10.3 C
London
Saturday, April 20, 2024
Homeಕ್ರಿಕೆಟ್ಮಗಳ ಕ್ರಿಕೆಟ್​​​ ಬದುಕಿಗಾಗಿ ತನ್ನ ಕೆಲಸವನ್ನು ತ್ಯಜಿಸಿ ಜಮೀನು ಮಾರಿದ ತಂದೆ; ವಿಶ್ವಕಪ್​​ ಗೆದ್ದು...

ಮಗಳ ಕ್ರಿಕೆಟ್​​​ ಬದುಕಿಗಾಗಿ ತನ್ನ ಕೆಲಸವನ್ನು ತ್ಯಜಿಸಿ ಜಮೀನು ಮಾರಿದ ತಂದೆ; ವಿಶ್ವಕಪ್​​ ಗೆದ್ದು ಅಪ್ಪನಿಗೆ ಉಡುಗೊರೆ ಕೊಟ್ಟ ಯುವ ಆಟಗಾರ್ತಿ ತ್ರಿಷಾ ರೆಡ್ಡಿ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಈ ಬಾರಿ 19 ವರ್ಷದೊಳಗಿನವರ ವಿಶ್ವಕಪ್​ ಗೆದ್ದ ಭಾರತೀಯ ಮಹಿಳಾ ತಂಡಕ್ಕೆ ಬಿಸಿಸಿಐ 5 ಕೋಟಿ ರೂಪಾಯಿಯ ಭಾರಿ ಬಹುಮಾನವನ್ನು ಘೋಷಣೆ ಮಾಡಿ ಮಹಿಳಾ ಕ್ರಿಕೆಟ್ ಗೆ ಮತ್ತಷ್ಟು ಸ್ಫೂರ್ತಿ ತುಂಬಿದೆ.
ಈ ವಿಶ್ವಕಪ್ ನ ಎಲ್ಲಾ ಪಂದ್ಯಗಳಲ್ಲೂ  ಟೀಂ ಇಂಡಿಯಾ ಪರ ಅಲ್ ರೌಂಡರ್ ಆಟದ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದ ತ್ರಿಷಾ ಹೆಸರು ಕೂಡ ವಿಶ್ವ ಕ್ರಿಕೆಟ್ ಅಂಗಳದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ
ಮೊದಲ ಆವೃತ್ತಿಯ ಐಸಿಸಿ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಅಂತಿಮ ಫೈನಲ್‌ ಪಂದ್ಯದಲ್ಲಿ ಕಪ್ ಗಾಗಿ ಕಾದಾಡಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ವಿಶ್ವದಾದ್ಯಂತ ಟೀಂ ಇಂಡಿಯಾ ಆಟಗಾರ್ತಿಯರ ಸಾಧನೆಗೆ ಪ್ರಶಂಸೆಗಳ ಸುರಿಮಳೆಯೆ ಹರಿದುಬರುತ್ತಿದೆ. ಈ ಬಾರಿಯ ವಿಶ್ವಕಪ್  ಗೆಲ್ಲುವುದರ ಹಿಂದೆ ಟೀಂ ಇಂಡಿಯಾ ಆಟಗಾರ್ತಿಯರ ಪರಿಶ್ರಮ ಮೆಚ್ಚುವಂತದ್ದು.
ಕ್ರಿಕೆಟ್​ ಮೇಲಿನ ಪ್ರೀತಿ, ಆಟಗಾರರಿಗೆ ಸಿಕ್ಕ ಬೆಂಬಲ ಸೇರಿದಂತೆ ಹಲವು ಅಂಶಗಳ ಬಗ್ಗೆ ಗೌರವದ ಮಾತುಗಳು ಕೇಳಿಬರುತ್ತಿವೆ.
