Uncategorizedಉತ್ತಮ ಸ್ಥಿತಿಯಲ್ಲಿ ಆಂಧ್ರ ತಂಡ, ಕ್ಯಾಪ್ಟನ್ ತಿಮ್ಮಪ್ಪಯ್ಯ ಟ್ರೋಫಿ ಕ್ರಿಕೆಟ್ ಟೂರ್ನಿಯ...

ಉತ್ತಮ ಸ್ಥಿತಿಯಲ್ಲಿ ಆಂಧ್ರ ತಂಡ, ಕ್ಯಾಪ್ಟನ್ ತಿಮ್ಮಪ್ಪಯ್ಯ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌  ಪಂದ್ಯ

-

- Advertisment -spot_img

ಬೆಂಗಳೂರು : ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೂ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ ಮುನ್ನಡೆಯು ಆಂಧ್ರ ಕ್ರಿಕೆಟ್ ಸಂಸ್ಥೆಯನ್ನು ಉತ್ತಮ ಸ್ಥಿತಿಗೆ ತಲುಪಿಸಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ಯಾಪ್ಟನ್ ತಿಮ್ಮಪ್ಪಯ್ಯ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌  ಪಂದ್ಯದ ಮೂರನೇ ದಿನದಾಟದ ಮುಕ್ತಾಯಕ್ಕೆ ಆಂಧ್ರ ಒಟ್ಟಾರೆ 305 ರನ್‌ಗಳ ಮುನ್ನಡೆ ಸಾಧಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ 313 ರನ್ ಗಳಿಸಿದ್ದ ಆಂಧ್ರ ಭಾನುವಾರದ ದಿನದಾಟ ಮುಕ್ತಾಯಗೊಂಡಾಗ ‘ಛತ್ತೀಸಗಡ ಕ್ರಿಕೆಟ್ ಸಂಘ’ದ ಏಳು ವಿಕೆಟ್ ಕಬಳಿಸಿತ್ತು. ಛತ್ತೀಸಗಡ 182 ರನ್‌ಗಳ ಹಿನ್ನಡೆಯಲ್ಲಿತ್ತು. ಸೋಮವಾರ 16 ರನ್‌ ಗಳಿಸುವಷ್ಟರಲ್ಲಿ ಉಳಿದ ಮೂರು ವಿಕೆಟ್‌ಗಳನ್ನು ಆಂಧ್ರ ಬೌಲರ್‌ಗಳು ಉರುಳಿಸಿದರು. ಈ ಮೂಲಕ ತಂಡ 166 ರನ್‌ಗಳ ಮುನ್ನಡೆ ಸಾಧಿಸಿತು.

ಎರಡನೇ ಇನಿಂಗ್ಸ್‌ನಲ್ಲಿ ಆಂಧ್ರ ತಂಡಕ್ಕೆ ಛತ್ತೀಸಗಡ ಬೌಲರ್‌ಗಳು ಪೆಟ್ಟು ನೀಡಿದರು. ಒಂಬತ್ತು ರನ್‌ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡ ಆಂಧ್ರ ನಂತರ 24 ರನ್‌ ಗಳಿಸುವಷ್ಟರಲ್ಲಿ ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ವಿಕೆಟ್ ಕೂಡ ಕಳೆದುಕೊಂಡಿತು. ಜ್ಯೋತಿ ಸಾಯಿ ಕೃಷ್ಣ ಮತ್ತು ರಿಕಿ ಭುಯಿ ಇನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಆದರೆ ಈ ಜೋಡಿಗೆ 17 ರನ್‌ ಸೇರಿಸಲಷ್ಟೇ ಸಾಧ್ಯವಾಯಿತು.

