ಕ್ರಿಕೆಟ್ಕೋಲಾರ-ಟೆನಿಸ್ಬಾಲ್ ಕ್ರಿಕೆಟ್ ದಾಖಲೆಯ ಅತಿ ಗರಿಷ್ಠ ನಗದು ಬಹುಮಾನದ ಕ್ರಿಕೆಟ್ ಪಂದ್ಯಾಟ-...

ಕೋಲಾರ-ಟೆನಿಸ್ಬಾಲ್ ಕ್ರಿಕೆಟ್ ದಾಖಲೆಯ ಅತಿ ಗರಿಷ್ಠ ನಗದು ಬಹುಮಾನದ ಕ್ರಿಕೆಟ್ ಪಂದ್ಯಾಟ- ಈ-ಜೋನ್ ಟ್ರೋಫಿ-2022

-

- Advertisment -spot_img
ಕೋಲಾರ ಅಟ್ಯಾಕರ್ಸ್ ತಂಡವನ್ನು‌ ಬಹಳಷ್ಟು ವರ್ಷಗಳ ಕಾಲ‌ ಯಶಸ್ವಿಯಾಗಿ ಮುನ್ನಡೆಸಿದ್ದ ಆಟಗಾರರು,ಕ್ರೀಡಾ ಪ್ರೋತ್ಸಾಹಕರು ಹಾಗೂ ಈ-ಝೋನ್ ಗ್ರೂಪ್ಸ್ ನ‌ ಮಾಲೀಕರಾದ ಬಿ‌.ಆರ್.ಮಂಜುನಾಥ್ ರೆಡ್ಡಿ(ವಡು) ಇವರ ದಕ್ಷ ಸಾರಥ್ಯದಲ್ಲಿ 2022 ಮಾರ್ಚ್ 11,12 ಮತ್ತು 13 ರಂದು ಹೊನಲು ಬೆಳಕಿನಲ್ಲಿ ಕೋಲಾರದಲ್ಲಿ ಈ-ಝೋನ್ ಟ್ರೋಫಿ-2022 ದಾಖಲೆಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ.
ಟೂರ್ನಮೆಂಟ್ ನ ಚಾಂಪಿಯನ್ ತಂಡ 5,05,555,ದ್ವಿತೀಯ ಸ್ಥಾನಿ 2,55,555 ನಗದು ಬಹುಮಾನಗಳೊಂದಿಗೆ ಆಕರ್ಷಕ ಪಾರಿತೋಷಕಗಳು ಜೊತೆಗೆ ಪ್ರತಿಯೊಂದು ಪಂದ್ಯದ ಪಂದ್ಯಶ್ರೇಷ್ಟ ಗೌರವದ ರೂಪದಲ್ಲಿ ಅಚ್ಚರಿಯ ಬಹುಮಾನ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಕೂಡ ಸರ್ಪ್ರೈಸ್ ಆಗಿಯೇ ನೀಡಲಿದ್ದಾರೆ.
ಈ ಹಿಂದೆ 2007 ರಲ್ಲಿ ಹೊನಲು ಬೆಳಕಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದು,
ಸ್ಪಾರ್ಕ್ ಉಡುಪಿ ಪ್ರಥಮ ಪ್ರಶಸ್ತಿಯೊಂದಿಗೆ 2 ಲಕ್ಷ ನಗದು ಬಹುಮಾನ ಹಾಗೂ ಹಾಸನಾಂಬಾ ದ್ವಿತೀಯ ಪ್ರಶಸ್ತಿ ರೂಪದಲ್ಲಿ 1 ಲಕ್ಷ ಬಹುಮಾನವನ್ನು ಜಯಿಸಿತ್ತು.ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡಿ
ಗೌರವಿಸಿದ್ದರು.
2017 ರಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಕೂಟವನ್ನು ಆಯೋಜಿಸಿದ್ದು ಕೋಲಾರದ ಎಲೈಟ್ ತಂಡ ಪ್ರಥಮ ಬಹುಮಾನ ಜಯಿಸಿದ್ದು,ಲಕ್ಷಾಂತರ ನಗದಿನೊಂದಿಗೆ ಕೊನೆಯ ಕ್ಷಣದ  ಅಚ್ಚರಿಯ ಬಹುಮಾನದ ರೂಪದಲ್ಲಿ ವಿಜೇತ ತಂಡದ ನಾಯಕನಿಗೆ R15 ಬೈಕ್ ಹಾಗೂ 11  ಮಂದಿ ಆಟಗಾರರಿಗೆ FZ ಬೈಕ್ ಗಳನ್ನು ನೀಡಿ ದೇಶೀಯ ಕ್ರಿಕೆಟ್ ನಲ್ಲೇ ಪ್ರಪ್ರಥಮ ಬಾರಿಗೆ ದಾಖಲೆ ಬರೆದಿತ್ತು.
ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲಿ ಈ ಹಿಂದೆ ಸಾಂಗ್ಲಿಯಾನ ಟ್ರೋಫಿಯಲ್ಲಿ 5 ಲಕ್ಷ ಬಹುಮಾನ ನೀಡಿ ದಾಖಲೆ ಬರೆದಿದ್ದು,ಈ-ಜೋನ್ ಟ್ರೋಫಿಯಲ್ಲಿ ಅದಕ್ಕಿಂತ ಹೆಚ್ಚಿನ‌ ನಗದು ಬಹುಮಾನ‌ ನೀಡಲಾಗುತ್ತಿದ್ದು ಕ್ರೀಡಾ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ.
ಸ್ಪೋರ್ಟ್ಸ್ ಕನ್ನಡ ಈ ಪಂದ್ಯಾಕೂಟದ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

