Categories
ಇತರೆ ಕ್ರಿಕೆಟ್

ಮರೆಯಾದ ಕ್ರೀಡಾ ಮಾಣಿಕ್ಯ-ವೈ.ಸತ್ಯನಾರಾಯಣ ನಾಯಕ್(ದೈಹಿಕ ನಿರ್ದೇಶಕರು ಎಸ್.ಎಂ.ಎಸ್.ಪ.ಪೂರ್ವ ಕಾಲೇಜು)

ಕಳೆದ 2 ದಶಕಗಳಿಂದ ಬ್ರಹ್ಮಾವರದ ಎಸ್.ಎಮ್.ಎಸ್
ಪ.ಪೂರ್ವ ಕಾಲೇಜಿನ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಸತ್ಯನಾರಾಯಣ ನಾಯಕ್ ಅಲ್ಪ ಕಾಲದ ಅಸೌಖ್ಯದಿಂದ ಇಂದು ವಿಧಿವಶರಾದರು.
ಕಾರ್ಕಳದ ಕುಗ್ರಾಮವಾದ ಬೈಲೂರಿನಿಂದ ಮುಂಜಾನೆ 4.30 ಗೆ ಹೊರಟು 6 ಗಂಟೆಯ ವೇಳೆಗೆ ಕಾಲೇಜು ತಲುಪುತ್ತಿದ್ದ ಇವರು ಬೆಳಗ್ಗಿನ ವೇಳೆ 150 ಕ್ಕೂ ಹೆಚ್ಚಿನ ಕ್ರೀಡಾ ಪಟುಗಳಿಗೆ ತರಬೇತಿ ನೀಡುತ್ತಿದ್ದರು.
ಕ್ರೀಡೆಗಾಗಿ ತನ್ನ ಸರ್ವಸ್ವವನ್ನೇ ಮುಡಿಪಾಗಿಟ್ಟ ಇವರು ಅಸಂಖ್ಯಾತ ರಾಜ್ಯ,ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತನ್ನ ಗರಡಿಯಲ್ಲಿ ಪಳಗಿಸಿದವರು.ಕಳೆದ ವರ್ಷ ರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಓಟವನ್ನು ಸಂಘಟಿಸಿ ಸುಮಾರು 50 ದೈಹಿಕ ಶಿಕ್ಷಕರ ತಂಡವನ್ನು ರಚಿಸಿ,ಖುದ್ದು ತಾನೇ ಕ್ರೀಡಾಕೂಟದ ಮುಂದಾಳತ್ವವನ್ನು ವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.ಬ್ರಹ್ಮಾವರ ಭಾಗದಲ್ಲಿ ಮೊತ್ತಮೊದಲ ಬಾರಿಗೆ ವನಿತೆಯರ ಕ್ರಿಕೆಟ್ ತಂಡವನ್ನು ರಚಿಸಿ,ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಶಸ್ತಿ ಜಯಿಸುವಲ್ಲಿ ಬಹುಮುಖ್ಯ ಪಾತ್ರವಹಿಸಿದ ಹೆಗ್ಗಳಿಕೆ ಇವರದ್ದಾಗಿತ್ತು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

4 × 2 =