ಜೂನ್ 18ರಿಂದ ಇಂಗ್ಲೆಂಡ್‌ನ ಸೌತಾಂಪ್ಟನ್ ಅಂಕಣದಲ್ಲಿ ನಡೆಯಲಿದೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯ. ಈ ಪಂದ್ಯಕ್ಕೆ ಭಾರತೀಯ ಕ್ರಿಕೆಟ್ ಮಂಡಳಿ ಈಗಾಗಲೇ 20 ಆಟಗಾರರ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಿದೆ.
ಇಪ್ಪತ್ತು ಆಟಗಾರರನ್ನೊಳಗೊಂಡ ನ್ಯೂಜಿಲೆಂಡ್ ತಂಡ ಈಗಾಗಲೇ ಇಂಗ್ಲೆಂಡ್ ಪ್ರವಾಸ ಮಾಡಿದೆ.
ಈ ನಡುವೆ ಭಾರತ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಎಂದೆ ಹೆಸರುವಾಸಿಯಾಗಿರುವ ಚೇತೇಶ್ವರ್ ಪೂಜಾರ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿ ಕುರಿತು ತಂಡದ ಪರವಾಗಿ ಬಾಯಿ ಬಿಟ್ಟಿದ್ದಾರೆ. ಕಳೆದ ಬಾರಿ ಆಸ್ಟ್ರೇಲಿಯ ವಿರುದ್ಧ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ಭಾರತ ಜಯಗಳಿಸುವುದರ ಮೂಲಕ ತನ್ನ ಬಲಿಷ್ಠತೆಯನ್ನು ತೋರಿಸಿತ್ತು. ಈ ಎರಡೂ ಸರಣಿಗಳಲ್ಲಿ ಭಾರತದ ಪರ ಶ್ರೇಷ್ಠ ಪ್ರದರ್ಶನವನ್ನು ನೀಡಿ ಚೇತೇಶ್ವರ ಪೂಜಾರ ಮಿಂಚಿದ್ದರು.
ಇದೀಗ ಬರಲಿರುವ ಟೆಸ್ಟ್ ಪಂದ್ಯಗಳ ಕುರಿತು ಮಾತನಾಡಿರುವ ಚೇತೇಶ್ವರ್ ಪೂಜಾರ ನ್ಯೂಜಿಲೆಂಡ್ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ‘ನಮ್ಮ ತಂಡ ತನ್ನದೇ ಆದ ಸಾಮರ್ಥ್ಯವನ್ನು ಹೊಂದಿದೆ ಟೆಸ್ಟ್ ಕ್ರಿಕೆಟ್ ನಲ್ಲಿ ಬಲಿಷ್ಟವಾಗಿದೆ, ಈ ಹಿಂದಿನ ಸರಣಿಯಲ್ಲಿ ಆಡಿದ ಆಟವನ್ನೆ ಪ್ರದರ್ಶಿಸಿದರೆ ಯಾವುದೇ ತಂಡದ ವಿರುದ್ಧವಾಗಲಿ ಹಾಗೂ ಯಾವುದೇ ದೇಶದಲ್ಲಾಗಲಿ ನಾವು ಗೆಲುವನ್ನು ಸಾಧಿಸುವುದು ಸುಲಭ ಎಂದು ಚೇತೇಶ್ವರ್ ಪೂಜಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಂಡದ ಪ್ರತಿಯೊಬ್ಬ ಆಟಗಾರ ಬಗ್ಗೆ ಮಾತನಾಡಿದ ಅವರು ಟೀಮ್ ಇಂಡಿಯಾ ಇತ್ತೀಚೆಗೆ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಜಯಗಳಿಸಿದೆ, ತಂಡದಲ್ಲಿನ ಎಲ್ಲಾ ಆಟಗಾರರು ಉತ್ತಮ ಆಟ ಅಡುವುದರ ಜೊತೆಗೆ ಉತ್ತಮ ಅನುಭವವನ್ನು ಹೊಂದಿದ್ದಾರೆ. ಮುಂಬರುವ ದಿನಗಳಲ್ಲೂ ಸ್ಥಿರ ಪ್ರದರ್ಶನದ ಆಟ ಮುಂದುವರಿಸಿದರೆ ಎಲ್ಲಾ ಪಂದ್ಯಗಳಲ್ಲಿಯೂ ಸಹ ಗೆಲುವನ್ನು ನಾವು ಸಾಧಿಸುತ್ತೇವೆ ಎಂದು ಪೂಜಾರಾ ಹೇಳಿದ್ದಾರೆ.