ಪ್ರತಿಯೊಬ್ಬ ಕ್ರಿಕೆಟಿಗರ ಜೀವನ ಅಭಿಮಾನಿಗಳು ತಿಳಿದುಕೊಂಡಿಂತಿರುವುದಿಲ್ಲ ಒಬ್ಬ ಕ್ರಿಕೆಟ್ ಆಟಗಾರನೆಂದರೆ ಆತ ದೊಡ್ಡ ಮಟ್ಟದ ಸಂಭಾವನೆ, ಐಷಾರಾಮಿ ಬದುಕು ಹಾಗೂ ತನಗೆ ಬೇಕಾದ ಎಲ್ಲಾ ಸವಲತ್ತುಗಳು ಆತನಿಗೆ ಸಿಗುತ್ತವೆ ಎನ್ನುವ ದೊಡ್ಡ ಭ್ರಮೆ ಆಭಿಮಾನಿಗಳಲ್ಲಿದೆ.
ಆದರೆ ಕೆಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರ ಪಾಲಿಗೆ ಈ ರೀತಿಯ ಐಶರಾಮಿ ಬದುಕು ಇರುವುದಿಲ್ಲ.
ಹೌದು ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿದ್ದರೂ ಸಹ ಸರಿಯಾದ ಸವಲತ್ತುಗಳಿಲ್ಲದೆ ದಿನನಿತ್ಯ ಸಂಕಷ್ಟಗಳನ್ನು ಎದುರಿಸುತ್ತಿರುವ ಆಟಗಾರರು ಇಂದಿಗೂ ನಮ್ಮ ಕಣ್ಣೆದುರಿಗೆ ಇದ್ದಾರೆ.
ಇದಕ್ಕೆ ಸರಿಯಾದ ಉದಾಹರಣೆ ಜಿಂಬಾಬ್ವೆ ತಂಡದ ಯುವ ಆಟಗಾರ *ರ‍್ಯಾನ್ ಬರ್ಲ್*. ಕಳೆದ ಶನಿವಾರ ಜಿಂಬಾಬ್ವೆ ತಂಡದ ಯುವ ಆಟಗಾರ ರ‍್ಯಾನ್ ಬರ್ಲ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ತಂಡದ ಆಟಗಾರರ ಕಷ್ಟದ ಕುರಿತು ಟ್ವೀಟ್‌ವೊಂದನ್ನು ಮಾಡುವುದರ ಮೂಲಕ ನೆಟ್ಟಿಗರನ್ನು ಭಾವುಕರನ್ನಾಗಿಸಿದ್ದಾರೆ. ಹಾಗೂ ಪ್ರತಿಯೊಬ್ಬನ ಯಶಸ್ಸಿನ ಹಾದಿಯ ಹಿಂದಿನ ಕಷ್ಟಗಳನ್ನು ಹೇಳಿದ್ದಾರೆ.
ನಮಗೆ ಪಂದ್ಯಗಳನ್ನಾಡಲು ಕಾಲಿಗೆ ಸರಿಯಾದ ಶೂ ಗಳೇ ಇಲ್ಲದೇ ಇರುವ ಪರಿಸ್ಥಿತಿಯನ್ನು ತನ್ನ ಟ್ವೀಟ್ ಮೂಲಕ ತಿಳಿಸಿರುವ ರ‍್ಯಾನ್ ಬರ್ಲ್ ಸದ್ಯ ಚರ್ಚೆಗೀಡಾಗಿದ್ದಾರೆ.
‘ಪ್ರತಿ ಸರಣಿ ಮುಗಿದ ಬಳಿಕವೂ ನಮ್ಮ ಕಿತ್ತುಹೋದ ಶೂಗಳನ್ನು ನಾವೇ ಅಂಟಿಸಿಕೊಳ್ಳಬೇಕು ಮತ್ತು ಹೊಲಿದುಕೊಳ್ಳಬೇಕು, ಯಾರಾದರೂ ನಮಗೆ ಶೂ ಪ್ರಾಯೋಜಕತ್ವವನ್ನು ವಹಿಸಿಕೊಂಡರೆ ಈ ಕಷ್ಟ ಇರುವುದಿಲ್ಲ’ ಎಂದು ತಮ್ಮ ಕಿತ್ತುಹೋದ ಶೂ ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ಬರೆದುಕೊಂಡು ಸಹಾಯ ಕೇಳಿದ್ದಾರೆ ರ‍್ಯಾನ್ ಬರ್ಲ್. ಸದ್ಯ ರ‍್ಯಾನ್ ಬರ್ಲ್ ಮಾಡಿರುವ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಜಿಂಬಾಬ್ವೆ ತಂಡದ ಆಟಗಾರರ ಈ ಪರಿಸ್ಥಿತಿ ಕಂಡು ಕ್ರೀಡಾಭಿಮಾನಿಗಳು ಮರುಗಿದ್ದಾರೆ.
ಇದು ಸುಳ್ಳಲ್ಲ ದೇಶಿ ಆಟಗಾರನಾಗಿರಲಿ ಸ್ವದೇಶಿ ಆಟಗಾರನಾಗಿರಲಿ ಬೆರಳೆಣಿಕೆಯ ಆಟಗಾರರನ್ನು ಬಿಟ್ಟು ಇನ್ನೂಳಿದ ಆಟಗಾರರಿಗೆ ಕ್ರಿಕೆಟ್ ಕಲಿಕೆ ಎನ್ನುವುದು ಬಲು ಕಷ್ಟದ ಹಾದಿ ಅದರಲ್ಲೂ ಕ್ರಿಕೆಟ್ ಕಲಿತೆ ಸಾಧಿಸಬೇಕೆನ್ನುವ ಛಲ ಪ್ರತಿಯೊಬ್ಬ ಆಟಗಾರನಿಗಿರುತ್ತದೆ. ಇಂತಹ ಸಂಕಷ್ಟಗಳನ್ನು ಮೆಟ್ಟಿ ಒಬ್ಬ ಉತ್ತಮ ಕ್ರಿಕೆಟಿಗನಾಗಿ ಗುರುತಿಸಿ ಕೊಳ್ಳುತ್ತಿರುರುವ ಸ್ವದೇಶೀ ಮತ್ತು ವಿದೇಶಿ ಆಟಗಾರರನ್ನು ನಾವು ಗೌರವಿಸ ಬೇಕಿದೆ.
ಕ್ರಿಕೆಟ್ ಆಟಗಾರರ ದುಸ್ಥಿತಿಯ ಬಗ್ಗೆ ಮನಸ್ಸು ಬಿಚ್ಚಿ ಹೇಳಿಕೊಂಡ ಜಿಂಬಾಬ್ವೆ ತಂಡದ ಯುವ ಆಟಗಾರನಿಗೆ ಪ್ರತಿಯೊಬ್ಬರು ಗೌರವಿಸ ಬೇಕಿದೆ.