ಬೆಂಗಳೂರು ಹುಳಿಮಾವು ಗ್ರಾಮದ ಅರಕೆರೆ ವಾರ್ಡ್ ನಂ-193 ನ ಸದಸ್ಯರು ಹಲವಾರು ವರ್ಷಗಳಿಂದ ಯಶಸ್ವಿ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ನಡೆಸಿಕೊಂಡು ಬಂದಿರುತ್ತಾರೆ.
ಅದೇ ರೀತಿ 2020 ಸಾಲಿನಲ್ಲಿ ಜನಪ್ರಿಯ ಶಾಸಕರಾದ ಶ್ರೀ.ಎಂ.ಸತೀಶ್ ರೆಡ್ಡಿಯವರ ಹುಟ್ಟು ಹಬ್ಬದ ಪ್ರಯುಕ್ತ ಮೂರು ದಿನಗಳ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ.
20 ತಂಡಗಳಿಗೆ ಅವಕಾಶ ಕಲ್ಪಿಸಲಾದ ಈ ಟೂರ್ನಮೆಂಟ್ ನಲ್ಲಿ 10 ತಂಡಗಳು ಅರಕೆರೆ ವಾರ್ಡ್ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ 10 ತಂಡಗಳು ಸ್ಪರ್ಧಿಸುತ್ತಿದೆ.ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 1 ಲಕ್ಷ ,ದ್ವಿತೀಯ ಸ್ಥಾನಿ 50 ಸಾವಿರ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದು,
ಭಾಗವಹಿಸುವ ಎಲ್ಲಾ ತಂಡಗಳಿಗೂ 10 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುತ್ತಿದೆ.
ವಿಶೇಷವಾಗಿ ಡಿಸೆಂಬರ್-13 ರವಿವಾರದಂದು ಶಾಸಕರಾದ ಶ್ರೀ.ಎಂ.ಸತೀಶ್ ರೆಡ್ಡಿಯವರ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.
ಪಂದ್ಯಾಟದ ನೇರ ಪ್ರಸಾರ ಕ್ರಿಕ್ ಸೇ ಬಿತ್ತರಿಸುತ್ತಿದ್ದು,ವೀಕ್ಷಕ ವಿವರಣೆಯಲ್ಲಿ ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಶಾಂತ್ ಅಂಬಲಪಾಡಿ ಹಾಗೂ ರಾಘವೇಂದ್ರ ಮಟಪಾಡಿ ಸಹಕರಿಸುತ್ತಿದ್ದಾರೆ.