Categories
ಕ್ರಿಕೆಟ್

ಕೋಲಾರ-ಶ್ರೀನಿವಾಸಪುರದಲ್ಲಿ ಕ್ರಿಕೆಟ್ ಹಬ್ಬ-ಉದ್ಯಮಿ ನದೀಮ್ ಅಖ್ತರ್ ಸಾರಥ್ಯದಲ್ಲಿ M.K.S CUP-2022

ಕೋಲಾರ ಶ್ರೀನಿವಾಸಪುರದ ಪ್ರಸಿದ್ಧ ಉದ್ಯಮಿ,ಸಮಾಜ ಸೇವಕರು,ಇತ್ತೀಚೆಗಷ್ಟೇ ಎರಡು ಅಂತರಾಷ್ಟ್ರೀಯ ಪ್ರಶಸ್ತಿ ಗೌರವಕ್ಕೆ ಪಾತ್ರರಾದ M.K.S ಗ್ರೂಪ್ಸ್ ನ ಮಾಲೀಕರಾದ ನದೀಮ್ ಅಖ್ತರ್ ಸಾರಥ್ಯದಲ್ಲಿ ಕೋಲಾರ ಶ್ರೀನಿವಾಸಪುರದಲ್ಲಿ ಜನವರಿ 28,29 ಮತ್ತು 30 ರಂದು ಹೊನಲು ಬೆಳಕಿನ ಅದ್ಧೂರಿಯ ಮೂರನೇ ಆವೃತ್ತಿಯ ಶ್ರೀನಿವಾಸಪುರ ಪ್ರೀಮಿಯರ್ ಲೀಗ್-M.K.S Cup-2022 ಆಯೋಜಿಸಲಾಗಿದೆ.
*ಭಾಗವಹಿಸುವ ತಂಡಗಳು*
ಎಸ್.ಕೆ.ಎಸ್ ಕಿಸಾನ್ ಟೈಗರ್ಸ್,ಬ್ರ್ಯಾಂಡ್ ಯುವಾ,ಹೆಚ್‌.ಎಮ್.ಎಸ್ ಕ್ರಿಕೆಟರ್ಸ್ ಚಿನ್ನಸಂದ್ರ,ಬಿ‌.ಎಸ್.ಆರ್ ಕನ್ಸ್ಟ್ರಕ್ಷನ್ಸ್,ಕ್ಲಾಸಿಕ್ ತಿಪಟೂರು, ಎಸ್.ಎಫ್.ಸಿ ವಾರಿಯರ್ಸ್,
ಎಮ್.ಎಸ್.ಆರ್ ಕ್ರಿಕೆಟರ್ಸ್,ಗಡಿನಾಡು
ಶ್ರೀನಿವಾಸಪುರ ಹೀಗೆ ಒಟ್ಟು 8 ಪ್ರತಿಷ್ಠಿತ ಫ್ರಾಂಚೈಸಿಗಳು ಸ್ಪರ್ಧಾಕಣದಲ್ಲಿದ್ದು,ಚಾಂಪಿಯನ್ ತಂಡ 3,33,333 ರೂ ನಗದು,ರನ್ನರ್ ಅಪ್ 1,77,777ರೂ ನಗದು ಬಹುಮಾನದ ಜೊತೆ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ವಿಶೇಷ ಉಡುಗೊರೆ ಹಾಗೂ ಸರಣಿಶ್ರೇಷ್ಟ ಗೌರವಕ್ಕೆ ಪಾತ್ರರಾದ ಆಟಗಾರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ ಬುಲೆಟ್ ಬೈಕ್ ಒಡೆಯನಾಗಲಿದ್ದಾರೆ.
*ನದೀಮ್ ಅಖ್ತರ್-M.K.S Groups*
ಯುವ ಕ್ರೀಡಾ ಪ್ರತಿಭೆಗಳಿಗೆ ತಮ್ಮ ಮಾರ್ಗದರ್ಶನವನ್ನಿತ್ತು ,ಮುಖ್ಯವಾಗಿ ಕೋಲಾರ ಜಿಲ್ಲೆಯ ಪ್ರತಿಭಾವಂತ ಕ್ರಿಕೆಟಿಗರನ್ನು ರಾಜ್ಯಮಟ್ಟದಲ್ಲಿ ಗುರುತಿಸುವಲ್ಲಿ  ಬಹುಮುಖ್ಯ ಪಾತ್ರ ವಹಿಸಿದ ಶ್ರೀ ನದೀಮ್  ಅಖ್ತರ್ ಶ್ರೀ ಶ್ರೀನಿವಾಸಪುರ ಪ್ರೀಮಿಯರ್ ಲೀಗ್ ನ ಮುಖ್ಯ ರೂವಾರಿ.
