ಕ್ರಿಕೆಟ್ಅಂದು ದ್ರಾವಿಡ್ ಮತ್ತು ಲಕ್ಷ್ಮಣ್ ಮೈಯಲ್ಲಿ ಆವೇಶ ಬಂದಿತ್ತು!

ಅಂದು ದ್ರಾವಿಡ್ ಮತ್ತು ಲಕ್ಷ್ಮಣ್ ಮೈಯಲ್ಲಿ ಆವೇಶ ಬಂದಿತ್ತು!

-

- Advertisment -spot_img
2001ರ ಆ ಕೊಲ್ಕತ್ತಾ ಟೆಸ್ಟ್ ಪಂದ್ಯವನ್ನು ಮರೆಯಲು ಸಾಧ್ಯವೇ ಇಲ್ಲ! 
———————————–
ಮೊನ್ನೆ ಮಂಗಳವಾರ ಮುಗಿದು ಹೋದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡಗಳ ನಡುವಿನ ಟೆಸ್ಟ್ ಪಂದ್ಯವು ಎರಡು ಪ್ರಮುಖವಾದ  ಕಾರಣಗಳಿಗೆ ದಾಖಲೆಯನ್ನು  ಬರೆಯಿತು. ಮೊದಲನೇ ದಾಖಲೆ ಎಂದರೆ ನ್ಯೂಜೀಲಾಂಡ್ ಒಂದು ರನ್ ಅಂತರದಲ್ಲಿ ಆ ಟೆಸ್ಟ್ ಪಂದ್ಯವನ್ನು ಗೆದ್ದದ್ದು! ಇತಿಹಾಸದಲ್ಲಿ ಇದು ಅಂತಹ  ಕೇವಲ ಎರಡನೇ ದೃಷ್ಟಾಂತ ಆಗಿತ್ತು!
ಅದೇ ರೀತಿ ಫಾಲೋ ಆನ್ ಪಡೆದ ನಂತರವೂ ನ್ಯೂಜಿಲೆಂಡ್ ಈ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದ್ದು! ಇದು ಕ್ರಿಕೆಟ್ ಇತಿಹಾಸದಲ್ಲಿ ಕೇವಲ  ನಾಲ್ಕನೆಯ ದೃಷ್ಟಾಂತ ಆಗಿತ್ತು!
ಅದರಲ್ಲಿ ಒಂದು ದೃಷ್ಟಾಂತವು  ಭಾರತಕ್ಕೇ ಸಂಬಂಧ ಪಟ್ಟದ್ದು ಅನ್ನುವಾಗ ನಾವು ನಿಜವಾಗಿ
ರೋಮಾಂಚಕತೆಯ ಪರಾಕಾಷ್ಠೆ ತಲುಪುತ್ತೇವೆ! ಅದರಲ್ಲೂ ಎದುರಾಳಿಯು ಆಗಿನ ಟೆಸ್ಟ್ ರಾಂಕಿಂಗ್ ನಂಬರ್ ಒನ್ ಟೀಮ್  ಆಸ್ಟ್ರೇಲಿಯಾ ಅಂದರೆ ಭಾರತದ ಗೆಲುವಿನ ತೂಕವು ಇನ್ನೂ  ಹೆಚ್ಚುತ್ತದೆ!
ಓವರ್ ಟು ಈಡನ್ ಗಾರ್ಡನ್ಸ್, ಕೊಲ್ಕತ್ತಾ! 
——————————
2001ರ ಮಾರ್ಚ್ 11-15 !
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣ!
ಎದುರಾಳಿ ತಂಡಗಳು ಆಸ್ಟ್ರೇಲಿಯಾ ಮತ್ತು ನಮ್ಮ ಭಾರತ!
ವಿಶೇಷವಾಗಿ ಉಲ್ಲೇಖ ಮಾಡಬೇಕಾದರೆ ಆಸ್ಟ್ರೇಲಿಯಾ ಸ್ಟೀವ್ ವ್ಹಾ ನಾಯಕತ್ವದಲ್ಲಿ ಆಗ  ವಿಶ್ವದ ನಂಬರ್ ಒನ್ ಕ್ರಿಕೆಟ್ ತಂಡ ಆಗಿತ್ತು! ಅವರು ಆಗಲೇ 16 ಟೆಸ್ಟ್ ಪಂದ್ಯಗಳನ್ನು ಸತತವಾಗಿ ಗೆದ್ದು ವಿಶ್ವದಾಖಲೆ ಮಾಡಿಯಾಗಿತ್ತು! ಕೊಲ್ಕತ್ತ ಪಂದ್ಯವನ್ನು ಗೆದ್ದರೆ ಅದು ಅವರ ಸತತ 17ನೇ ಟೆಸ್ಟ್ ಗೆಲುವು ಆಗುತ್ತಿತ್ತು!
