ಕ್ರಿಕೆಟ್ಬೆಂಗಳೂರು-ಭಂಡಾರಿ ದಾಳಿಗೆ ಕುಸಿದ ನಾಗಾ ಇಲೆವೆನ್-M.K.S ಕೋಲಾರ ತಂಡಕ್ಕೆ 6 ರನ್...

ಬೆಂಗಳೂರು-ಭಂಡಾರಿ ದಾಳಿಗೆ ಕುಸಿದ ನಾಗಾ ಇಲೆವೆನ್-M.K.S ಕೋಲಾರ ತಂಡಕ್ಕೆ 6 ರನ್ ಜಯ

-

- Advertisment -spot_img
ಕೆ.ಟಿ‌.ಪಿ‌.ಎಲ್ ಮೊದಲ ಪಂದ್ಯದಲ್ಲಿ ಎಮ್.ಕೆ.ಎಸ್ ಕೋಲಾರ ತಂಡ,ನಾಗಾ ಇಲೆವೆನ್ ವಿರುದ್ಧ 6 ರನ್ ಗಳ ಅಂತರದ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಎಮ್.ಕೆ.ಎಸ್ ಕೋಲಾರ ಅಜರ್ ಅಹಮದ್ 13,ಅಕ್ಷಯ್ ಶೆಟ್ಟಿ 9,ಮಹೇಶ್ 8 ರನ್ ಗಳ ನೆರವಿನಿಂದ 8 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 64 ರನ್ ಪೇರಿಸಿತ್ತು.
ಚೇಸಿಂಗ್ ವೇಳೆ ನಾಗಾ ಇಲೆವೆನ್,ಸಾಗರ್ ಭಂಡಾರಿ ಮೊದಲ ಓವರ್ ನ ಉರಿ ದಾಳಿಗೆ ತತ್ತರಿಸಿ,ಲಗು ಬಗನೆ ಆರಂಭಿಕ ಕ್ರಮಾಂಕದ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತು.ಅಂತಿಮ ಹಂತದಲ್ಲಿ ಪ್ರಶಾಂತ್ ಕುಟ್ಟಿ ಬಿರುಸಿನ 16,ಯತೀಶ್ 14,ಸೋನು 11 ರನ್ ಗಳಿಸಿದರೂ,ಅಂತಿಮವಾಗಿ 8 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಇನ್ನಿಂಗ್ಸ್ ಆಧರಿಸಿ,ಬೌಲಿಂಗ್ ನಲ್ಲಿ 2 ಓವರ್ ಗಳಲ್ಲಿ 7 ರನ್ ನೀಡಿ 2 ವಿಕೆಟ್ ಪಡೆದ ಸಾಗರ್ ಭಂಡಾರಿ ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.
ಚಿತ್ರ ಕೃಪೆ-M Sports
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

12 − 3 =

Latest news

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ ಕರ್ನಾಟಕದ ಮಾಜಿ ಕ್ರಿಕೆಟಿಗ ಹಾಗೂ ಪ್ರತಿಭಾವಂತ ವೇಗದ ಬೌಲರ್ ಎಸ್.ಎಲ್. ಅಕ್ಷಯ್ ಅವರು ಭಾನುವಾರ ಲೀಗ್ ಪಂದ್ಯವೊಂದರ...

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್ ಅರಸೀಕೆರೆಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಕ್ರೀಡಾ ರಸದೌತಣ ನೀಡಲು “ಅರಸೀಕೆರೆ ಚಾಂಪಿಯನ್ಸ್...

ವಿಶ್ವಕರ್ಮ ಸಮುದಾಯದ ಇತಿಹಾಸದಲ್ಲೇ ಅತಿದೊಡ್ಡ ಕ್ರಿಕೆಟ್ ಟೂರ್ನಮೆಂಟ್ : ಚಿತ್ರದುರ್ಗದಲ್ಲಿ ‘ವಿಶ್ವಕರ್ಮ ಪ್ರೀಮಿಯರ್ ಲೀಗ್ 2026’

ವಿಶ್ವಕರ್ಮ ಸಮುದಾಯದ ಇತಿಹಾಸದಲ್ಲೇ ಅತಿದೊಡ್ಡ ಕ್ರಿಕೆಟ್ ಟೂರ್ನಮೆಂಟ್ : ಚಿತ್ರದುರ್ಗದಲ್ಲಿ ‘ವಿಶ್ವಕರ್ಮ ಪ್ರೀಮಿಯರ್ ಲೀಗ್ 2026’   ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಚಿತ್ರದುರ್ಗ ಇವರ ವತಿಯಿಂದ ಕರ್ನಾಟಕ...

ಯಲಹಂಕದಲ್ಲಿ ಮೇ 29ರಿಂದ ‘ರಾಕರ್ಸ್ ಟ್ರೋಫಿ 2026’ ಕ್ರಿಕೆಟ್ ಟೂರ್ನಿ

ಯಲಹಂಕದಲ್ಲಿ ಮೇ 29ರಿಂದ ‘ರಾಕರ್ಸ್ ಟ್ರೋಫಿ 2026’ ಕ್ರಿಕೆಟ್ ಟೂರ್ನಿ ಬೆಂಗಳೂರು ಉತ್ತರದ ಯಲಹಂಕ ನ್ಯೂಟೌನ್‌ನ ಹೊಯ್ಸಳ ಮೈದಾನದಲ್ಲಿ ಮೇ 29, 30 ಮತ್ತು 31ರಂದು “ಯಲಹಂಕ...
- Advertisement -spot_imgspot_img

ಕಡಿಯಾಳಿಯಲ್ಲಿ ‘ಸೈಮಂಡ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ : ಮೇ 24ರಂದು ಟೂರ್ನಿ

ಕಡಿಯಾಳಿಯಲ್ಲಿ ‘ಸೈಮಂಡ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ : ಮೇ 24ರಂದು ಟೂರ್ನಿ ಉಡುಪಿ ಜಿಲ್ಲೆಯ ಕಡಿಯಾಳಿ ಶಾಲಾ ಮೈದಾನದಲ್ಲಿ ಮೇ 24, 2026ರಂದು “ಸೈಮಂಡ್ಸ್ ಪ್ರೀಮಿಯರ್ ಲೀಗ್...

ಕಟಪಾಡಿಯಲ್ಲಿ ಜರುಗಿದ ವಿಶ್ವಕರ್ಮ ಸಮಾಜದ ಕ್ರಿಕೆಟ್ ಟೂರ್ನಮೆಂಟ್ : ರತನ್ ರಾಕರ್ಸ್ ಕುಂದಾಪುರ ಚಾಂಪಿಯನ್

ಕಟಪಾಡಿಯಲ್ಲಿ ಜರುಗಿದ ವಿಶ್ವಕರ್ಮ ಸಮಾಜದ ಕ್ರಿಕೆಟ್ ಟೂರ್ನಮೆಂಟ್ : ರತನ್ ರಾಕರ್ಸ್ ಕುಂದಾಪುರ ಚಾಂಪಿಯನ್ ಕಟಪಾಡಿ : ಯುವಕ ಸೇವಾದಳ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ,...

Must read

- Advertisement -spot_imgspot_img

You might also likeRELATED
Recommended to you