ಓರ್ವ ಅತ್ಯುನ್ನತ ಕ್ರಿಕೆಟಿಗನಾಗಿ ಸೈ ಬಾಯ್ಸ್ ಎಂಬ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿ 2019 ಹಾಗೂ 2020 ರಲ್ಲಿ ಶ್ರೀನಿವಾಸಪುರದಲ್ಲಿ,2021 ಬೆಂಗಳೂರಿನಲ್ಲಿ ಸಂಘಟಿಸಿದ ಎಸ್.ಪಿ.ಎಲ್ ಎಂಬ ಕ್ರಿಕೆಟ್ ಪಂದ್ಯಾವಳಿ ಕೋಲಾರ ಜಿಲ್ಲೆಯಲ್ಲೇ ಕ್ರಾಂತಿಯನ್ನು ಸೃಷ್ಟಿಸಿತ್ತು.ಕೇವಲ ಕ್ರೀಡಾ ಕ್ಷೇತ್ರವಷ್ಟೇ ಅಲ್ಲದೇ ಸಮಾಜ ಸೇವೆಯಲ್ಲಿಯೂ ತನ್ನನ್ನು ತಾನು ಗುರುತಿಸಿಕೊಂಡು ನಿಸ್ವಾರ್ಥ ಮನಸ್ಸಿನಿಂದ ಸೇವೆಗೈದ ಸ್ಪೂರ್ತಿಕಿರಣ ಇವರು.ಕೋವಿಡ್ ನಂತಹ ಸಂಧಿಘ್ನ ಪರಿಸ್ಥಿತಿಯಲ್ಲಿ ಜನರ ಸಂಕಷ್ಟಗಳನ್ನು ಅರಿತು ,ಜನರಿಗೆ ಆಹಾರ ಸಾಮಾಗ್ರಿಗಳನ್ನು ಒದಗಿಸಿ ತಮ್ಮ ಕೆಲಸ ಕಾರ್ಯಗಳಿಂದ ಪ್ರೇರಣೆಯಾಗಿ ನಿಲ್ಲುವ  ನದೀಮ್ ಎಂ.ಕೆ.ಎಸ್ ಗ್ರೂಪ್,ಅಖ್ತರ್ ಟ್ರೇಡರ್ಸ್ ಎಂಬ ಉದ್ಯಮವನ್ನು ಸೃಷ್ಟಿಸಿ ರೈತ ಸಹಕಾರಿ ಟ್ರ್ಯಾಕ್ಟರ್ ಗಳು,ಕೃಷಿ ಉತ್ಪನ್ನಗಳಿಗೆ ಅತ್ಯುತ್ತಮ ಮಾರುಕಟ್ಟೆ ಸೃಷ್ಟಿಸಿದ ಜನನಾಯಕ ಎಂದರೆ ತಪ್ಪಾಗಲಾರದು.
ಇತ್ತೀಚೆಗಷ್ಟೇ ರಾಜ್ ಭವನ ಮುಂಬೈನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಲಯನ್ಸ್ ಗೋಲ್ಡ್ ಅವಾರ್ಡ್ ಮತ್ತು ದುಬೈ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಗೌರವಕ್ಕೂ ಪಾತ್ರರಾಗಿದ್ದರು.
3 ದಿನಗಳ ಕಾಲ ನಡೆಯುವ ಹೊನಲು ಬೆಳಕಿನ ಈ ಕ್ರಿಕೆಟ್ ಪಂದ್ಯಾಟದ ನೇರ ಪ್ರಸಾರ S.R.B ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದ್ದು, ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

three × 2 =