ಓಂ ಕ್ರಿಕೆಟರ್ಸ್ ಭದ್ರಾವತಿ ಇವರ ವತಿಯಿಂದ ಭದ್ರಾವತಿಯ ಜನಪ್ರಿಯ ಶಾಸಕರಾದ ಶ್ರೀ.ಬಿ.ಕೆ.ಸಂಗಮೇಶ್ವರ ಇವರ ಆಶ್ರಯದಲ್ಲಿ ಯುವ ಮುಖಂಡರಾದ ಕೆ.ಪಿ.ಗಿರೀಶ್ ಇವರ ಸಾರಥ್ಯದಲ್ಲಿ ಭದ್ರಾವತಿಯಲ್ಲಿ ಮೊಟ್ಟಮೊದಲ ಬಾರಿಗೆ ರಾಜ್ಯ ಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಓಂ ಕಪ್-2021 ಆಯೋಜಿಸಲಾಗಿದೆ.
ಡಿಸೆಂಬರ್ 17,18 ಮತ್ತು 19 ಮೂರು ದಿನಗಳ ಕಾಲ ಭದ್ರಾವತಿಯ ಕನಕ ಮಂಟಪ ಮೈದಾನದಲ್ಲಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯದ ಪ್ರತಿಷ್ಠಿತ 16 ತಂಡಗಳು ಭಾಗವಹಿಸಲಿದ್ದು
ತಂಡಗಳನ್ನು ಮಲ್ನಾಡ್ 8 ತಂಡಗಳು ಮತ್ತು ರಾಜ್ಯ ಟೆನಿಸ್ಬಾಲ್ ಕ್ರಿಕೆಟ್ 8 ತಂಡಗಳು ಹೀಗೆ 2
ವಿಭಾಗಗಳನ್ನಾಗಿ ಮಾಡಲಾಗಿದೆ.ಪ್ರಥಮ ಪ್ರಶಸ್ತಿ ರೂಪದಲ್ಲಿ 1.5 ಲಕ್ಷ ನಗದು,ದ್ವಿತೀಯ 75 ಸಹಸ್ರ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ನೀಡಲಾಗುತ್ತಿದೆ.ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತಿದೆ.
ಟೂರ್ನಮೆಂಟ್ ನೇರ ಪ್ರಸಾರವನ್ನು M.Sports ಬಿತ್ತರಿಸಲಿದೆ.