ಸೌದಿ ಅರೇಬಿಯಾ 90 ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದಕ್ರಿಕೆಟ್ ಪಂದ್ಯಾವಳಿಯಲ್ಲಿ ಎ.ಟಿ.ಎಸ್ ಜೆದ್ದಾ,ನ್ಯೂ ಫೇಸ್ ಜೆದ್ದಾ ತಂಡವನ್ನು ಸೋಲಿಸುವುದರ ಮೂಲಕ ಚಾಂಪಿಯನ್ ಪಟ್ಟಕ್ಕೇರಿದೆ.

ಲೀಗ್ ಹಂತದ ರೋಚಕ ಹಣಾಹಣಿಗಳ ಬಳಿಕ ಕ್ರಮವಾಗಿ ಮೊದಲ ಉಪಾಂತ್ಯ ಪಂದ್ಯದಲ್ಲಿ ಎ.ಟಿ.ಎಸ್ ಜೆದ್ದಾ,ರಾಜಸ್ಥಾನ ರಾಯಲ್ಸ್ ತಂಡವನ್ನು ಹಾಗೂ ನ್ಯೂ ಫೇಸ್ ಜೆದ್ದಾ,ಎಮ್.ಸಿ.ಸಿ ತಂಡವನ್ನು ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟಿದ್ದರು.


ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎ.ಟಿ.ಎಸ್ ಜೆದ್ದಾ ನಿಗದಿತ 6 ಓವರ್ ಗಳಲ್ಲಿ 65 ರನ್ ಕಲೆಹಾಕಿತ್ತು.ಸವಾಲಿನ ಮೊತ್ತವನ್ನು ಬೆಂಬತ್ತುವಲ್ಲಿ ಎಡವಿದ ನ್ಯೂ ಫೇಸ್ ಜೆದ್ದಾ ತಂಡ 6 ಓವರ್ ಗಳಲ್ಲಿ 60 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೋಪ್ಪಿಕೊಂಡಿತ್ತು.


ಚಾಂಪಿಯನ್ ತಂಡ ಎ.ಟಿ.ಎಸ್ ಪ್ರಶಸ್ತಿ ರೂಪದಲ್ಲಿ 4000 ರಿಯಲ್ ಹಾಗೂ ರನ್ನರ್ಸ್ ನ್ಯೂ ಫೇಸ್ ಜೆದ್ದಾ
2000 ರಿಯಲ್ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.


ವೈಯಕ್ತಿಕ ಪ್ರಶಸ್ತಿ ಕ್ರಮವಾಗಿ
ಫೈನಲ್ ನ ಪಂದ್ಯಶ್ರೇಷ್ಟ ಶಮೀಝ್ ಪಡುಬಿದ್ರಿ, ಬೆಸ್ಟ್ ಬೌಲರ್ ಎ.ಟಿ.ಸ್ ನ ಹೈದರ್,ಪಂದ್ಯಾವಳಿಯುದ್ದಕ್ಕೂ ಶ್ರೇಷ್ಠ ನಿರ್ವಹಣೆ ನೀಡಿದ ಎಮ್.ಸಿ.ಸಿ ತಂಡದ ಸುಲೈಮಾನ್
ಬೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಸರಣಿಶ್ರೇಷ್ಟ ಗೌರವಕ್ಕೆ ಪಾತ್ರರಾದರು.
