ಕೋಲಾರ ಅಟ್ಯಾಕರ್ಸ್ ತಂಡವನ್ನು ಬಹಳಷ್ಟು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ್ದ ಆಟಗಾರರು,ಕ್ರೀಡಾ ಪ್ರೋತ್ಸಾಹಕರು ಹಾಗೂ ಈ-ಝೋನ್ ಗ್ರೂಪ್ಸ್ ನ ಮಾಲೀಕರಾದ ಬಿ.ಆರ್.ಮಂಜುನಾಥ್ ರೆಡ್ಡಿ(ವಡು) ಇವರ ದಕ್ಷ ಸಾರಥ್ಯದಲ್ಲಿ 2022 ಮಾರ್ಚ್ 11,12 ಮತ್ತು 13 ರಂದು ಹೊನಲು ಬೆಳಕಿನಲ್ಲಿ ಕೋಲಾರದಲ್ಲಿ ಈ-ಝೋನ್ ಟ್ರೋಫಿ-2022 ದಾಖಲೆಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ.
ಟೂರ್ನಮೆಂಟ್ ನ ಚಾಂಪಿಯನ್ ತಂಡ 5,05,555,ದ್ವಿತೀಯ ಸ್ಥಾನಿ 2,55,555 ನಗದು ಬಹುಮಾನಗಳೊಂದಿಗೆ ಆಕರ್ಷಕ ಪಾರಿತೋಷಕಗಳು ಜೊತೆಗೆ ಪ್ರತಿಯೊಂದು ಪಂದ್ಯದ ಪಂದ್ಯಶ್ರೇಷ್ಟ ಗೌರವದ ರೂಪದಲ್ಲಿ ಅಚ್ಚರಿಯ ಬಹುಮಾನ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಕೂಡ ಸರ್ಪ್ರೈಸ್ ಆಗಿಯೇ ನೀಡಲಿದ್ದಾರೆ.
ಈ ಹಿಂದೆ 2007 ರಲ್ಲಿ ಹೊನಲು ಬೆಳಕಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದು,
ಸ್ಪಾರ್ಕ್ ಉಡುಪಿ ಪ್ರಥಮ ಪ್ರಶಸ್ತಿಯೊಂದಿಗೆ 2 ಲಕ್ಷ ನಗದು ಬಹುಮಾನ ಹಾಗೂ ಹಾಸನಾಂಬಾ ದ್ವಿತೀಯ ಪ್ರಶಸ್ತಿ ರೂಪದಲ್ಲಿ 1 ಲಕ್ಷ ಬಹುಮಾನವನ್ನು ಜಯಿಸಿತ್ತು.ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡಿ
ಗೌರವಿಸಿದ್ದರು.
2017 ರಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಕೂಟವನ್ನು ಆಯೋಜಿಸಿದ್ದು ಕೋಲಾರದ ಎಲೈಟ್ ತಂಡ ಪ್ರಥಮ ಬಹುಮಾನ ಜಯಿಸಿದ್ದು,ಲಕ್ಷಾಂತರ ನಗದಿನೊಂದಿಗೆ ಕೊನೆಯ ಕ್ಷಣದ ಅಚ್ಚರಿಯ ಬಹುಮಾನದ ರೂಪದಲ್ಲಿ ವಿಜೇತ ತಂಡದ ನಾಯಕನಿಗೆ R15 ಬೈಕ್ ಹಾಗೂ 11 ಮಂದಿ ಆಟಗಾರರಿಗೆ FZ ಬೈಕ್ ಗಳನ್ನು ನೀಡಿ ದೇಶೀಯ ಕ್ರಿಕೆಟ್ ನಲ್ಲೇ ಪ್ರಪ್ರಥಮ ಬಾರಿಗೆ ದಾಖಲೆ ಬರೆದಿತ್ತು.
ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲಿ ಈ ಹಿಂದೆ ಸಾಂಗ್ಲಿಯಾನ ಟ್ರೋಫಿಯಲ್ಲಿ 5 ಲಕ್ಷ ಬಹುಮಾನ ನೀಡಿ ದಾಖಲೆ ಬರೆದಿದ್ದು,ಈ-ಜೋನ್ ಟ್ರೋಫಿಯಲ್ಲಿ ಅದಕ್ಕಿಂತ ಹೆಚ್ಚಿನ ನಗದು ಬಹುಮಾನ ನೀಡಲಾಗುತ್ತಿದ್ದು ಕ್ರೀಡಾ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ.
ಸ್ಪೋರ್ಟ್ಸ್ ಕನ್ನಡ ಈ ಪಂದ್ಯಾಕೂಟದ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.