ತುಮಕೂರಿನ ರಜತಾದ್ರಿಪುರದ SLN ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಷ್ಟಿತ ಪಂದ್ಯಾಕೂಟದಲ್ಲಿ ಚಕ್ರವರ್ತಿ ಗೆಳೆಯರ ಬಳಗ ಪ್ರಶಸ್ತಿ ಜಯಿಸಿದೆ.
ಜಿಲ್ಲೆಯ 26 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಕೂಟದ ಫೈನಲ್ ಪಂದ್ಯದಲ್ಲಿ ಪ್ರಕಾಶ್.ಟಿ.ಸಿ ತುಮಕೂರು ಸಾರಥ್ಯದ ಚಕ್ರವರ್ತಿ ಗೆಳೆಯರ ಬಳಗ ತಂಡ ಜೆ.ಸಿ.ಪುರ ಕ್ರಿಕೆಟರ್ಸ್ ತಂಡವನ್ನು 8 ರನ್ ಗಳ ಅಂತರದಲ್ಲಿ ಸೋಲಿಸಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.
ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಅಧ್ಯಾಯದ ಪುಟಗಳಲ್ಲಿ 2 ದಶಕಗಳ ವಿಶಿಷ್ಟ ಅಧ್ಯಾಯ ಬರೆದ ತಂಡ ಚಕ್ರವರ್ತಿ ಗೆಳೆಯರ ಬಳಗ ತುಮಕೂರು. ಹಲವಾರು ಬಾರಿ ರಕ್ತದಾನ ಶಿಬಿರ ಸಂಘಟಿಸಿ,ಹಲವು ಯೂನಿಟ್ ರಕ್ತ ಸಂಗ್ರಹಿಸಿ ಜೀವ ಉಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.6 ಬಾರಿ ಹಗಲಿನ ಹಾಗೂ 3 ಬಾರಿ ಹೊನಲು ಬೆಳಕಿನಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಕೂಟಗಳನ್ನು ಅತ್ಯಂತ ಶಿಸ್ತು ಬದ್ಧವಾಗಿ ಸಂಘಟಿಸಿದೆ.
ಕ್ರಿಕೆಟ್ ಜೊತೆ ಕುಸ್ತಿ, ಕಬಡ್ಡಿ,ವಾಲಿಬಾಲ್ ಹೀಗೆ ಇನ್ನಿತರ ಕ್ರೀಡೆಗಳಿಗೆ ಆದ್ಯತೆ ನೀಡುತ್ತಿರುವ ಚಕ್ರವರ್ತಿ ತಂಡ ಜುಲೈ ನಲ್ಲಿ 20 ವರ್ಷಗಳನ್ನು ಪೂರೈಸಲಿದೆ.ಈ ತಂಡವನ್ನು ಸುಧೀರ್ಘ 15 ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ ಕೀರ್ತಿ ಪ್ರಕಾಶ್ ಟಿ.ಸಿ(ಚಕ್ರವರ್ತಿ)ಇವರಿಗೆ ಸಲ್ಲುತ್ತದೆ.
ಆರ್.ಕೆ.ಆಚಾರ್ಯ ಕೋಟ