ಭರವಸೆಯ ಬೆಳಕುಕೋಲಾರ ಶ್ರೀನಿವಾಸಪುರದ ಸಮಾಜಸೇವಕಿ ಡಾ.ಗಾಯತ್ರಿ ಮುತ್ತಪ್ಪ ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಕೋಲಾರ ಶ್ರೀನಿವಾಸಪುರದ ಸಮಾಜಸೇವಕಿ ಡಾ.ಗಾಯತ್ರಿ ಮುತ್ತಪ್ಪ ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

-

- Advertisment -spot_img
ಎಸ್.ಎನ್‌.ಎಸ್ ಕಲಾ ಸಂಗಮ ಬೆಂಗಳೂರು ಇವರು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸದಾಶಿವನಗರದ ವೀರಶೈವ ಲಿಂಗಾಯತ್ ಸಭಾಭವನದಲಿ ಆಯೋಜಿಸಿದ ರಾಜ್ಯ ಮಟ್ಟದ ಕಲಾಸಂಗಮ‌ ಕಾರ್ಯಕ್ರಮದಲ್ಲಿ
ಕೋಲಾರದ ಸಮಾಜಸೇವಕಿ ಡಾ.ಗಾಯತ್ರಿ ಮುತ್ತಪ್ಪ ಇವರ ಸಮಾಜಸೇವೆಯನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.
ಕೋಲಾರದ ಗಣಿನಾಡಿನ ಶ್ರೀನಿವಾಸಪುರ ತಾಲ್ಲೂಕಿನ ಮಣಿಗಾನಹಳ್ಳಿಯಲ್ಲಿ ಹುಟ್ಟಿದ ಗಾಯತ್ರಿ ಮುತ್ತಪ್ಪ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶ್ರೀನಿವಾಸಪುರದಲ್ಲಿ ಪೂರೈಸಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾಂ ಇಲ್ಲಿ ಇಂಜಿನಿಯರಿಂಗ್ ಪೂರೈಸಿ, 2011 ರಲ್ಲಿ ಕಾರ್ಯನಿರ್ವಾಹಕ ಹುದ್ದೆಯಲ್ಲಿ ತೊಡಗಿಸಿಕೊಂಡ ಇವರು 2016 ರಲ್ಲಿ ತನ್ನದೇ ನಾಯಕತ್ವದಲ್ಲಿ “ಸ್ಟಾರ್ ವರ್ಟೆಕ್ಸ್” ಅನ್ನುವ ಸ್ವಂತ ಸಂಸ್ಥೆಯನ್ನು ಹುಟ್ಟು ಹಾಕಿ ಅದರಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು.
ಕ್ರೀಡೆ ಹಾಗೂ ಸಮಾಜ ಸೇವೆಯಲ್ಲಿ
 ನಿರಂತರವಾಗಿ ತನ್ನನ್ನು ತಾನು ತೊಡಗಿಸಿಕೊಂಡ ಇವರು ಕೊರೋನದ ಸಂಕಷ್ಟದ ನಡುವೆಯೂ ಮನೆ ಮನೆಗೆ ತೆರಳಿ ದಿನ ನಿತ್ಯದ ರೇಷನ್ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.2019 ರಲ್ಲಿ ಬಾದಾಮಿಯ ನೆರಪೀಡಿತ ಪ್ರದೇಶಕ್ಕೆ ತೆರಳಿ ಸಂತ್ರಸ್ತರಿಗೆ ಸಹಾಯಹಸ್ತ ನೀಡಿರುತ್ತಾರೆ.
ಇತ್ತೀಚೆಗೆ ಟಿ. ವಿ. 9 ರಲ್ಲಿ ಪ್ರಸಾರವಾದ ನೆಲಮಂಗಲದ ಗೌರಮ್ಮ ಎನ್ನುವ ಮಹಿಳೆಯ ಸಂಕಷ್ಟಕ್ಕೆ ಮರುಗಿ 3 ತಿಂಗಳ ರೇಷನ್ ಸಾಮಗ್ರಿಗಳನ್ನು ನೀಡಿದ್ದು ಅಲ್ಲದೆ ಅನೇಕ ನೊಂದ ಬಡವರಿಗೆ ಸಹಾಯ ನೀಡುತ್ತಿರುವ ಇವರು ಪ್ರಚಾರ ಬಯಸದೆ ತೆರೆಮರೆಯಲ್ಲಿಯೇ ಕೆಲಸವನ್ನು ಪ್ರೀತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೇಕಾಗುವ ಪುಸ್ತಕ ಮತ್ತು ಕ್ರೀಡಾ ಪರಿಕರಗಳನ್ನು ನೀಡಿ ಸಹಕರಿಸಿದ್ದಾರೆ. ಇವೆಲ್ಲದರ ಜೊತೆಗೆ ನೊಂದ ಅನೇಕರಿಗೆ ತನ್ನ ಸಂಸ್ಥೆಯಲ್ಲಿ ಕೆಲಸ ನೀಡುವ ಮೂಲಕ ಅವರ ಭವಿಷ್ಯಕ್ಕೆ ಸಹಕಾರಿಯಾಗಿದ್ದಾರೆ.
ಇತ್ತೀಚೆಗೆ ಇವರ ಸಮಾಜಮುಖಿ ಕೆಲಸ ಮತ್ತು ತೊಡಗುವಿಕೆಯನ್ನು ಗಮನಿಸಿ “UNIVERSAL DEVELOPMENT COUNCIL ” ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

two × three =

Latest news

“ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ನಿಟ್ಟೆಯ ವಿದ್ಯಾ ಸಂಸ್ಥೆಯ ಹರಿಕಾರ ವಿನಯ್ ಹೆಗ್ಡೆ”-ಹರಿಪ್ರಸಾದ್ ರೈ

"ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ನಿಟ್ಟೆಯ ವಿದ್ಯಾ ಸಂಸ್ಥೆಯ ಹರಿಕಾರ ವಿನಯ್ ಹೆಗ್ಡೆ"-ಹರಿಪ್ರಸಾದ್ ರೈ ಕಾರ್ಕಳ- ಇಲ್ಲಿನ ನಿಟ್ಟೆ ವಿಶ್ವ ವಿದ್ಯಾಲಯದ ಅಧೀನದಲ್ಲಿರುವ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಅಂತರ್...

ವಿಕ್ರಮ್ ಕ್ರಿಕೆಟ್ ಕ್ಲಬ್ ವತಿಯಿಂದ ಪ್ರೀ ಸಮ್ಮರ್ ಕ್ರಿಕೆಟ್ ತರಬೇತಿ ಶಿಬಿರ

ವಿಕ್ರಮ್ ಕ್ರಿಕೆಟ್ ಕ್ಲಬ್ ವತಿಯಿಂದ ಪ್ರೀ ಸಮ್ಮರ್ ಕ್ರಿಕೆಟ್ ತರಬೇತಿ ಶಿಬಿರ ಬೈಂದೂರು: ವಿಕ್ರಮ್ ಕ್ರಿಕೆಟ್ ಕ್ಲಬ್, ಬೈಂದೂರು ವತಿಯಿಂದ ಯುವಕರಲ್ಲಿ ಕ್ರಿಕೆಟ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ...

ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ರಿ.ಪಿತ್ರೋಡಿ ಇವರ 19 ನೇ ವರ್ಷದ ಪಿ.ಪಿ‌‌.ಎಲ್ ಸಂಭ್ರಮ

ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ರಿ.ಪಿತ್ರೋಡಿ ಇವರ 19 ನೇ ವರ್ಷದ ಪಿ.ಪಿ‌‌.ಎಲ್ ಸಂಭ್ರಮ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್, ಪಿತ್ರೋಡಿ ಸಂಸ್ಥೆಯ ವತಿಯಿಂದ ಪ್ರತಿವರ್ಷದಂತೆ ಈ...

ಶ್ರೀ ಜಲವಿನಾಯಕ ಟ್ರೋಫಿ 2026: ಕ್ರಿಕೆಟ್ ಪಂದ್ಯಾವಳಿಗೆ ಸಜ್ಜಾದ ಹುಣಸವಳ್ಳಿ

ಶ್ರೀ ಜಲವಿನಾಯಕ ಟ್ರೋಫಿ 2026: ಕ್ರಿಕೆಟ್ ಪಂದ್ಯಾವಳಿಗೆ ಸಜ್ಜಾದ ಹುಣಸವಳ್ಳಿ ಹುಣಸವಳ್ಳಿ ಹಾಗೂ ಕುರುವಳ್ಳಿ ಪೋಸ್ಟ್, ತೀರ್ಥಹಳ್ಳಿ ತಾಲೂಕು ಕ್ರೀಡಾಭಿಮಾನಿಗಳಿಗೆ ಸಂತಸದ ಸುದ್ದಿ. ಆಗುಂಬೆ ಮತ್ತು ಮುತ್ತೂರು...
- Advertisement -spot_imgspot_img

ಭಾರತೀಯ ತಂಡದಲ್ಲಿ ಸ್ಥಾನಕ್ಕಾಗಿ ಹೋರಾಡಿ ಹೀರೋ ಆದ ಸಂಜು ಸ್ಯಾಮ್ಸನ್ ಕಥೆ

  ಭಾರತೀಯ ತಂಡದಲ್ಲಿ ಸ್ಥಾನಕ್ಕಾಗಿ ಹೋರಾಡಿ ಹೀರೋ ಆದ ಸಂಜು ಸ್ಯಾಮ್ಸನ್ ಕಥೆ ಕ್ರಿಕೆಟ್ ಜೀವನದಲ್ಲಿ ಕೆಲ ಕ್ಷಣಗಳು ಆಟಗಾರನ ಜೀವನವನ್ನೇ ಬದಲಾಯಿಸುತ್ತವೆ. ಆ ಕ್ಷಣಗಳು ನೋವು,...

ಭಾರತ ವಿಶ್ವ ಚಾಂಪಿಯನ್: ಟಿ20 ವಿಶ್ವಕಪ್ ಮತ್ತೆ ಭಾರತಕ್ಕೇ!

  ಭಾರತ ವಿಶ್ವ ಚಾಂಪಿಯನ್: ಟಿ20 ವಿಶ್ವಕಪ್ ಮತ್ತೆ ಭಾರತಕ್ಕೇ! ಟೀಮ್ ಇಂಡಿಯಾ ಇತಿಹಾಸ ಸೃಷ್ಟಿಸಿದೆ. ಹಾಲಿ ಚಾಂಪಿಯನ್ ಆಗಿ ಟಿ20 ವಿಶ್ವಕಪ್ ಉಳಿಸಿಕೊಳ್ಳುವುದರ ಜೊತೆಗೆ, ತವರು ನೆಲದಲ್ಲಿ...

Must read

- Advertisement -spot_imgspot_img

You might also likeRELATED
Recommended to you