ಇನ್ನು ಭಾರತೀಯ ತಂಡವು ಸೌರವ್ ಗಂಗೂಲಿ ನಾಯಕತ್ವದಲ್ಲಿ ನಿಧಾನಕ್ಕೆ ಅರಳುತ್ತಿದ್ದ ಕ್ರಿಕೆಟ್ ತಂಡ ಆಗಿತ್ತು. ಸಚಿನ್, ದ್ರಾವಿಡ್, ಲಕ್ಷ್ಮಣ್, ಗಂಗೂಲಿ ತಂಡದ ಬಲಿಷ್ಠ ಆಟಗಾರರು. ಆದರೆ ಸ್ಥಿರವಾದ  ಪ್ರದರ್ಶನದಲ್ಲಿ ಭಾರತವು ತುಂಬಾ ಹಿಂದೆ ಇತ್ತು!
ಟಾಸ್ ಗೆದ್ದು ಆಸೀಸ್ ಬ್ಯಾಟಿಂಗ್ ಆಯ್ಕೆ ಮಾಡಿತ್ತು!
———————————-
ಮೊದಲು ಬ್ಯಾಟಿಂಗ್ ಆರಿಸಿಕೊಂಡಿದ್ದ ಆಸೀಸ್ ನಾಯಕ ಸ್ಟೀವ್ ವ್ಹಾ ಅವರ ಶತಕ ಮತ್ತು ಮಾಥ್ಯು ಹೇಡನ್ ಅವರ 97 ರನ್ ಬೆಂಬಲದಿಂದ ಒಟ್ಟು 445 ರನ್ ಗಳಿಸಿತ್ತು! ಸ್ಪಿನ್ನರ್ ಹರಭಜನ್ ಸಿಂಗ್ ಅವರು ಆರು ವಿಕೆಟ್ ಪಡೆದರು! ನಂತರ ಬ್ಯಾಟಿಂಗ್ ಮಾಡಲು ಇಳಿದ ಭಾರತೀಯ ಕ್ರಿಕೆಟ್ ತಂಡವು ಇಸ್ಪೀಟಿನ ಎಲೆಗಳ ಹಾಗೆ ಉದುರುತ್ತ ಹೋಗಿ 171ಕ್ಕೆ  ಆಲೌಟ್ ಆಯಿತು! ಸಹಜವಾಗಿ ಭಾರತ ತಂಡವು ಫಾಲೋ ಆನ್ ಪಡೆಯಿತು. ಮೊದಲ ಇನ್ನಿಂಗ್ಸನ  274 ರನ್ ದೊಡ್ಡ ಹಿನ್ನಡೆಯನ್ನು ಭಾರತವು ದಾಟಬೇಕಾಗಿತ್ತು!
ಮೂರನೇ ದಿನದ ಅಂತ್ಯಕ್ಕೆ ಭಾರತದ ಸೋಲು ಖಚಿತವಾಗಿತ್ತು! 
———————————-
ಇನ್ನಿಂಗ್ಸ್ ಕೊರತೆಯಿಂದ ದ್ವಿತೀಯ ಇನ್ನಿಂಗ್ಸ್ ಆರಂಭ ಮಾಡಿದ ಭಾರತ ದ್ವಿತೀಯ ಇನ್ನಿಂಗ್ಸನಲ್ಲಿ ಕೂಡ ಚೇತರಿಕೆಯನ್ನು ಕಾಣಲಿಲ್ಲ. ಆರಂಭಿಕ ದಾಂಡಿಗರು, ಸಚಿನ್, ಗಂಗೂಲಿ ಹೀಗೆ ನಾಲ್ಕು ಪ್ರಮುಖ ವಿಕೆಟಗಳ ಪತನ ಆದಾಗ ಭಾರತ ಮಾಡಿದ್ದ ಒಟ್ಟು ಸ್ಕೋರ್ 232/4.
ಮೊದಲ ಇನ್ನಿಂಗ್ಸನ ಕೊರತೆಯನ್ನು  ನೀಗಿಸಲು ಇನ್ನೂ 42 ರನ್  ಉಳಿದು ಹೋಗಿತ್ತು!
ಆಗ ಐದನೇ ವಿಕೇಟಿಗೆ ಜೊತೆ ಆದವರು ಸ್ಟೈಲಿಶ್ ಆಟಗಾರ ವಿ ವಿ ಎಸ್ ಲಕ್ಷ್ಮಣ್ ಮತ್ತು ಭಾರತೀಯ ಕ್ರಿಕೆಟಿನ ಗೋಡೆ ಎಂದೇ ಕೀರ್ತಿಯನ್ನು ಪಡೆದ ರಾಹುಲ್ ದ್ರಾವಿಡ್. ಮುಂದೆ ನಡೆದದ್ದು ಎಲ್ಲವೂ ಇತಿಹಾಸ!
ಮೂರನೇ ದಿನದ ಅಂತ್ಯಕ್ಕೆ ಲಕ್ಷ್ಮಣ್ ಶತಕ ಪೂರ್ತಿ ಮಾಡಿದ್ದರು.  (ಅಜೇಯ 109). ದ್ರಾವಿಡ್ ತಾಳ್ಮೆಯ ಪರ್ವತವೇ ಆಗಿ ಕ್ರೀಸಲ್ಲಿ ಇದ್ದರು (ಅಜೇಯ 7).
ನಾಲ್ಕನೆಯ ದಿನ ಒಂದೇ ಒಂದು ವಿಕೆಟ್ ಪತನ ಆಗಲೇ ಇಲ್ಲ!
