80 ರ ದಶಕದಲ್ಲಿ ಸ್ಥಾಪನೆಯಾಗಿದ್ದ ಶಿವಮೊಗ್ಗ ಜಿಲ್ಲೆಯ ಗೋಪಾಳದ ಕೆ.ಹೆಚ್.ಬಿ ಕಾಲೋನಿಯ ಹಿರಿಯ ಸಂಸ್ಥೆ ಸಹನಾ ಕ್ರಿಕೆಟ್ ಕ್ಲಬ್ ಏಪ್ರಿಲ್ 30 ಮೇ 1 ಮತ್ತು 2 ರಂದು ಮೂರು ದಿನಗಳ ಹಗಲಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಕೂಟ “ಸಹನಾ ಟ್ರೋಫಿ-2021” ಆಯೋಜಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ 8 ತಂಡಗಳು ಹಾಗೂ ರಾಜ್ಯದ ಬಲಿಷ್ಠ 8 ತಂಡಗಳ ಸಹಿತ ಒಟ್ಟು 16 ತಂಡಗಳು ಪ್ರಬಲ ಪೈಪೋಟಿಯ ಸ್ಪರ್ಧಾಕಣದಲ್ಲಿದ್ದು,
ಶಿವಮೊಗ್ಗದ ಶ್ರೀ ಶಾರದಾ ದೇವಿ ಅಂಧರ ವಿಕಾಸ ಕೇಂದ್ರ ಗೋಪಾಳದ ಮೈದಾನದಲ್ಲಿ ಲೀಗ್ ಮಾದರಿಯಲ್ಲಿ ನಡೆಯಲಿದೆ.
ಪ್ರಥಮ ಬಹುಮಾನ ರೂಪದಲ್ಲಿ 1.5 ಲಕ್ಷ ನಗದು ದ್ವಿತೀಯ ಬಹುಮಾನ ರೂಪದಲ್ಲಿ 75 ಸಾವಿರ ನಗದು ಸಹಿತ ವೈಯಕ್ತಿಕ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದೆ.
ಹೆಚ್ಚಿನ ವಿವರಗಳಿಗಾಗಿ ಗಿರೀಶ್-8310685126,ರೋಹನ್- 9448639629 ಹಾಗೂ ವೆಂಕಟೇಶ್-8971075489 ಇವರನ್ನು ಸಂಪರ್ಕಿಸಬಹುದು.