ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ..ಆದರೆ ಅವರೆಲ್ಲಾ ಐಪಿಎಲ್’ನಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಕಾರಣ.. rcb ಫ್ರಾಂಚೈಸಿ, ರಾಜಸ್ಥಾನ ರಾಯಲ್ಸ್ ತಂಡದ ರೀತಿ ಯೋಚನೆಯನ್ನೇ ಮಾಡಲಿಲ್ಲ, ಮಾಡುವುದೂ ಇಲ್ಲ.!
“ಈತ ಮೈದಾನದಲ್ಲಿ ಡ್ಯಾನ್ಸ್ ಮಾಡಲಷ್ಟೇ ಲಾಯಕ್ಕು, ಇವನದ್ದೇನಿದ್ದರೂ ಸೆಲ್ಫಿ ಶೋಕಿ ಅಷ್ಟೇ. ಈತನನ್ನು ಐಪಿಎಲ್’ನಲ್ಲಿ ಆಡಿಸುತ್ತಿರುವುದೋ ದೊಡ್ಡ scam ಎಂದೆಲ್ಲಾ ಆ ಹುಡುಗನ್ನು ಹೀಗಳೆಯಲಾಗಿತ್ತು. ಒಮ್ಮೆ ನಾನೂ ಕೂಡ ರಿಯಾನ್ ಪರಾಗ್ ಬಗ್ಗೆ ಟೀಕೆ ಮಾಡಿ ಬರೆದಿದ್ದೆ. ಆತ ಎದುರಿಸಿದ ಟ್ರೋಲ್’ಗಳಿಗಂತೂ ಲೆಕ್ಕವೇ ಇಲ್ಲ.
ಆದರೆ ತನ್ನ ಬಗ್ಗೆ ಇದ್ದ negetiveಗಳನ್ನೆಲ್ಲಾ ರಿಯಾನ್ ಪರಾಗ್ ಈ ವರ್ಷ ಹೊಡೆದೋಡಿಸಿದ್ದಾನೆ, “ಆಟದ ಮೂಲಕ”. ಅಂದ ಹಾಗೆ, ತಾನು pure meritನಿಂದಲೇ ಆಡುತ್ತಿದ್ದೇನೆ ಎಂಬುದನ್ನು ರಿಯಾನ್ ಪರಾಗ್ ಸಾಬೀತು ಮಾಡಿದ್ದೇ ಈ ವರ್ಷ.
ಈ ಬಾರಿಯ ಐಪಿಎಲ್’ನಲ್ಲಿ ರಿಯಾನ್ ಪರಾಗ್ ಆಡುತ್ತಿರುವ ಆಟ ನಿಜಕ್ಕೂ ಖುಷಿ ಕೊಡುತ್ತಿದೆ. ಇದಕ್ಕೂ ಮೊದಲು 54 ಐಪಿಎಲ್ ಪಂದ್ಯಗಳು.., ಎರಡೇ ಎರಡು ಅರ್ಧಶತಕ. ಈ ವರ್ಷ ಮೊದಲ ಐದು ಮ್ಯಾಚ್’ಗಳಲ್ಲಿ 3 ಫಿಫ್ಟಿ. ಆರೆಂಜ್ ಕ್ಯಾಪ್ ರೇಸ್’ನಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿಗೆ ಸ್ಪರ್ಧೆಯೊಡ್ಡುತ್ತಿರುವುದು ಇವನೇ.
ಇದು ಒಂದೇ ವರ್ಷದ ಪರಿಶ್ರಮವೂ ಅಲ್ಲ, ಪ್ರತಿಫಲವೂ ಅಲ್ಲ. ರಿಯಾನ್ ಪರಾಗ್ 2019ರಿಂದಲೂ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದಾನೆ. “ಆಟಕ್ಕುಂಟು ಲೆಕ್ಕಕ್ಕಿಲ್ಲ” ಎಂಬಂತಿದ್ದರೂ ಈ ಹುಡುಗನ ಮೇಲೆ ರಾಜಸ್ಥಾನ ತಂಡ ಸತತವಾಗಿ ನಂಬಿಕೆಯಿಡುತ್ತಾ ಬಂದಿತ್ತು. ಕೋಟಿಗಳ ಲೆಕ್ಕದಲ್ಲಿ ದುಡ್ಡು ಕೊಟ್ಟು ತನ್ನಲ್ಲೇ ಉಳಿಸಿಕೊಂಡಿತ್ತು.
ಐದಾರು ವರ್ಷಗಳಿಂದ ರಿಯಾನ್ ಪರಾಗ್ ಮೇಲೆ ರಾಜಸ್ಥಾನ ತಂಡ ಮಾಡಿದ investment ಈಗ ಫಲ ಕೊಡುತ್ತಿದೆ. ಇದು ಒಬ್ಬ ಆಟಗಾರನನ್ನು ಬೆಳೆಸುವ ರೀತಿ. ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಥಾ ಒಬ್ಬ ಆಟಗಾರನನ್ನು ರೆಡಿ ಮಾಡಿದ್ದರೆ ಕೇಳಿ.. ಇವರು ಸಪೋರ್ಟ್ ಮಾಡುತ್ತಿರುವುದು ಆ ಅನುಜ್ ರಾವತ್, ಆ ಪ್ರಭುದೇಸಾಯಿಯಂಥಾ ಯೂಸ್’ಲೆಸ್’ಗಳಿಗೆ.
ನಮ್ಮಲ್ಲೇ ಅಭಿನವ್ ಮನೋಹರ್ ಇದ್ದ. ಗುಜರಾತ್ ಟೈಟನ್ಸ್ ಪರ ಆಡುತ್ತಿದ್ದಾನೆ. ಅವನನ್ನು ತಂಡಕ್ಕೆ ಸೇರಿಸಿಕೊಂಡಿದ್ದಿದ್ದರೆ, ಮುಂದೆ ಆರ್’ಸಿಬಿಗೆ ಆಸ್ತಿಯಾಗುತ್ತಿದ್ದ. ಇನ್ನು ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ.. ಎಲ್ಲರೂ ಇಲ್ಲಿಂದಲೇ ಐಪಿಎಲ್ ಶುರು ಮಾಡಿದವರು. ರಾಹುಲ್’ನನ್ನ ಉಳಿಸಿಕೊಂಡಿದ್ದರೆ ವಿರಾಟ್ ಕೊಹ್ಲಿ ಬಳಿಕ rcbಗೆ ನಾಯಕತ್ವದ ಸಮಸ್ಯೆಯೇ ಇರುತ್ತಿರಲಿಲ್ಲ. ಮಯಾಂಕ್, ಮನೀಶ್ ಪಾಂಡೆ ವಿಚಾರದಲ್ಲೂ ಅಷ್ಟೇ. rcb ಪರ ಚೆನ್ನಾಗಿ ಆಡುತ್ತಿದ್ದಾಗಲೇ ತಂಡದಿಂದ ಹೊರ ಬಿದ್ದರು.
ಇವರಿಗೆ ಆಟಗಾರರನ್ನು ಬೆಳೆಸಿ ಗೊತ್ತಿಲ್ಲ. ಬೆಳೆದು ನಿಂತ ಆಟಗಾರರ ಬ್ರ್ಯಾಂಡ್’ನಲ್ಲಿ ಬೇಳೆ ಬೇಯಿಸಿಕೊಳ್ಳುವುದಷ್ಟೇ ಗೊತ್ತು.
#RiyanParag #riyanparag_astarisborn #Parag #ipl2024 #ipl #RR #RajasthanRoyals #rcb2024 #rcb #rcbfans #rcbforever #RCBvsMI