ಕ್ರಿಕೆಟ್ಐಸಿಸಿ ಚಾಂಪಿಯನ್ಸ್ ಟ್ರೋಫಿ: ಫೆಬ್ರವರಿ 23ಕ್ಕೆ ಭಾರತ Vs ಪಾಕಿಸ್ತಾನ ಹೈವೋಲ್ಟೇಜ್...

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಫೆಬ್ರವರಿ 23ಕ್ಕೆ ಭಾರತ Vs ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್

-

- Advertisment -spot_img

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಫೆಬ್ರವರಿ 23ಕ್ಕೆ ಭಾರತ Vs ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್

ಈ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ಕ್ರಿಕೆಟ್ ಜಗತ್ತಿನ ಕುತೂಹಲಕ್ಕೆ ಕಾರಣವಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 23ರಂದು ದುಬೈನಲ್ಲಿ ನಡೆಯಲಿದೆ.

ಪಾಕಿಸ್ತಾನದ ಆತಿಥ್ಯದಲ್ಲಿ ಟೂರ್ನಿ ನಡೆಯಲಿದ್ದು, ಭಾರತ ತಂಡ ಪಾಕಿಸ್ತಾನದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಡಲು ನಿರಾಕರಿಸಿರುವದರಿಂದ ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಫೆಬ್ರವರಿ 19ರಂದು ಕರಾಚಿಯಲ್ಲಿ ನಡೆಯುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಫೈನಲ್ ಪಂದ್ಯ ಮಾರ್ಚ್ 9ರಂದು ಲಾಹೋರ್’ನಲ್ಲಿ ನಡೆಯಲಿದೆ. ಮೊದಲ ಸೆಮಿಫೈನಲ್ ದುಬೈನಲ್ಲಿ ಹಾಗೂ 2ನೇ ಸೆಮಿಫೈನಲ್ ಲಾಹೋರ್’ನಲ್ಲಿ ನಡೆಯಲಿದೆ. ಒಂದು ವೇಳೆ ಭಾರತ ತಂಡ ಫೈನಲ್ ಪ್ರವೇಶಿಸಿದರೆ ಲಾಹೋರ್ ಬದಲು ದುಬೈನಲ್ಲಿ ಪಂದ್ಯ ನಡೆಯಲಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025
ಗ್ರೂಪ್ ಎ: ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್
ಗ್ರೂಪ್ ಬಿ: ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025: ವೇಳಾಪಟ್ಟಿ
ಫೆಬ್ರವರಿ 19: ಪಾಕಿಸ್ತಾನ Vs ನ್ಯೂಜಿಲೆಂಡ್, ಕರಾಚಿ
ಫೆಬ್ರವರಿ 20: ಭಾರತ Vs ಬಾಂಗ್ಲಾದೇಶ, ದುಬೈ
ಫೆಬ್ರವರಿ 21: ಅಫ್ಘಾನಿಸ್ತಾನ Vs ದಕ್ಷಿಣ ಆಫ್ರಿಕಾ, ಕರಾಚಿ
ಫೆಬ್ರವರಿ 22: ಆಸ್ಟ್ರೇಲಿಯಾ Vs ಇಂಗ್ಲೆಂಡ್, ಲಾಹೋರ್
ಫೆಬ್ರವರಿ 23: ಭಾರತ Vs ಪಾಕಿಸ್ತಾನ, ದುಬೈ
ಫೆಬ್ರವರಿ 24: ಬಾಂಗ್ಲಾದೇಶ Vs ನ್ಯೂಜಿಲೆಂಡ್, ರಾವಲ್ಪಿಂಡಿ
ಫೆಬ್ರವರಿ 25: ಆಸ್ಟ್ರೇಲಿಯಾ Vs ದಕ್ಷಿಣ ಆಫ್ರಿಕಾ, ರಾವಲ್ಪಿಂಡಿ
ಫೆಬ್ರವರಿ 26: ಅಫ್ಘಾನಿಸ್ತಾನ Vs ಇಂಗ್ಲೆಂಡ್, ಲಾಹೋರ್
ಫೆಬ್ರವರಿ 27: ಪಾಕಿಸ್ತಾನ Vs ಬಾಂಗ್ಲಾದೇಶ, ರಾವಲ್ಪಿಂಡಿ
ಫೆಬ್ರವರಿ 28: ಅಫ್ಘಾನಿಸ್ತಾನ Vs ಆಸ್ಟ್ರೇಲಿಯಾ, ಲಾಹೋರ್
ಮಾರ್ಚ್ 1: ದಕ್ಷಿಣ ಆಫ್ರಿಕಾ Vs ಇಂಗ್ಲೆಂಡ್, ಕರಾಚಿ
ಮಾರ್ಚ್ 2: ಭಾರತ Vs ನ್ಯೂಜಿಲೆಂಡ್, ದುಬೈ
ಮಾರ್ಚ್ 4: ಸೆಮಿಫೈನಲ್-1, ದುಬೈ
ಮಾರ್ಚ್ 5: ಸೆಮಿಫೈನಲ್-2, ಲಾಹೋರ್
ಮಾರ್ಚ್ 9: ಫೈನಲ್, ಲಾಹೋರ್*

LEAVE A REPLY

Please enter your comment!
Please enter your name here

2 × 3 =

Latest news

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಯುವ...

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!   2026ರ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 92 ರನ್‌ಗಳಿಂದ ಮಣಿಸಿದ ರಾಯಲ್...

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ!

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇತಿಹಾಸದಲ್ಲಿ ಕೆಲವು ಆಟಗಾರರು ಕೇವಲ ಕ್ರಿಕೆಟಿಗರಾಗಿ ಮಾತ್ರ ಉಳಿಯುವುದಿಲ್ಲ; ಅವರು ಭಾವನೆಗಳಾಗುತ್ತಾರೆ....

RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ… ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ?

  RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ... ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ? ಈ ಋತುವಿನ ಐಪಿಎಲ್‌ನ ಮೊದಲ ಅರ್ಹತಾ ಸುತ್ತಿನಲ್ಲಿ ಬೆಂಗಳೂರು ಮತ್ತು ಗುಜರಾತ್...
- Advertisement -spot_imgspot_img

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ ಕರ್ನಾಟಕದ ಮಾಜಿ ಕ್ರಿಕೆಟಿಗ ಹಾಗೂ ಪ್ರತಿಭಾವಂತ ವೇಗದ ಬೌಲರ್ ಎಸ್.ಎಲ್. ಅಕ್ಷಯ್ ಅವರು ಭಾನುವಾರ ಲೀಗ್ ಪಂದ್ಯವೊಂದರ...

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್ ಅರಸೀಕೆರೆಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಕ್ರೀಡಾ ರಸದೌತಣ ನೀಡಲು “ಅರಸೀಕೆರೆ ಚಾಂಪಿಯನ್ಸ್...

Must read

- Advertisement -spot_imgspot_img

You might also likeRELATED
Recommended to you