15.7 C
London
Tuesday, September 10, 2024
Homeಕ್ರಿಕೆಟ್ಸಿಕ್ಸರ್‌ಗಳ ‘ಮಹಾರಾಜ’ನ ಆರ್ಭಟಕ್ಕೆ ಬೆಚ್ಚಿ ಬಿದ್ದ ಕ್ರಿಕೆಟ್ ಜಗತ್ತು..!

ಸಿಕ್ಸರ್‌ಗಳ ‘ಮಹಾರಾಜ’ನ ಆರ್ಭಟಕ್ಕೆ ಬೆಚ್ಚಿ ಬಿದ್ದ ಕ್ರಿಕೆಟ್ ಜಗತ್ತು..!

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ಈ ವರ್ಷದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ 10 ಇನ್ನಿಂಗ್ಸ್’ಗಳಲ್ಲಿ 52 ಸಿಕ್ಸರ್.. ಪ್ರತೀ ಪಂದ್ಯಕ್ಕೆ ಸರಾಸರಿ ಸಿಕ್ಸರ್ 5.20

ಜಗತ್ತಿನ ಶ್ರೇಷ್ಠ ಟಿ20 ಲೀಗ್ ಐಪಿಎಲ್’ನ ಒಂದೇ ಟೂರ್ನಿಯಲ್ಲಿ ಅತೀ ಹೆಚ್ಚು ಸಿಕ್ಸರ್’ಗಳನ್ನು ಬಾರಿಸಿದ ದಾಖಲೆ ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಹೆಸರಲ್ಲಿದೆ. 2012ರ ಐಪಿಎಲ್’ನಲ್ಲಿ ಗೇಲ್ 15 ಪಂದ್ಯಗಳಲ್ಲಿ 59 ಸಿಕ್ಸರ್ ಬಾರಿಸಿದ್ದ. 2019ರಲ್ಲೀ 14 ಪಂದ್ಯಗಳಿಂದ 52 ಸಿಕ್ಸರ್ ಸಿಡಿಸಿದ್ದ ಆ್ಯಂಡ್ರೆ ರಸೆಲ್’ಗೆ 2ನೇ ಸ್ಥಾನ.

ಮಹಾರಾಜ ಟ್ರೋಫಿಯಲ್ಲಿ ಅಭಿನವ್ ಮನೋಹರ್ 10 ಇನ್ನಿಂಗ್ಸ್’ಗಳಲ್ಲೇ 52 ಸಿಕ್ಸರ್’ಗಳನ್ನು ಬಾರಿಸಿದ್ದಾನೆ. “ಬ್ಯಾಟಿಂಗ್ ಸ್ನೇಹಿ ಚಿನ್ನಸ್ವಾಮಿ ಅಂಗಣದಲ್ಲಿ ಇದೇನು ಮಹಾ ಸಾಧನೆ” ಎಂದು ಕೇಳಬಹುದು. ಅಂಥವರಿಗೆ ಒಂದೇ ಒಂದು ಪ್ರಶ್ನೆ.. ಅಭಿನವ್ ಮನೋಹರನಂತೆ ಬೇರೆಯವರಿಗೆ ಏಕೆ ಇದು ಸಾಧ್ಯವಾಗಿಲ್ಲ..?

ಮಹಾರಾಜ ಟ್ರೋಫಿಯಲ್ಲಿ ಅತೀ ಹೆಚ್ಚು ಸಿಕ್ಸರ್’ಗಳನ್ನು ಬಾರಿಸಿದವರ ಪೈಕಿ 2ನೇ ಸ್ಥಾನದಲ್ಲಿರುವ ಕರುಣ್ ನಾಯರ್ ಸಿಡಿಸಿರುವ ಸಿಕ್ಸರ್’ಗಳು 27. ಅಭಿನವ್ ಮನೋಹರನಿಗೂ ಕರುಣ್ ನಾಯರ್’ಗೂ ಮಧ್ಯೆ ಇರುವ ಅಂತರ 25 ಸಿಕ್ಸರ್’ಗಳು.. “ಇದೇನು ಮಹಾ ಸಾಧನೆ” ಎಂಬ ಪ್ರಶ್ನೆಗೆ ಇದೇ ಉತ್ತರ.