———————————–
ಈಡನ್ ಗಾರ್ಡನ್ಸನಲ್ಲಿ ನಾಲ್ಕನೇ ದಿನ ಅವರಿಬ್ಬರ
ಜೊತೆಯಾಟವನ್ನು ಮುರಿಯಲು ಆಸೀಸ್ ಎಲ್ಲ ಪ್ರಯತ್ನ ಮಾಡಿತು.  ಬೆವರು ಹರಿಸಿ ಜಪ್ಪಯ್ಯ ಅಂದರೂ ವಿಕೆಟ್ ಕೀಳಲು ಆಗಲೇ ಇಲ್ಲ! ಆಸೀಸ್ ಒಂಬತ್ತು ಬೌಲರ್ಸ್ ಪ್ರಯೋಗ ಮಾಡಿದರೂ ಫಲಿತಾಂಶ ಮಾತ್ರ ಸೊನ್ನೆ ! ಗ್ಲೆನ್ ಮ್ಯಾಕಗ್ರಾಥ್, ಶೇನ್ ವಾರ್ನ್, ಗಿಲ್ಲೆಪ್ಸಿ, ಕ್ಯಾಸ್ಪರೋವಿಚ್ ಮೊದಲಾದ ವಿಶ್ವಮಟ್ಟದ ಬೌಲರ್ಸ್ ಎಷ್ಟೇ ಪ್ರಯತ್ನಪಟ್ಟರೂ ಅವರಿಬ್ಬರನ್ನು 608ರವರೆಗೂ ಪ್ರತ್ಯೇಕ ಮಾಡಲು ಆಗಲಿಲ್ಲ! ಅಂದರೆ ಲಕ್ಷ್ಮಣ್ ಮತ್ತು ದ್ರಾವಿಡ್ ಸೇರಿಕೊಂಡು 376 ರನಗಳ ವಿಶ್ವದಾಖಲೆಯ ಜೊತೆಯಾಟವನ್ನು ಅಂದು ಪೂರ್ತಿ ಮಾಡಿದ್ದರು!
ಲಕ್ಷ್ಮಣ್ ಮತ್ತು ದ್ರಾವಿಡ್ ಮೈಯಲ್ಲಿ ಅಂದು ಆವೇಶ ಬಂದಿತ್ತು! 
———————————-
ಲಕ್ಷ್ಮಣ್ ಅವರ ಕೊಡುಗೆ 452 ಎಸೆತಗಳಲ್ಲಿ 281 ರನ್, ಆದರೆ ದ್ರಾವಿಡ್ ಅವರ ಕೊಡುಗೆ 353 ಎಸೆತಗಳಲ್ಲಿ 180 ರನ್! ಇವರಿಬ್ಬರ 376 ರನ್ ಜೊತೆಯಾಟದಿಂದ ಭಾರತವು ತನ್ನ ಫಾಲೋ ಆನ್ ಇನ್ನಿಂಗ್ಸನ್ನು 657/7ರವರೆಗೆ ವಿಸ್ತರಿಸಿ ಡಿಕ್ಲೇರ್ ಮಾಡಿಕೊಂಡಿತ್ತು!
ಆಸೀಸ್ ತನ್ನ ಎರಡನೇ
ಇನ್ನಿಂಗ್ಸನಲ್ಲಿ 212 ರನ್ನಿಗೆ ಆಲೌಟ್ ಆಗಿ 171ರನ್ ಅಂತರದಲ್ಲಿ ಸೋತಿತು!
ಹರಭಜನ್ ಸಿಂಗ್ ಎರಡೂ ಇನ್ನಿಂಗ್ಸಲ್ಲಿ ಒಟ್ಟು 13 ವಿಕೆಟ್ ಪಡೆದರು! ಸಚಿನ್ ತೆಂಡೂಲ್ಕರ್ ಎರಡನೇ ಇನಿಂಗ್ಸನ ಮೂರು ಅಮೂಲ್ಯ ವಿಕೆಟ್ ಪಡೆದರು!
ಆ ಟೆಸ್ಟ್ ಪಂದ್ಯವನ್ನು ಭಾರತವು ಎಂದಿಗೂ ಮರೆಯಲು ಸಾಧ್ಯವಿಲ್ಲ!
———————————-
ಲಕ್ಷ್ಮಣ್ ಮತ್ತು ದ್ರಾವಿಡ್ ಅವರ ಆ  ಸ್ಫೂರ್ತಿದಾಯಕ ಇನ್ನಿಂಗ್ಸನ  ಮೂಲಕ ಭಾರತವನ್ನು ಗೆಲ್ಲಿಸಿದ್ದು ನಿಜಕ್ಕೂ ಸ್ಮರಣೀಯವಾದ ಸಾಧನೆ! ಆಸೀಸ್ ತಂಡದ ಸತತ ಗೆಲುವಿನ ನಾಗಾಲೋಟಕ್ಕೆ ಪೂರ್ಣ ವಿರಾಮ ಹಾಕಿದ ಸಾಧನೆಯನ್ನು ಕೂಡ ಬಾರತವು ಅಂದು ಮಾಡಿತ್ತು! 2001ರ ಆ ಕೊಲ್ಕತ್ತ ಟೆಸ್ಟ್ ಪಂದ್ಯವನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ!

