ಕ್ರಿಕೆಟ್ನ್ಯೂಜಿಲೆಂಡ್‌ಗೆ ಖಡಕ್ ಎಚ್ಚರಿಕೆ ನೀಡಿದ ಚೇತೇಶ್ವರ್ ಪೂಜಾರ...

ನ್ಯೂಜಿಲೆಂಡ್‌ಗೆ ಖಡಕ್ ಎಚ್ಚರಿಕೆ ನೀಡಿದ ಚೇತೇಶ್ವರ್ ಪೂಜಾರ…

-

- Advertisment -spot_img
ಜೂನ್ 18ರಿಂದ ಇಂಗ್ಲೆಂಡ್‌ನ ಸೌತಾಂಪ್ಟನ್ ಅಂಕಣದಲ್ಲಿ ನಡೆಯಲಿದೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‍ ಶಿಪ್ ನ ಫೈನಲ್ ಪಂದ್ಯ.  ಈ ಪಂದ್ಯಕ್ಕೆ ಭಾರತೀಯ ಕ್ರಿಕೆಟ್ ಮಂಡಳಿ ಈಗಾಗಲೇ 20 ಆಟಗಾರರ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಿದೆ.
ಇಪ್ಪತ್ತು ಆಟಗಾರರನ್ನೊಳಗೊಂಡ ನ್ಯೂಜಿಲೆಂಡ್ ತಂಡ ಈಗಾಗಲೇ ಇಂಗ್ಲೆಂಡ್ ಪ್ರವಾಸ ಮಾಡಿದೆ.
ಈ ನಡುವೆ ಭಾರತ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಎಂದೆ ಹೆಸರುವಾಸಿಯಾಗಿರುವ ಚೇತೇಶ್ವರ್ ಪೂಜಾರ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿ ಕುರಿತು ತಂಡದ ಪರವಾಗಿ ಬಾಯಿ ಬಿಟ್ಟಿದ್ದಾರೆ. ಕಳೆದ ಬಾರಿ ಆಸ್ಟ್ರೇಲಿಯ ವಿರುದ್ಧ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ಭಾರತ ಜಯಗಳಿಸುವುದರ ಮೂಲಕ   ತನ್ನ ಬಲಿಷ್ಠತೆಯನ್ನು ತೋರಿಸಿತ್ತು. ಈ ಎರಡೂ ಸರಣಿಗಳಲ್ಲಿ ಭಾರತದ ಪರ  ಶ್ರೇಷ್ಠ ಪ್ರದರ್ಶನವನ್ನು ನೀಡಿ ಚೇತೇಶ್ವರ ಪೂಜಾರ ಮಿಂಚಿದ್ದರು.
ಇದೀಗ ಬರಲಿರುವ ಟೆಸ್ಟ್ ಪಂದ್ಯಗಳ ಕುರಿತು ಮಾತನಾಡಿರುವ ಚೇತೇಶ್ವರ್ ಪೂಜಾರ ನ್ಯೂಜಿಲೆಂಡ್ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ‘ನಮ್ಮ ತಂಡ ತನ್ನದೇ ಆದ ಸಾಮರ್ಥ್ಯವನ್ನು ಹೊಂದಿದೆ ಟೆಸ್ಟ್‌ ಕ್ರಿಕೆಟ್‌ ನಲ್ಲಿ ಬಲಿಷ್ಟವಾಗಿದೆ, ಈ ಹಿಂದಿನ ಸರಣಿಯಲ್ಲಿ ಆಡಿದ ಆಟವನ್ನೆ  ಪ್ರದರ್ಶಿಸಿದರೆ  ಯಾವುದೇ ತಂಡದ ವಿರುದ್ಧವಾಗಲಿ ಹಾಗೂ ಯಾವುದೇ ದೇಶದಲ್ಲಾಗಲಿ ನಾವು ಗೆಲುವನ್ನು ಸಾಧಿಸುವುದು ಸುಲಭ ಎಂದು ಚೇತೇಶ್ವರ್ ಪೂಜಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಂಡದ ಪ್ರತಿಯೊಬ್ಬ ಆಟಗಾರ ಬಗ್ಗೆ ಮಾತನಾಡಿದ ಅವರು ಟೀಮ್ ಇಂಡಿಯಾ ಇತ್ತೀಚೆಗೆ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಜಯಗಳಿಸಿದೆ,  ತಂಡದಲ್ಲಿನ ಎಲ್ಲಾ ಆಟಗಾರರು ಉತ್ತಮ ಆಟ ಅಡುವುದರ ಜೊತೆಗೆ ಉತ್ತಮ ಅನುಭವವನ್ನು ಹೊಂದಿದ್ದಾರೆ. ಮುಂಬರುವ ದಿನಗಳಲ್ಲೂ ಸ್ಥಿರ ಪ್ರದರ್ಶನದ ಆಟ ಮುಂದುವರಿಸಿದರೆ ಎಲ್ಲಾ ಪಂದ್ಯಗಳಲ್ಲಿಯೂ ಸಹ ಗೆಲುವನ್ನು ನಾವು ಸಾಧಿಸುತ್ತೇವೆ ಎಂದು ಪೂಜಾರಾ ಹೇಳಿದ್ದಾರೆ.
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

LEAVE A REPLY

Please enter your comment!
Please enter your name here

4 − 1 =

Latest news

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್ ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) –  ಡಾ|| ಎಚ್ಎಸ್...

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ ಕರಾವಳಿ ಭಾಗದ ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ಸ್ಪೋರ್ಟ್ಸ್ ಕನ್ನಡ, ಮತ್ತೊಂದು...

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ...
- Advertisement -spot_imgspot_img

ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ

  ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ...

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್...

Must read

- Advertisement -spot_imgspot_img

You might also likeRELATED
Recommended to you