ಚೆಂಡಿರುವುದೇ ಸಿಕ್ಸರ್’ಗಳನ್ನು ಬಾರಿಸುವುದಕ್ಕೆ ಎಂಬ ಮನಸ್ಥಿತಿಯವನು ಈ ಅಭಿನವ್ ಮನೋಹರ್. ಮಹಾರಾಜ ಟ್ರೋಫಿ-2024 ಟೂರ್ನಿಯಲ್ಲಿ ಈತ ಆಡಿರುವ ಇನ್ನಿಂಗ್ಸ್’ಗಳನ್ನೊಮ್ಮೆ ನೋಡಿ.
52*(29), 84*(34), 5(8), 17(12), 55(36), 46(29), 70(27), 43(25), 76*(34) & 59*(24).

10 ಪಂದ್ಯಗಳು, 258 ಎಸೆತಗಳು, 507 ರನ್, 196.51 ಸ್ಟ್ರೈಕ್’ರೇಟ್, 84.50 ಸರಾಸರಿ, 6 ಅರ್ಧಶತಕ.. This is ridiculous consistency.

ನಮ್ಮಲ್ಲೇ ಇಂತಹ ಒಬ್ಬ ವಿಧ್ವಂಸಕ ದಾಂಡಿಗನನ್ನು ಇಟ್ಟುಕೊಂಡು ಅದ್ಯಾರೋ ಸೀಮೆಗಿಲ್ಲದವರನ್ನು ತಂದು ಆಡಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಏನು ಹೇಳಬೇಕೋ ಗೊತ್ತಿಲ್ಲ. ಈ ಬಾರಿಯೂ ಅಭಿನವ್ ಮನೋಹರ್ ಕಡೆ ಆರ್’ಸಿಬಿ ಕಣ್ಣು ಬೀಳದಿದ್ದರೇನೇ ಒಳ್ಳೆಯದು. ತಂಡಕ್ಕೆ ಸೇರಿಸಿಕೊಂಡು ಆಡಿಸದಿದ್ದರೆ ಏನು ಪ್ರಯೋಜನ..?

ಕರ್ನಾಟಕ ರಣಜಿ ತಂಡಕ್ಕೆ ಅಭಿನವ್ ಮನೋಹರ್ ಜೊತೆ ಮನೋಜ್ ಭಾಂಡಗೆಯನ್ನು ಆಯ್ಕೆ ಮಾಡಿದರೆ ಹೇಗಿರುತ್ತದೆ..? ಒಬ್ಬ ಸಿಡಿಲ ಹೊಡೆತಗಳ ಬ್ಯಾಟರ್. ಇನ್ನೊಬ್ಬ quality ಆಲ್ರೌಂಡರ್. ಕೆಳ ಕ್ರಮಾಂಕದಲ್ಲಿ ಪಂದ್ಯದ ಚಿತ್ರಣವನ್ನೇ ಬದಲಿಸುವ ‘ಡೆಡ್ಲಿ ಕಾಂಬಿನೇಷನ್’ ಆಗಬಲ್ಲರು. 10 ವರ್ಷಗಳಿಂದ ರಣಜಿ ಟ್ರೋಫಿ ಗೆಲ್ಲಲು ವಿಫಲವಾಗುತ್ತಾ ಬಂದಿರುವ ಕರ್ನಾಟಕ ತಂಡಕ್ಕೆ ಈಗ ಬೇಕಿರುವುದು ಇಂತಹ X ಫ್ಯಾಕ್ಟರ್”ಗಳೇ.

Latest stories

LEAVE A REPLY

Please enter your comment!
Please enter your name here

12 + seven =