LEAVE A REPLY

Please enter your comment!
Please enter your name here

fourteen + 13 =

Latest news

PinoCasino Quick‑Hit Slots: Snelle Spelletjes & Directe Spanning

InleidingPinoCasino brengt een verse golf van snel‑paced slotactie die perfect in je pocket‑size vrije tijd past. Of je nu...

Zoome Casino: Quick Spin Wins and Rapid Gameplay

Welcome to the Fast‑Paced World of Zoome CasinoWhen you log into Zoome Casino, the first thing you notice is...

BoomsBet Casino – The Pulse of High‑Intensity Slot Play

Introductie tot Short‑Burst Gaming bij BoomsBetAls je houdt van adrenaline en directe bevrediging zoekt, biedt BoomsBet Casino een speelterrein...

ಬಿಹಾರದ ಕನಸುಗಳಿಗೆ ಹೊಸ ರೆಕ್ಕೆ ನೀಡಿದ ವೈಭವ್ ಸೂರ್ಯವಂಶಿ

ಬಿಹಾರದ ಕನಸುಗಳಿಗೆ ಹೊಸ ರೆಕ್ಕೆ ನೀಡಿದ ವೈಭವ್ ಸೂರ್ಯವಂಶಿ ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ; ಅದು ಜನರ ಭಾವನೆ ಮತ್ತು ಗುರುತಿನ ಭಾಗವಾಗಿದೆ. ಆದರೆ ದೀರ್ಘಕಾಲದವರೆಗೆ ಬಿಹಾರ...
- Advertisement -spot_imgspot_img

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026 ಮಂಗಳೂರು: ಜಿಎಸ್‌ಬಿ ಸಮುದಾಯದ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಿರುವ ಪ್ರತಿಷ್ಠಿತ **ಪ್ಯಾಂಥರ್ಸ್ ಸೂಪರ್...

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 96 ರನ್: ವೈಭವ್ ಸೂರ್ಯವಂಶಿಯ ಸ್ಫೋಟಕ ಪ್ರತಿಭೆಗೆ ಕ್ರಿಕೆಟ್ ಲೋಕ ಫಿದಾ 15 ವರ್ಷದ...

Must read

- Advertisement -spot_imgspot_img

You might also likeRELATED
Recommended to you