ಜ್ಯೋತಿ ಸಾಯಿ ಔಟಾದ ನಂತರ ರಿಕಿ ಜೊತೆಗೂಡಿದ ಕರಣ್ ಶಿಂಧೆ 36 ರನ್‌ ಸೇರಿಸಿದರು. ಇವರಿಬ್ಬರ ಜೊತೆಯಾಟವೂ ಮುರಿದು ಬಿದ್ದ ನಂತರ ಆಂಧ್ರ ಇನಿಂಗ್ಸ್‌ ಮತ್ತೆ ಪತನದತ್ತ ಸಾಗಿತು. ದಿನದಾಟ ಮುಕ್ತಾಯದ ವೇಳೆ ಶೋಯೆಬ್‌ ಮೊಹಮ್ಮದ್ ಖಾನ್ ಭರವಸೆಯಾಗಿ ಉಳಿದಿದ್ದಾರೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಆಂಧ್ರ ಕ್ರಿಕೆಟ್ ಸಂಸ್ಥೆ: 313; ಛತ್ತೀಸಗಡ ಕ್ರಿಕೆಟ್ ಸಂಘ: 43 ಓವರ್‌ಗಳಲ್ಲಿ 147 (ಕೆ.ವಿ.ಶಶಿಕಾಂತ್ 39ಕ್ಕೆ4, ಸಿ.ಎಚ್‌.ಸ್ಟೀಫನ್ 52ಕ್ಕೆ3, ಗಿರಿನಾಥ್‌ ರೆಡ್ಡಿ 40ಕ್ಕೆ2); ಎರಡನೇ ಇನಿಂಗ್ಸ್‌: ಆಂಧ್ರ ಕ್ರಿಕೆಟ್ ಸಂಸ್ಥೆ: 48 ಓವರ್‌ಗಳಲ್ಲಿ 7ಕ್ಕೆ 139 (ರಿಕಿ ಭುಯಿ 24, ಕರಣ್ ಶಿಂಧೆ 22, ಶೋಯೆಬ್‌ ಮೊಹಮ್ಮದ್ ಖಾನ್ ಔಟಾಗದೆ 20; ಪಂಕಜ್ ರಾವ್‌ 28ಕ್ಕೆ1, ಪುನೀತ್ ದಾತೆ 19ಕ್ಕೆ3, ವೀರ ಪ್ರತಾಪ ಸಿಂಗ್‌ 39ಕ್ಕೆ1)

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

2 × one =

Latest news

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026 ಉಡುಪಿ: ಅಕ್ಷಯ ಕ್ರಿಕೆಟ್ ಅಕಾಡೆಮಿ, ಉಡುಪಿ ಮತ್ತು ಸನ್‌ರೈಸ್ ಕ್ರಿಕೆಟ್ ಅಕಾಡೆಮಿ, ರಂಗನಪಾಲ್ಕೆ ಇವರ...

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026...

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026 ಕಂದಾಯ ಇಲಾಖೆ ಕರ್ನಾಟಕ ರಾಜ್ಯ ಗ್ರಾಮ...

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS ಕಪ್ 2026

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS CUP 2026 CHIVAS ಎಫ್‌ಸಿ ವತಿಯಿಂದ ಅಂಡರ್-21 ಫ್ಲಡ್‌ಲೈಟ್ ಟರ್ಫ್ ಲೀಗ್ ಟೂರ್ನಮೆಂಟ್ “CHIVAS ಕಪ್ 2026”...
- Advertisement -spot_imgspot_img

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5 ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಹಾಗೂ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್...

ಆಜ್ಮಾ ಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಆಜ್ಮಾಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ಪ್ರೆಂಡ್ಸ್ ನೇಜಾರ್ ಮತ್ತು ಇಸಾಕ್ ನೇಜಾರ್ ಇವರ ನೇತೃತ್ವದಲ್ಲಿ ನಡೆಯಲಿರುವ **ಆಜ್ಮಾ ಟ್ರೋಫಿ – 2026**...

Must read

- Advertisement -spot_imgspot_img

You might also likeRELATED
Recommended to you