ವಿಶ್ವಕಪ್​ ಗೆದ್ದ ತಂಡಕ್ಕೆ ಬಿಸಿಸಿಐ ಭಾರೀ ಬಹುಮಾನವನ್ನು ಘೋಷಣೆ ಮಾಡಿದೆ. ಈ ನಡುವೆ ಟೀಂ ಇಂಡಿಯಾದಲ್ಲಿ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದ ತ್ರಿಷಾ ಹೆಸರು ಕೂಡ ಸಾಕಷ್ಟು ಸದ್ದು ಮಾಡುತ್ತಿದೆ. ಹೌದು, ಅಂಡರ್​19  ವಿಶ್ವಕಪ್​ನಲ್ಲಿ ಭಾರತದ ಟಾಪ್​ ಅಲ್ ರೌಂಡರ್ ಆಗಿ  ಹೊರ ಹೊಮ್ಮಿರುವ ತ್ರಿಷಾ, 17 ವರ್ಷಕ್ಕೆ ತಮ್ಮ ಸಾಮರ್ಥ್ಯವೇನು ಅಂತ ಸಾಬೀತು ಪಡಿಸಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಆಡಿದ 10 ಪಂದ್ಯಗಳಲ್ಲಿ 172 ರನ್​ ಗಳಿಸಿ ತ್ರಿಷಾ, ಒಂದು ಅರ್ಧ ಶತಕವನ್ನು ಸಿಡಿಸಿ ಮಿಂಚಿದ್ದರು. ಅಲ್ಲದೇ ಫೈನಲ್​ ಪಂದ್ಯದಲ್ಲಿ ತೀವ್ರ ಒತ್ತಡದ ನಡುವೆಯೂ 29 ಬಾಲುಗಳಲ್ಲಿ 24 ರನ್ ಗಳಿಸಿ ಉತ್ತಮ ಪ್ರದರ್ಶನ ಮೂಲಕ ಭಾರತ ತಂಡ ವಿಶ್ವಕಪ್ ಗೆಲ್ಲಲು ಪ್ರಮುಖಪಾತ್ರ ವಹಿಸಿದ್ದಾಳೆ ತ್ರೀಷಾ. ವಿಶ್ವ ಕ್ರಿಕೆಟ್ ನ ಗಮನ ಸೆಳೆದಿದ್ದಾಳೆ ಪ್ರತಿ ಪಂದ್ಯದಲ್ಲೂ ಪಿಚ್​​ಅನ್ನು ಉತ್ತಮವಾಗಿ ಆರ್ಥೈಸಿಕೊಂಡು, ತಂಡದ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್​ ಬೀಸಿ ತಂಡದ ಗೆಲುವಿಗೆ ಕಾಣಿಕೆ ನೀಡುವಲ್ಲಿ ಯಶಸ್ವಿಯಾಗಿರುವ ತ್ರೀಷಾ ಭಾರತ ಮಹಿಳಾ ತಂಡದ ಶ್ರೇಷ್ಠ ಆಟಗಾರ್ತಿ ಆಗುವುದರಲ್ಲಿ ಯಾವು ಅನುಮಾನವಿಲ್ಲ.
ವಿಶೇಷ ಎಂದರೆ ವಿಶ್ವಕಪ್ ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಇಂಗ್ಲೆಂಡ್ ಕ್ಯಾಪ್ಟನ್​ರನ್ನು ಅತ್ಯುತ್ತಮ ಕ್ಯಾಚ್​ ಹಿಡಿಯುವ ಮೂಲಕ ಫೈನಲ್​ ಪಂದ್ಯದಲ್ಲಿ ಔಟ್​ ಮಾಡಿದ್ದ ತ್ರೀಷಾ ಈ ಮೂಲಕ ಪಂದ್ಯಕ್ಕೆ ತಿರುವು ನೀಡಿದ್ದರು.
