ಷಷ್ಠಿ ಟ್ರೋಫಿ-2020
ಕಾಳಾವರದಲ್ಲಿ ಫೆಬ್ರವರಿ 1,2 ರಂದು
ಸ್ಪಂದನಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕಾಳಾವರ ಇವರ ಆಶ್ರಯದಲ್ಲಿ ಮಕ್ಕಳ ಯಕ್ಷಗಾನ,ಶಾಸ್ತ್ರೀಯ ಸಂಗೀತ,ನೃತ್ಯ ಸಹಾಯಾರ್ಥವಾಗಿ ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ
(ಸುಬ್ರಹ್ಮಣ್ಯ)ದೇವಸ್ಥಾನ ವಠಾರದಲ್ಲಿ 2 ದಿನಗಳ ಕಾಲ 30 ಗಜಗಳ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾಕೂಟ ಇದಾಗಿದ್ದು,ಆಯಾಯ ಗ್ರಾಮದ ಆಟಗಾರರನ್ನೊಳಗೊಂಡ ತಂಡ ಭಾಗವಹಿಸಬಹುದಾಗಿದೆ.
ಪ್ರಥಮ ಪ್ರಶಸ್ತಿ ರೂಪದಲ್ಲಿ 9,999 ರೂ ನಗದು ಹಾಗೂ ದ್ವಿತೀಯ ಬಹುಮಾನವಾಗಿ 6,666 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತಿದೆ.
ಭಾನುವಾರ 2 ರ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಯಕ್ಷಗಾನ ಕಾರ್ಯಕ್ರಮ ನಡೆಯಲಿದ್ದು,ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
ಆಸಕ್ತ ತಂಡಗಳು 8088195719, 9482772571 ಈ ಮೊಬೈಲ್ ನಂಬರ್ ಗಳನ್ನು
ಸಂಪರ್ಕಿಸಬಹುದಾಗಿದೆ.
ಆರ್.ಕೆ.ಆಚಾರ್ಯ ಕೋಟ.