ಕೆ.ಟಿ.ಪಿ.ಎಲ್ ಮೊದಲ ಪಂದ್ಯದಲ್ಲಿ ಎಮ್.ಕೆ.ಎಸ್ ಕೋಲಾರ ತಂಡ,ನಾಗಾ ಇಲೆವೆನ್ ವಿರುದ್ಧ 6 ರನ್ ಗಳ ಅಂತರದ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಎಮ್.ಕೆ.ಎಸ್ ಕೋಲಾರ ಅಜರ್ ಅಹಮದ್ 13,ಅಕ್ಷಯ್ ಶೆಟ್ಟಿ 9,ಮಹೇಶ್ 8 ರನ್ ಗಳ ನೆರವಿನಿಂದ 8 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 64 ರನ್ ಪೇರಿಸಿತ್ತು.
ಚೇಸಿಂಗ್ ವೇಳೆ ನಾಗಾ ಇಲೆವೆನ್,ಸಾಗರ್ ಭಂಡಾರಿ ಮೊದಲ ಓವರ್ ನ ಉರಿ ದಾಳಿಗೆ ತತ್ತರಿಸಿ,ಲಗು ಬಗನೆ ಆರಂಭಿಕ ಕ್ರಮಾಂಕದ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತು.ಅಂತಿಮ ಹಂತದಲ್ಲಿ ಪ್ರಶಾಂತ್ ಕುಟ್ಟಿ ಬಿರುಸಿನ 16,ಯತೀಶ್ 14,ಸೋನು 11 ರನ್ ಗಳಿಸಿದರೂ,ಅಂತಿಮವಾಗಿ 8 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಇನ್ನಿಂಗ್ಸ್ ಆಧರಿಸಿ,ಬೌಲಿಂಗ್ ನಲ್ಲಿ 2 ಓವರ್ ಗಳಲ್ಲಿ 7 ರನ್ ನೀಡಿ 2 ವಿಕೆಟ್ ಪಡೆದ ಸಾಗರ್ ಭಂಡಾರಿ ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.
ಚಿತ್ರ ಕೃಪೆ-M Sports