ಕೆ.ಟಿ.ಪಿ.ಎಲ್ ದ್ವಿತೀಯ ಪಂದ್ಯದಲ್ಲಿ ಕ್ರಿಕೆಟ್ ನಕ್ಷತ್ರ,ಕ್ರಿಶಾ ಇಲೆವೆನ್ ಕುಂದಾಪುರದ ತಂಡದ ವಿರುದ್ಧ 1 ರನ್ ಗಳ ಅಂತರದ ರೋಚಕ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಕ್ರಿಕೆಟ್ ನಕ್ಷತ್ರದ ಬ್ಯಾಟಿಂಗ್ ಐಕಾನ್ ದಾವಣಗೆರೆ ಹಾಲಪ್ಪ ಬಿರುಸಿನ 19 ರನ್ ಮತ್ತು ಸಚಿನ್ ಮಹಾದೇವ್ 11 ರನ್ ಗಳ ನೆರವಿನಿಂದ 8 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 62 ರನ್ ಪೇರಿಸಿತ್ತು.
ಇದಕ್ಕುತ್ತರವಾಗಿ ಕ್ರಿಶಾ ಇಲೆವೆನ್ ಕುಂದಾಪುರದ ಸುಜಿತ್ 17,ಮತ್ತು ಕಿಝರ್ 11 ಬಿರುಸಿನ ರನ್ ಗಳಿಸಿಯೂ,
ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 61ರನ್ ಗಳಿಸಿ 1 ರನ್ ಅಂತರದ ಸೋಲೊಪ್ಪಿಕೊಂಡಿತು.
ಬ್ಯಾಟಿಂಗ್ ನಲ್ಲಿ ಮಿಂಚಿ,ರೋಚಕ ಘಟ್ಟದಲ್ಲಿ ನೇರ ಗುರಿಯ ಮೂಲಕ ಎದುರಾಳಿಯ ವಿಕೆಟ್ ಉರುಳಿಸಿದ ಹಾಲಪ್ಪ ಪಂದ್ಯಶ್ರೇಷ್ಟ ಗೌರವಕ್ಕೆ ಪಾತ್ರರಾದರು.