*ತ್ರಿಷಾ ಹಿನ್ನಲೆ…*
 ತೆಲಂಗಾಣದ ಭದ್ರಾಚಲಂ ಜಿಲ್ಲೆಯ ರಾಮಿರೆಡ್ಡಿಯ ಪುತ್ರಿಯಾಗಿರುವ ತ್ರಿಷಾ ಹೆಚ್ಚು ಎತ್ತರದವಳಲ್ಲ ಈ ಕಾರಣದಿಂದ ಮಗಳು ಹಾಕಿ ಮತ್ತು ಟೆನ್ನಿಸ್ ಆಡಲು ಅವಳ ಬೆಳವಣಿಗೆ ಸೂಕ್ತವಲ್ಲ ಎಂದು ತೀರ್ಮಾನಿಸಿದ ತಂದೆ ತ್ರೀಷಾ ಕೈಯಲ್ಲಿ ಕ್ರಿಕೆಟ್ ಬ್ಯಾಟ್ ಮತ್ತು ಬಾಲ್ ನೀಡಿ ಪ್ರೋತ್ಸಹಿಸಿದರು. ಮಗಳ ಪ್ರತಿ ಕ್ಷಣವು ಕ್ರಿಕೆಟ್ ಗಾಗಿ ಮಿಸಲಿಟ್ಟು ಆಕೆಯ ಕ್ರಿಕೆಟ್ ಕಲಿಕೆಗೆ ಹಗಲಿರುಳು ಶ್ರಮಿಸಿದರು. ಚಿಕ್ಕಂದಿನಿಂದಲೂ ತಂದೆಯ ಮನೆಯವರ ಪ್ರೋತ್ಸಾಹ ಸಿಕ್ಕ ಹುಡುಗಿ ತ್ರೀಷಾ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಕಾರಣವಾಗಿದೆ. ತನ್ನ ಎಂಟನೇ ವಯಸ್ಸಿಗೆ ಜಿಲ್ಲಾ ಮಟ್ಟದ ಕ್ರಿಕೆಟ್​ ಟೂರ್ನಿಯಲ್ಲಿ ತ್ರಿಷಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಳು.
ಮಗಳ ಕ್ರಿಕೆಟ್ ಮೇಲಿನ ಪ್ರೀತಿ ಕಂಡ ತಂದೆ ರಾಮಿರೆಡ್ಡಿ ಕೂಡ ಆಕೆಯ ಕನಸಿಗೆ ಪ್ರೋತ್ಸಾಹ ನೀಡಿದ್ದರು. ಮಗಳ ಕ್ರಿಕೆಟ್​ ವೃತ್ತಿ ಜೀವನಕ್ಕಾಗಿ ಇದ್ದ ಜಮೀನು, ಜಿಮ್​ ಸೆಂಟರ್ ಮಾರಾಟ ಮಾಡಿ ಹೈದರಾಬಾದ್​ಗೆ ವಲಸೆಹೊಗಿದ್ದರು. ಅಷ್ಟೇ ಅಲ್ಲದೆ ಮಗಳ ಕ್ರಿಕೆಟ್​​ ಉತ್ತಮವಾಗಲು ತಮ್ಮ ಕೆಲಸವನ್ನು ಬಿಟ್ಟು ಸಂಪೂರ್ಣ ತಮ್ಮ ಸಮಯವನ್ನು ಆಕೆಯ ಕ್ರಿಕೆಟ್ ಕಲಿಕೆಗಾಗಿ ಮುಡಿಪಾಗಿಟ್ಟಿದ್ದರು.
ತಂದೆ ಆಸೆಯಂತೆ ತ್ರಿಷಾ ಕೂಡ ಇಂದು ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಟೀಂ ಇಂಡಿಯಾ ಕಪ್​ ಗೆಲ್ಲುತ್ತಿದ್ದಂತೆ ಮನೆಯಲ್ಲಿ ಕೂತು ಪಂದ್ಯ ವೀಕ್ಷಣೆ ಮಾಡುತ್ತಿದ್ದ ರಾಮಿರೆಡ್ಡಿ ಕೂಡ ಸಾಕಷ್ಟು ಸಂತೋಷ ಪಟ್ಟು ತನ್ನವರ ಬಳಿ ಖುಷಿ ಹಂಚಿಕೊಂಡಿದ್ದಾರೆ.
