ಚಕ್ರವರ್ತಿ ಗೆಳೆಯರ ಬಳಗದ ನಾಯಕ ಪ್ರಕಾಶ್.ಟಿ.ಸಿ ಸಾರಥ್ಯದಲ್ಲಿ,ಕೆ.ಪಿ.ಸಿ.ಸಿ ಸದಸ್ಯರು ಕೃಷ್ಣಮೂರ್ತಿ ಪಿ.ಎನ್,
ಕೆ. ಶ್ರೀಧರ್,ದನಿಯ ಕುಮಾರ್,ಚೇತನ್,ಪ್ರಸನ್ನ ಕುಮಾರ್,ಸೋಮಶೇಖರ್ ರವರ ಮಾರ್ಗದರ್ಶನದಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 1 ರ ತನಕ ಮೂರು ದಿನಗಳ ಕಾಲ ಸರಕಾರಿ ಜ್ಯೂನಿಯರ್ ಕಾಲೇಜು ಅಂಗಣದಲ್ಲಿ ನಡೆದ ಹೊನಲು ಬೆಳಕಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ “ಚಕ್ರವರ್ತಿ ಟ್ರೋಫಿ-2020” ಯನ್ನು
ನ್ಯಾಶ್ ಬೆಂಗಳೂರು ತಂಡ ಗೆದ್ದುಕೊಂಡಿತು.
ರಾಜ್ಯದ 20 ತಂಡಗಳು ಭಾಗವಹಿಸಿದ ಪ್ರತಿಷ್ಟಿತ ಪಂದ್ಯಾವಳಿಯಲ್ಲಿ,
ಲೀಗ್ ಹಂತದ ಹೋರಾಟದ ಬಳಿಕ
ಉಪಾಂತ್ಯ ಪಂದ್ಯಗಳಲ್ಲಿ ನ್ಯಾಶ್ ತಂಡ ಫ್ರೆಂಡ್ಸ್ ಬೆಂಗಳೂರನ್ನು ಹಾಗೂ ಮೈಟಿ, ಜೈ ಕರ್ನಾಟಕ ತಂಡವನ್ನು ಸೋಲಿಸಿ ಫೈನಲ್ ಗೆ ನೆಗೆದೇರಿತ್ತು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮೈಟಿ ಬೆಂಗಳೂರು 6 ಓವರ್ ಗಳಲ್ಲಿ 54 ರನ್ ಗಳಿಸಿ ಸವಾಲಿನ ಗುರಿಯನ್ನು ನೀಡಿತ್ತು.
ಚೇಸಿಂಗ್ ವೇಳೆ ನ್ಯಾಶ್ ಮಂದಗತಿಯ ಆರಂಭ ಪಡೆದಿತ್ತು.
4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 27 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ನವೀನ್ ಚೂ ಪ್ರಹಾರ
ಅಂತಿಮ 2 ಓವರ್ ಗಳಲ್ಲಿ 28 ರನ್ ಗಳ ಅವಶ್ಯಕತೆಯ ಸಂದರ್ಭದಲ್ಲಿ,
ಇನ್ನಿಂಗ್ಸ್ ಆಧರಿಸಿದ ನವೀನ್ ಚೂ
ಮೈಟಿಯ ಮಂಜು ಒಂದೇ ಓವರ್ ನಲ್ಲಿ 2 ಭರ್ಜರಿ ರಿವರ್ಸ್ ಸಿಕ್ಸ್ ಹಾಗೂ 1 ಬೌಂಡರಿ ನೆರವಿನಿಂದ 23 ರನ್ ಸಿಡಿಸಿ ನ್ಯಾಶ್ ತಂಡಕ್ಕೆ ವಿಜಯದ ಸನಿಹ ತಂದಿತ್ತರು.
ಅಂತಿಮ ಓವರ್ ನ ಪ್ರಥಮ ಎಸೆತದಲ್ಲಿ ನಿರಂಜನ್ ಬೌಂಡರಿ ದಾಖಲಿಸುವುದರ ಮೂಲಕ ನ್ಯಾಶ್ ಚಕ್ರವರ್ತಿ ಟ್ರೋಫಿ-2020 ಮಿರುಗುವ ಟ್ರೋಫಿ ಸಹಿತ
2.5 ಲಕ್ಷ ನಗದು ತನ್ನದಾಗಿಸಿಕೊಂಡಿತು.
ಹಾಗೂ ರನ್ನರ್ಸ್ ಮೈಟಿ ತಂಡ 1.5 ಲಕ್ಷ ನಗದು ಸಹಿತ ಮಿರುಗುವ ಟ್ರೋಫಿಗಳನ್ನು ಪಡೆಯಿತು.
ದೊಡ್ಡ ಗಣೇಶ್-ಪಿ.ಎನ್.ಕೆ ಅಂಪಾಯರಿಂಗ್
ಫೈನಲ್ ನಲ್ಲಿ ವಿಶೇಷ ಆಕರ್ಷಣೆಯಾಗಿ
ಕೆ.ಪಿ.ಸಿ.ಸಿ ಸದಸ್ಯರು,ಮಾರ್ಗದರ್ಶಕರಾದ ಪಿ.ಎನ್.ಕೃಷ್ಣಮೂರ್ತಿ ಹಾಗೂ ಮಾಜಿ ಅಂತರಾಷ್ಟ್ರೀಯ ಕ್ರಿಕೆಟಿಗ,ಪ್ರಸ್ತುತ ಗೋವಾ ರಣಜಿ ಕೋಚ್ ದೊಡ್ಡ ಗಣೇಶ್ ಫೈನಲ್ ಪಂದ್ಯದಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು.
ಪಂದ್ಯಾವಳಿಯ ನೇರ ಪ್ರಸಾರ M.Sports ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ, ಪ್ರಸಿದ್ಧ ವೀಕ್ಷಕ ವಿವರಣೆಕಾರರಾದ ಕೋಟ ಶಿವನಾರಾಯಣ ಐತಾಳ್ ಭಾಗವಹಿಸಿದ್ದರು.