18.1 C
London
Friday, June 14, 2024
Homeಕ್ರಿಕೆಟ್ಏಕದಿನ ವಿಶ್ವಕಪ್‌ ನಂತರ ಭಾರತ ತಂಡದಲ್ಲಿ ನಾಯಕನ ಬದಲಾವಣೆ ಸುಳಿವುಕೊಟ್ಟ ಬಿಸಿಸಿಐ: ಕನ್ನಡಿಗ ಕೆ ಎಲ್...

ಏಕದಿನ ವಿಶ್ವಕಪ್‌ ನಂತರ ಭಾರತ ತಂಡದಲ್ಲಿ ನಾಯಕನ ಬದಲಾವಣೆ ಸುಳಿವುಕೊಟ್ಟ ಬಿಸಿಸಿಐ: ಕನ್ನಡಿಗ ಕೆ ಎಲ್ ರಾಹುಲ್ ಗೆ ಒಲಿಯಲಿದೆ ಟೆಸ್ಟ್ ತಂಡದ ನಾಯಕತ್ವ…!?

Date:

Related stories

ಕನ್ನಡಿಗ ‘ಜ್ಯಾಕ್’ ಕಟ್ಟಿದ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನವನ್ನೇ ಹೊಡೆದು ಹಾಕಿತು..!

ಮೊನ್ನೆ ಮೊನ್ನೆಯೊಷ್ಟೇ ಅಮೆರಿಕ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ...

ಟೆನ್ನಿಸ್ ಲೋಕಕ್ಕೆ ಮತ್ತೆ ಕಳೆ ತರಬಲ್ಲನಾ ಕಾರ್ಲಿಟೋ….???

ಭಾರತ ತಂಡ ತನ್ನ ಅತ್ಯಂತ ಕಡಿಮೆ ಟಿ 20 ಮೊತ್ತವನ್ನು ಕಾಪಿಟ್ಟುಕೊಂಡು...

