ತನ್ವಿ ಕ್ರಿಕೆಟರ್ಸ್ ಇಂದಾವರ ಹಲವಾರು ಪಂದ್ಯಾಕೂಟಗಳನ್ನು ಆಯೋಜಿಸಿದ ಹಾಗೂ ವಿವಿಧೆಡೆ ಪ್ರಶಸ್ತಿ ಜಯಿಸಿದ ಸಂಸ್ಥೆ.ಈ ಸಂಸ್ಥೆ ಡಿಸೆಂಬರ್ 4 ಮತ್ತು 5 ರಂದು ತೀರ್ಥಹಳ್ಳಿ ಇಂದಾವರ ಮಹಾಲಕ್ಷ್ಮಿ ಕ್ರೀಡಾಂಗಣದಲ್ಲಿ 2 ನೇ ವರ್ಷದ ಟೆನಿಸ್ಬಾಲ್ ಸೂಪರ್ 8 ಕ್ರಿಕೆಟ್ ಪಂದ್ಯಾವಳಿ “ಮಹಾಲಕ್ಷ್ಮಿ ಕಪ್-2021” ಆಯೋಜಿಸಿದ್ದಾರೆ.
ಒಟ್ಟು 24 ತಂಡಗಳು ಭಾಗವಹಿಸಲಿದ್ದು ಪ್ರಥಮ ಪ್ರಶಸ್ತಿ ಪಡೆವ ತಂಡ 20,000 ನಗದು,ದ್ವಿತೀಯ ಸ್ಥಾನಿ10,000 ಹಾಗೂ ತೃತೀಯ ಸ್ಥಾನಿ ನಗದು ಬಹುಮಾನದೊಂದಿಗೆ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದು,ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಆಕರ್ಷಕ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ನಿಯಮಗಳು
1-ಪ್ರತಿ ಪಂದ್ಯ 5 ಓವರ್ ಗಳಿಗೆ ಸೀಮಿತವಾಗಿರುತ್ತದೆ.
2-ರಾಡಿ ಎಸೆತಕ್ಕೆ ಅವಕಾಶ ಇರುವುದಿಲ್ಲ.
3-ಡಿಸೆಂಬರ್ 4 ರಂದು ತೀರ್ಥಹಳ್ಳಿ(ತಾ)ಗ್ರಾಮ ಪಂಚಾಯತಿಯ 12 ತಂಡಗಳಿಗೆ ಮಾತ್ರ ಅವಕಾಶ
4-ಡಿಸೆಂಬರ್ 5 ರಂದು ಅಂತರ್ ಜಿಲ್ಲಾಮಟ್ಟದ 12 ತಂಡಗಳಿಗೆ ಮಾತ್ರ ಅವಕಾಶ
5-ಒಂದು ತಂಡದಲ್ಲಿ 9 ಜನ ಆಟಗಾರರಿಗೆ ಅವಕಾಶ ಇರುತ್ತದೆ.
6- ತಂಡಗಳ ನೋಂದಣಿಗೆ 15/11/2021 ಕೊನೆಯ ದಿನಾಂಕವಾಗಿರುತ್ತದೆ.
7-ಪಂದ್ಯವು ಟೈಸ್ ಹಾಕಿ ಆಡಿಸಲಾಗುತ್ತದೆ.
8-ಈ ಪಂದ್ಯಾವಳಿಯಲ್ಲಿ 6+4 ಲೆಗ್ ಬೈಸ್ ಒಳಗೊಂಡಿರುತ್ತದೆ.
9-ಆಟಗಾರರಿಗೆ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 7348891952,9148274414, 7676854730 ನಂಬರ್ ಗಳನ್ನು ಸಂಪರ್ಕಿಸಬಹುದು.