ಕ್ರಿಕೆಟ್ಹಿರಿಯೂರು ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ಮಟ್ಟದ ಅದ್ಧೂರಿಯ ಕ್ರಿಕೆಟ್ ಹಬ್ಬ...

ಹಿರಿಯೂರು ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ಮಟ್ಟದ ಅದ್ಧೂರಿಯ ಕ್ರಿಕೆಟ್ ಹಬ್ಬ ಡಿ.ಎಸ್‌.ಕಪ್-2023

-

- Advertisment -spot_img
ಹಿರಿಯೂರು-ಕರ್ನಾಟಕ ರಾಜ್ಯ ಸರಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ. ಸುಧಾಕರ್ ಇವರ ಮುತುವರ್ಜಿಯಲ್ಲಿ,ಹಿರಿಯೂರಿನಲ್ಲಿ ಸತತ ಯಶಸ್ವಿ ಕ್ರಿಕೆಟ್ ಪಂದ್ಯಾಟಗಳನ್ನು ಆಯೋಜಿಸಿದ ಕ್ರೀಡಾ ಸಂಘಟಕರಾದ ಮಹಂತೇಶ್ ಹಿರಿಯೂರು ಇವರ ಸಾರಥ್ಯದಲ್ಲಿ”ಡಿ.ಎಸ್ ಕಪ್-2023″ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿ ಆಗಸ್ಟ್ 25 ರಿಂದ ಮೂರು ದಿನಗಳ ಕಾಲ ಹಗಲಿನಲ್ಲಿ ನಡೆಯಲಿದೆ.
ಹಿರಿಯೂರು ಇತಿಹಾಸದಲ್ಲೇ ದಾಖಲೆ ಸೃಷ್ಟಿಸಲಿರುವ,ಈ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ,ಆಗಸ್ಟ್ 25, 26 ಮತ್ತು 27 ರಂದು ಆಯೋಜನೆಗೊಂಡಿದ್ದು ಕ್ರೀಡಾ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಲಿದೆ.
ರಾಜ್ಯದ ವಿವಿಧ ತಂಡಗಳು ಪಂದ್ಯಾವಳಿಯಲ್ಲಿ ಸೆಣಸಾಟ ನಡೆಸಿ, ಚಾಂಪಿಯನ್ ಪಟ್ಟ ಪಡೆಯಲು ಉತ್ತಮ ಅವಕಾಶವಿದೆ. ಪ್ರಸ್ತುತ ಹಿರಿಯೂರು ಜಿಲ್ಲೆಯಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ದುಬಾರಿ ಬಹುಮಾನವೇ ಗೆದ್ದವರಿಗೆ ಸಿಗಲಿದೆ. ಕ್ರಿಕೆಟ್ ಪಂದ್ಯಾವಳಿ ಗೆದ್ದರೆ ಪ್ರಥಮ ಬಹುಮಾನವಾಗಿ 4 ಲಕ್ಷ ನಗದು ಬಹುಮಾನ ದೊರೆಯಲಿದೆ. ದ್ವಿತೀಯ ಬಹುಮಾನವಾಗಿ 2 ಲಕ್ಷ, ತೃತೀಯ ಬಹುಮಾನವಾಗಿ 1 ಲಕ್ಷ  ನೀಡಲಾಗುತ್ತದೆ.
ಭಾಗವಹಿಸುವ ತಂಡಗಳಿಗೆ  ಪ್ರವೇಶ ಶುಲ್ಕ ರೂ. 30,000 ಆಗಿದೆ.  ಎಲ್ಲಾ ತಂಡಗಳಿಗೆ ಸಂಘಟಕರ ಪರವಾಗಿ ಜರ್ಸಿ ನೀಡಲಾಗುವುದು.ಡಿಎಸ್ ಕಪ್ ಹೆಸರಿನಲ್ಲಿ ಆಯೋಜನೆಗೊಂಡಿರುವ ಕ್ರಿಕೆಟ್ ಪಂದ್ಯಾವಳಿಗೆ  ತಂಡವನ್ನು ನೋಂದಾಯಿಸಲು ಕೊನೆಯ ದಿನಾಂಕ ಆಗಸ್ಟ್ 6 2023.
ಈ  ಈವೆಂಟ್ Y ಸ್ಪೋರ್ಟ್ಸ್ ಮುಖಾಂತರ ಯೂಟ್ಯೂಬ್ ನಲ್ಲಿ ಲೈವ್ ಸ್ಟ್ರೀಮ್ ಆಗಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ @  7204080138.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

eight + 10 =

Latest news

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಸಿದ್ಧತೆ ಬೈಂದೂರು: ಯುವ ಕ್ರಿಕೆಟ್ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ವಿಕ್ರಂ ಕ್ರಿಕೆಟ್ ಕ್ಲಬ್ ಬೈಂದೂರು ವತಿಯಿಂದ,...

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್ ಮಂಗಳೂರು ಉರ್ವಾ ಮೈದಾನದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ “ಮಂಗಳಾಪುರ ಟ್ರೋಫಿ...

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 ‘HPL-2K26’ ಕ್ರಿಕೆಟ್ ಸಂಭ್ರಮ

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 'HPL-2K26’ ಕ್ರಿಕೆಟ್ ಸಂಭ್ರಮ ಫ್ರೆಂಡ್ಸ್ ಹೊಸಂಗಡಿ ವತಿಯಿಂದ ಮೇ 9 ಮತ್ತು 10 ರಂದು ಹೊಸಂಗಡಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ...

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ ಉಳ್ಳಾಲ, ಮೇ 5: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ (ರಿ) ಹಾಗೂ...
- Advertisement -spot_imgspot_img

ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ

  ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ ಬಂಟ್ವಾಳ: ಅರ್ಜುನ್ ಭಂಡಾರ್ಕರ್ ಅವರ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಆಶಕ್ತ ಕುಟುಂಬಗಳಿಗೆ...

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್ ಮಟ್ಟು ಅಸೋಸಿಯೇಟ್ಸ್, ಉಡುಪಿ, ಇವರ ಪ್ರಾಯೋಜಕತ್ವದಲ್ಲಿ, ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ...

Must read

- Advertisement -spot_imgspot_img

You might also likeRELATED
Recommended to you