ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಗೌಂಡ್ಸ್ ಮನ್ ರಾಮಣ್ಣ (75) ಇಂದು ವಿಧಿವಶರಾಗಿದ್ದಾರೆ. ನಿಷ್ಠಾವಂತ ಕೆಲಸಗಾರರಾಗಿ ಗುರುತಿಸಿಕೊಂಡಿದ್ದ ರಾಮಣ್ಣನವರ ನಿಧನಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಂತಾಪ ಸೂಚಿಸಿದೆ.
ತಮ್ಮ ಇಡೀ ಜೀವನವನ್ನು ಕ್ರಿಕೆಟ್ ಮೈದಾನದಲ್ಲಿ ಕಳೆದು ಕ್ರಿಕೆಟ್‌ಗಾಗಿ ಮುಡಿಪಾಗಿಟ್ಟಿದ್ದ ರಾಮಣ್ಣ, 53 ವರ್ಷಗಳ ಕಾಲ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಗೌಂಡ್ಸ್‌ಮನ್ ಆಗಿ ಸೇವೆ ಸಲ್ಲಿಸಿದ್ದರು. ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದ ರಾಮಣ್ಣ, ಹಾಲಿ ಹಾಗೂ ಮಾಜಿ ಕ್ರಿಕೆಟಿಗರ ಜೊತೆ ಉತಮ ಬಾಂಧವ್ಯ ಹೊಂದಿದ್ದರು.
ಇವರ ಆತ್ಮಕ್ಕೆ ಚಿರಶಾಂತಿ ದೊರಕಲಿ…