ಭಾರತದ ತಂಡ ಕಪ್ ಗೆಲ್ಲುತ್ತಿದ್ದಂತೆ ಮಾಧ್ಯಮದೊಂದಿಗೆ ಖುಷಿ ಹಂಚಿಕೊಂಡಿರುವ ತ್ರಿಷಾ, ಗೆಲುವಿನ ಕ್ಷಣಗಳು ಖುಷಿಯನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಗಾಳಿಯಲ್ಲಿ ತೆಲಿದಂತಹ ಅನುಭವ. ಟೂರ್ನಿಯಲ್ಲಿ ನನಗೆ ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡಿದ್ದೇನೆ ಎಂದು ಹೆಮ್ಮೆಯಿಂದ  ಹೇಳಿದ್ದಾರೆ.
ಅಲ್ಲದೇ, ಅನುಭವಿ ಆಟಗಾರ್ತಿಯರಾದ ಕ್ಯಾಪ್ಟನ್ ಶಫಾಲಿ ವರ್ಮಾ, ರಿಚಾ ಘೋಷ್ ರಂತಹ ಆಟಗಾರರು ತಂಡದಲ್ಲಿದ್ದ ಕಾರಣ ಹೆಚ್ಚಿನ ಒತ್ತಡ ನಮಗಿರಲಿಲ್ಲ. ಟೂರ್ನಿಯಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಆಡಿದ್ದೇವು. ಫೈನಲ್ ಪಂದ್ಯದಲ್ಲಿ ಔಟ್​ ಆಗದೆ ಅಂತಿಮ ಎಸೆತದವರೆಗೂ ಆಡಬೇಕಿತ್ತು. ಕಪ್ ಗೆದ್ದಿರುವ ನನ್ನ ಜೀವನ ಅತ್ಯಂತ ಸಂತಸ ಕ್ಷಣವಾಗಿದೆ ಎಂದು ತನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ
ತಂದೆಯ ಶ್ರಮ ವ್ಯರ್ಥವಾಗಲಿಲ್ಲ ಅವರ ಕನಸನ್ನು ಅರ್ಧದಷ್ಟು ಮಾತ್ರ ಈಡೇರಿಸಿದ್ದೇನೆ ನಾಮು ಭಾರತೀಯ ಹಿರಿಯರ ಪರವಾಗಿ ಆಡಿ ಉತ್ತಮ ಪ್ರದರ್ಶನ ನೀಡಿದರೆ ನನ್ನ ತಂದೆಯ ಸಂಪೂರ್ಣ ಆಸೆ ಈಡೇರಿಸಿದಂತಾಗುತ್ತದೆ ಎಂದು ಹೇಳಿದರು ತ್ರಿಷಾ..
 ಅದೇನೇ ಇರಲಿ ಭಾರತ 19ವರ್ಷದೊಳಗಿನ ಮಹಿಳಾ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖಪಾತ್ರ ವಹಿಸಿದ ತ್ರೀಷಾಳ ಮುಂದಿನ ಕ್ರಿಕೆಟ್ ಪಯಣ ಯಶಸ್ವಿಯಾಗಿ ಭಾರತಿಯ ಮಹಿಳಾ ಕ್ರಿಕೆಟ್ ಬಾನೆತ್ತರಕ್ಕೆ ಬೆಳೆಯಲಿ ಎನ್ನುವುದು ನಮ್ಮೆಲ್ಲರ ಆಸಯವಾಗಿದೆ.
ಮತ್ತೊಮ್ಮೆ ಅಂಡರ್ 19 ಚೊಚ್ಚಲ ಮಹಿಳಾ ವಿಶ್ವಕಪ್ ಗೆದ್ದ ನಮ್ಮ ಭಾರತೀಯ ಮಹಿಳಾ ತಂಡಕ್ಕೆ ಶುಭಾಶಯಗಳು
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Latest stories

LEAVE A REPLY

Please enter your comment!
Please enter your name here

5 + sixteen =