಿ.ಸಿ ಮುಕ್ಕ ತಂಡ ಜಯಿಸಿದೆ.
ವಲಯ ಮಟ್ಟದ ಆಹ್ವಾನಿತ 20 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಲೀಗ್ ಹಂತದ ಪ್ರಬಲ ಪೈಪೋಟಿಗಳ ಬಳಿಕ
ಉಳ್ಳಾಲ,ಬ್ರಹ್ಮಾವರ,ಎಸ್.ಎಸ್.ಸಿ.ಸಿ,ನೇಜಾರ್ ಹಾಗೂ ಕೆ.ಕೆ.ಕೆ
ತಂಡಗಳು ಕ್ವಾಲಿಫೈಯರ್ ಹಂತದಲ್ಲಿ ಮುಖಾಮುಖಿಯಾಗಿದ್ದರು.
ಅಂತಿಮವಾಗಿ ಎಸ್.ಎಸ್.ಸಿ.ಸಿ ಮುಕ್ಕ ಹಾಗೂ ಬ್ರಹ್ಮಾವರ ಫ್ರೆಂಡ್ಸ್ ಫೈನಲ್ ಟಿಕೆಟ್ ಪಡೆದಿದ್ದರು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಕ್ಕ ತಂಡ ಯತೀಶ್ 18 ರನ್ ಸಹಾಯದಿಂದ 6 ಓವರ್ ಗಳಲ್ಲಿ 38 ರನ್ ಗಳ ಗುರಿಯನ್ನು
ಎದುರಾಳಿ ತಂಡಕ್ಕೆ ನೀಡಿತ್ತು.
ರನ್ ಚೇಸಿಂಗ್ ವೇಳೆ ನಾಟಕೀಯ ಕುಸಿತ ಕಂಡ ಬ್ರಹ್ಮಾವರ ಫ್ರೆಂಡ್ಸ್ 7 ವಿಕೆಟ್ ನಷ್ಟಕ್ಕೆ ಕೇವಲ 25 ರನ್ ಗಳಿಸಲಷ್ಟೇ ಶಕ್ತವಾಯಿತು.
ಪ್ರಥಮ ಪ್ರಶಸ್ತಿ ರೂಪದಲ್ಲಿ ಎಸ್.ಎಸ್.ಸಿ.ಸಿ ತಂಡ 50 ಸಾವಿರ ನಗದು,ರನ್ನರ್ಸ್ ಬ್ರಹ್ಮಾವರ ಫ್ರೆಂಡ್ಸ್ 30 ಸಾವಿರ ನಗದು ಸಹಿತ ಮಿರುಗುವ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.
ಅತ್ಯುತ್ತಮ ಸಮವಸ್ತ್ರ ಧರಿಸಿದ ತಂಡಕ್ಕಾಗಿ ಕೊಡಮಾಡಿದ ವಿಶೇಷ ಪ್ರಶಸ್ತಿಗಳು ಫ್ರೆಂಡ್ಸ್ ಕಲ್ಮಾಡಿ,ಫ್ರೆಂಡ್ಸ್ ಉಳ್ಳಾಲ ಹಾಗೂ ಫ್ರೆಂಡ್ಸ್ ಪರ್ಕಳ ಪಾಲಾಯಿತು.
ವೈಯಕ್ತಿಕ ಪ್ರಶಸ್ತಿಯಾಗಿ ಬೆಸ್ಟ್ ಬ್ಯಾಟ್ಸ್‌ಮನ್ ದಿವೇಶ್ ಸಾಲ್ಯಾನ್,ಬೆಸ್ಟ್ ಬೌಲರ್ ಯತೀಶ್ ಸುರತ್ಕಲ್,ಬೆಸ್ಟ್ ಕೀಪರ್ ರಿಜ್ವಾನ್,ಬೆಸ್ಟ್ ಫೀಲ್ಡರ್ ಫಯಾಜ್ ಉಳ್ಳಾಲ,ಬೆಸ್ಟ್ ಕ್ಯಾಚ್ ಪ್ರಸನ್ನ ಕೊರಂಗ್ರಪಾಡಿ ಹಾಗೂ ಪಂದ್ಯಾವಳಿಯುದ್ದಕ್ಕೂ ಸರ್ವಾಂಗೀಣ ಶ್ರೇಷ್ಟ ನಿರ್ವಹಣೆ ತೋರಿದ ಆರಿಫ್ ಮುಕ್ಕ ಸರಣಿ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.
ಸಮಾರೋಪ ಸಮಾರಂಭದಲ್ಲಿ ಎಮ್.ಜಿ.ಎಮ್ ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ವಿಜಯ್,ಬಿ.ಜೆ.ಪಿ ಮುಖಂಡರು ಹಾಗೂ ಕಿಣಿ ಕನ್ಸ್ಟ್ರಕ್ಷನ್ ಮಾಲೀಕರು ರಾಘವೇಂದ್ರ ಕಿಣಿ,ಸೈಮಂಡ್ಸ್ ನ ಗೌರವಾಧ್ಯಕ್ಷ ವಸಂತ ರಾವ್ ದಾನಾ ಜ್ಯುವೆಲ್ಲರ್ಸ್,ಅಧ್ಯಕ್ಷ ನರಸಿಂಹ ಕಿಣಿ,
ಅಮರ್ ನಾಥ್ ಭಟ್,
ಡಾವಿನೋದ್,ಶಶಿಭೂಷಣ್,ಚರಣ್ ಹೆಬ್ಬಾರ್,ಚೇತನ್,ಭಾಸ್ಕರ್ ಆಚಾರ್ಯ ಇನ್ನಿತರರು ಉಪಸ್ಥಿತರಿದ್ದರು.
ಈ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ಪಂದ್ಯಾವಳಿಯ ನೇರ ಪ್ರಸಾರವನ್ನು
M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ಬಿತ್ತರಿಸಿದರೆ,ವೀಕ್ಷಕ ವಿವರಣೆಯಲ್ಲಿ ರಾಜ್ಯದ ಪ್ರಸಿದ್ಧ ವೀಕ್ಷಕ ವಿವರಣೆಕಾರ ಪ್ರಶಾಂತ್ ಅಂಬಲಪಾಡಿ ಹಾಗೂ ರಾಘವೇಂದ್ರ ಮಟಪಾಡಿ ಉಪಸ್ಥಿತರಿದ್ದರು.
ಆರ್.ಕೆ.ಆಚಾರ್ಯ ಕೋಟ.