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...
spot_imgspot_img
ಟಿ20 ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳಿಂದ ರೋಹಿತ್, ವಿರಾಟ್ ಕೊಯ್ಲಿ ಹೊರಕ್ಕೆ..!!
ಬಲ್ಲ ಮೂಲಗಳ ಪ್ರಕಾರ ರೋಹಿತ್ ಶರ್ಮಾ ಇನ್ನು ಮುಂದೆ ಟಿ20 ಮಾದರಿಯಲ್ಲಿ ಭಾರತ ತಂಡದಲ್ಲಿ ಆಡುವುದಿಲ್ಲ. ವಿರಾಟ್ ಕೊಹ್ಲಿಯವರನ್ನು ಕೂಡ ಟಿ20 ಕ್ರಿಕೆಟ್‌ನಿಂದ ಹೊರಗಿಡಲು ಬಿಸಿಸಿಐ ನಿರ್ಧರಿಸಿದೆಯಂತೆ..!? ಇನ್ನೇನು ಏಕದಿನ ವಿಶ್ವಕಪ್‌ ಪಂದ್ಯಾವಳಿ ಬರಲಿರುವುದರಿಂದ ಪ್ರಮುಖ ಆಟಗಾರರಲ್ಲಿ ಒತ್ತಡವನ್ನು ಕಡಿಮೆ ಮಾಡುವ ನೆಪದಲ್ಲಿ ಇಬ್ಬರೂ ಹಿರಿಯ ಆಟಗಾರರನ್ನು ತಂಡದಿಂದ ತೆರೆಮರೆಗೆ ಸರಿಸಲು ಮುಂದಾಗಿದೆಯಂತೆ ಬಿಸಿಸಿಐ…?
ಟಿ20 ನಾಯಕತ್ವ ಬದಲಾವಣೆ ಬಗ್ಗೆ ಬಿಸಿಸಿಐ ಅಧಿಕೃತ ಘೋಷಣೆ ಮಾಡಿಲ್ಲವಾದರೂ ಬಲ್ಲ ಮೂಲಗಳ ಪ್ರಕಾರ ಹಾರ್ದಿಕ್ ಪಾಂಡ್ಯ ತಂಡದ ನಾಯಕನಾಗಿ ಮುಂದುವರೆಯುವುದು ಖಚಿತವಾಗಿದೆ. ಏಕದಿನ ಮಾದರಿಗೂ  ಉಪನಾಯಕನ ಸ್ಥಾನದಿಂದ ಕೆಎಲ್‌ ರಾಹುಲ್‌ರನ್ನು ಕೈಬಿಟ್ಟು ಹಾರ್ದಿಕ್ ಪಾಂಡ್ಯರನ್ನು ಉಪನಾಯಕರನ್ನಾಗಿ ಮಾಡಿದೆ.
*ನಾಯಕನಾಗಿ ಪಾಂಡ್ಯ ಉತ್ತಮ ಪ್ರದರ್ಶನ*
ಈಗಾಗಲೇ ಹಾರ್ದಿಕ್ ಪಾಂಡ್ಯ ಟಿ20 ಮಾದರಿಯಲ್ಲಿ ನಾಯಕನಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಯಸ್ಸಿನಲ್ಲಿ ಚಿಕ್ಕವನಾದರೂ ನಾಯಕನಾಗುವ ಎಲ್ಲಾ ಶಕ್ತಿ ಪಾಂಡ್ಯನಿಗಿದೆ ತನ್ನ ನಡತೆಯಲ್ಲೂ ಸಾಕಷ್ಟು ಸುಧಾರಿಸಿದ್ದಾರೆ. ರೋಹಿತ್ ಶರ್ಮಾ ನಂತರ ಭಾರತ ತಂಡದ ನಾಯಕತ್ವಕ್ಕೆ ಪಾಂಡ್ಯನಿಗಿಂತ ಉತ್ತಮ ಆಯ್ಕೆ ಇಲ್ಲ ಆತನಿಗೆ ಬೆಂಬಲ ನೀಡಬೇಕು’ ಎಂದು ಬಿಸಿಸಿಐನ ಪದಾಧಿಕಾರಿಗಳು ಹೇಳಿದ್ದಾರೆ.
ಟಿ20 ವಿಶ್ವಕಪ್ ಮುಕ್ತಾಯದ ನಂತರ ನೆಡೆದ ಟಿ20 ಸರಣಿಗಳಲ್ಲಿ ಹಾರ್ದಿಕ್ ಪಾಂಡ್ಯ ನಾಯಕರಾಗಿ ತಂಡವನ್ನು ಮುನ್ನೆಡೆಸಿ ಯಶಸ್ವಿಯಾಗಿದ್ದಾರೆ. ಟಿ20 ವಿಶ್ವಕಪ್‌ ನಂತರ ಪಾಂಡ್ಯ ಸಾರಥ್ಯದಲ್ಲಿ  ಆಡಿರುವ ಎರಡು ಟಿ20 ಸರಣಿಯನ್ನು ಭಾರತ ತನ್ನ ಮಡಿಲಿಗೆ ಹಾಕಿಕೊಂಡಿದೆ.
*ಟೆಸ್ಟ್ ತಂಡಕ್ಕೆ ಕನ್ನಡಿಗ ಕೆಎಲ್ ರಾಹುಲ್ ನಾಯಕ..!?*
ಮುಂದಿನ ದಿನಗಳಲ್ಲಿ ಭಾರತದ ಟೆಸ್ಟ್ ತಂಡದ ನಾಯಕರಾಗಲು ಅರ್ಹತೆ ಇರುವ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ರೇಸ್‌ನಲ್ಲಿದ್ದಾರೆ. ಪಂತ್‌ ಸದ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯ ಹಾಸಿಗೆಯಲ್ಲಿ ಸುಧಾರಿಸಿಕೊಳ್ಳುತ್ತಿರುವ ಕಾರಣಕ್ಕಾಗಿ ಅವರು ಯಾವಾಗ ಕ್ರಿಕೆಟ್‌ಗೆ ಮರಳಲಿದ್ದಾರೆ ಎಂದು ಹೇಳುವುದು ಕಷ್ಟವಾಗಿದೆ. ಈ ಕಾರಣದಿಂದಲೇ