8 + thirteen =

Latest news

ಮಂಗಳಾಪುರ ಟ್ರೋಫಿ: ಮೇ 9–10ರಂದು ರೋಚಕ ಪಂದ್ಯಗಳ ಕಾದಾಟ 

ಮಂಗಳಾಪುರ ಟ್ರೋಫಿ: ಮೇ 9–10ರಂದು ರೋಚಕ ಪಂದ್ಯಗಳ ಕಾದಾಟ  ಮಂಗಳೂರು: ಮಂಗಳೂರು ನಗರದಲ್ಲಿ ಜಿಎಸ್‌ಬಿ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಕ್ರೀಡಾ ಹಬ್ಬವಾಗಿ **ಮಂಗಳಾಪುರ ಟ್ರೋಫಿ 2026**ಕ್ಕೆ ಕೌಂಟ್‌ಡೌನ್...

ಅಂಬಾಗಿಲು ಜಿಎಸ್‌ಬಿ ಕ್ರಿಕೆಟ್ ಟೂರ್ನಿ:  ವಿಹಾನ್ ಫೈಟರ್ಸ್ ಚಾಂಪಿಯನ್

ಅಂಬಾಗಿಲು ಜಿಎಸ್‌ಬಿ ಕ್ರಿಕೆಟ್ ಟೂರ್ನಿ:  ವಿಹಾನ್ ಫೈಟರ್ಸ್ ಚಾಂಪಿಯನ್ ಅಂಬಾಗಿಲು: ಅಂಬಾಗಿಲು ಎಆರ್ ಫ್ರೆಂಡ್ಸ್ (AR Friends) ವತಿಯಿಂದ ಜಿಎಸ್‌ಬಿ ಟ್ರೋಫಿ ಅಂಬಾಗಿಲು 2026 ಕ್ರಿಕೆಟ್ ಟೂರ್ನಿಯನ್ನು ಇಂದು...

ಅಕ್ಷಯ ಟಿ 20 ಕಪ್-2026 ಪಂದ್ಯಾಟಕ್ಕೆ ಅದ್ಧೂರಿ ಚಾಲನೆ

  ಅಕ್ಷಯ ಟಿ 20 ಕಪ್-2026 ಪಂದ್ಯಾಟಕ್ಕೆ ಅದ್ಧೂರಿ ಚಾಲನೆ ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ ವತಿಯಿಂದ, ಉಡುಪಿ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಹಾಗೂ ಸನ್‌ರೈಸ್ ಕ್ರಿಕೆಟ್ ಅಕಾಡೆಮಿ...

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026 ಉಡುಪಿ: ಅಕ್ಷಯ ಕ್ರಿಕೆಟ್ ಅಕಾಡೆಮಿ, ಉಡುಪಿ ಮತ್ತು ಸನ್‌ರೈಸ್ ಕ್ರಿಕೆಟ್ ಅಕಾಡೆಮಿ, ರಂಗನಪಾಲ್ಕೆ ಇವರ...
- Advertisement -spot_imgspot_img

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026...

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026 ಕಂದಾಯ ಇಲಾಖೆ ಕರ್ನಾಟಕ ರಾಜ್ಯ ಗ್ರಾಮ...

Must read

- Advertisement -spot_imgspot_img

You might also likeRELATED
Recommended to you