ಕೆಎಲ್ ರಾಹುಲ್‌  ಟೆಸ್ಟ್ ತಂಡದ ನಾಯಕನಾಗಿ ಆಯ್ಕೆಯಾದರು ಅವರು ಬಿಸಿಸಿಐಗೆ ನಂಬಿಕೆ ಬರುವಂತಹ ಪ್ರದರ್ಶನ ನೀಡಬೇಕಿದೆ ಅಷ್ಟೇ.. ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ರಾಹುಲ್ ನಾಯಕತ್ವದಲ್ಲಿ ಭಾರತ ಸರಣಿ ಗೆದ್ದರು, ನಾಯಕನಾಗಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.
ಏಕದಿನ ವಿಶ್ವಕಪ್ ನಂತರ ಬಿಸಿಸಿಐ, ರೋಹಿತ್ ಶರ್ಮಾ ಮತ್ತು ಕೆಎಲ್‌ ರಾಹುಲ್ ಜೊತೆ ಚರ್ಚೆ ನಡೆಸಿ ಈ ಬಗ್ಗೆ ತೀರ್ಮಾನಿಸಲಿದೆ.
ರೋಹಿತ್ ಶರ್ಮಾ ಈಗಾಗಲೇ 36 ವರ್ಷ ವಯಸ್ಸಿನವರಾಗಿದ್ದಾರೆ. ಅವರು ಇನ್ನೂ ಹೆಚ್ಚು ದಿನಗಳ ಕಾಲ ಕ್ರಿಕೆಟ್ ಆಡುವ ಸಾಧ್ಯತೆಯಿಲ್ಲ. 2023ರ ಏಕದಿನ ವಿಶ್ವಕಪ್‌ ಗೆದ್ದರೆ, ರೋಹಿತ್ ಶರ್ಮಾ ನಿವೃತ್ತಿ ಘೋಷಿಸುವ ಸಾಧ್ಯತೆ ಕೂಡ ಇದ್ದು, ಬಿಸಿಸಿಐ ಈಗಿನಿಂದಲೇ ಎಲ್ಲಾ ವಿಭಾಗದ ಕ್ರಿಕೆಟ್ ನ ನಾಯಕತ್ವಕ್ಕೆ ಹಲವು ಬದಲಾವಣೆ ಮಾಡಲು ಸಜ್ಜಾಗಿನಿಂತಿದೆ ಅದರಲ್ಲೂ ಭಾರತದ ಕ್ರಿಕೆಟ್ ಅಂಗಳದಲ್ಲಿ ಸಾಕಷ್ಟು ಯುವ ಪ್ರತಿಭೆಗಳು  ಉತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಯಾಗುವ ಕನಸು ಕಾಣುತ್ತ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಸಾಕಷ್ಟು ಯುವ  ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಆಯ್ಕೆ ಸಮಿತಿಗೆ ಯಾರನ್ನು ಆಯ್ಕೆ ಮಾಡಬೇಕೆಂದು ದಿಕ್ಕುಕಾಣದಂತೆ ಕೈಕಟ್ಟಿ ಕೂಳಿತಿದೆ.ಈ ಕಾರಣದಿಂದಲೇ ಬಿಸಿಸಿಐ ಮೂರು ವಿಭಾಗದ ಕ್ರಿಕೆಟ್ ಗೆ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ಆಯ್ಕೆ ಮಾಡುವ ಸಲುವಾಗಿ ಮೂರು ವಿಭಾಗದಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಿ ಯುವ ಆಟಗಾರಿಗೆ ಅವಕಾಶ ಮಾಡಿಕೊಡುತ್ತಿದೆ. ಮೂರು ರಾಷ್ಟ್ರೀಯ ತಂಡವನ್ನು ಮಾಡುವಷ್ಟರ ಮಟ್ಟಿಗೆ  ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಆಟಗಾರ ದಂಡೆ ಭಾರತದ ಕ್ರಿಕೆಟ್ ಅಂಗಳದಲ್ಲಿ ಪ್ರಜ್ವಲಿಸುತ್ತಿದ್ದಾರೆ. ಯಾರನ್ನು ಆಯ್ಕೆ ಮಾಡಬೇಕೆನ್ನುವುದು ಮಾತ್ರ ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿದೆ.
 ಒಟ್ಟಿನಲ್ಲಿ ಬರಲಿರುವ ಏಕದಿನ ವಿಶ್ವಕಪ್ ಪಂದ್ಯಾವಳಿಯ ನಂತರ ಬಿಸಿಸಿಐ ರಾಷ್ಟ್ರೀಯ  ಮೂರು ವಿಭಾಗದ ಕ್ರಿಕೆಟ್ ತಂಡದಲ್ಲಿ ಬಾರಿ ಬದಲಾವಣೆ ಮಾಡಲಿದೆ. ಮತ್ತು ಯಾರನ್ನೂ ಯಾವ ಯಾವ ಮಾದರಿಯ ಕ್ರಿಕೆಟ್ ತಂಡಗಳಿಗೆ ಅಯ್ಕೆ ಮಾಡಲಿದೆ ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ…!?
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Latest stories

LEAVE A REPLY

Please enter your comment!
Please enter your name here

14 + 9 =