ಸ್ಪೋರ್ಟ್ಸ್ರಾಷ್ಟ್ರೀಯ ಖೋ ಖೋ ಆಟಗಾರ ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾ ಪಟು ವಿನಯ್...

ರಾಷ್ಟ್ರೀಯ ಖೋ ಖೋ ಆಟಗಾರ ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾ ಪಟು ವಿನಯ್ ಇನ್ನಿಲ್ಲ…!!

-

- Advertisment -spot_img
ವಿನಯ್ ಖೋ ಖೋ ಆಟದ ಅದ್ಭುತ ಆಟಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ ಇವರು ತಮ್ಮ ಶ್ರೇಷ್ಠ ಆಟದಿಂದಲೆ ಭಾರತ ಖೋ ಖೋ ತಂಡವನ್ನು ಪ್ರತಿನಿಧಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದರು.
ಆದರೆ ವಿಧಿ ಆಟದ ಮುಂದೆ ಎಲ್ಲಾ ಆಟವು ಶೂನ್ಯ ಎನ್ನುವುದು ವಿನಯ್ ಅವರ ಅನಿರೀಕ್ಷಿತ ಸಾವಿನಿಂದ ಸಾಭಿತಾಗಿದೆ.
ಖೋ ಖೋ ಆಟಗಾರ ವಿನಯ್ ಇತ್ತೀಚೆಗೆ ಜ್ವರದಿಂದ ಬಳಲುತಿದ್ದರು ತೀರ್ಥಹಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದ ಕಾರಣ ಇವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆಷ್ಟೋತ್ತಿಗಾಗಲೆ ವಿನಯ್ ಅವರಿಗೆ
– ಜ್ವರ ಮೆದುಳಿಗೆ ತಗುಲಿ ಸಾವು ಬದುಕಿನೊಡನೆ ಹೊರಾಡುತ್ತಿದ್ದರು ಇಂದು ಪ್ರತಿಭಾನ್ವಿತ ಖೋ ಖೋ ಆಟಗಾರ ವಿನಯ್ ವಿಧಿಯ ಆರ್ಭಟದ ಆಟದ ಎದುರು ಮಣಿಪಾಲದ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿ ತಮ್ಮ ಬದುಕಿಗೆ ಅಂತ್ಯವಾಡಿ ಹೊಗಿದ್ದಾರೆ
 ತೀರ್ಥಹಳ್ಳಿ ತಾಲೂಕಲ್ಲಿ ನೀರವ ಮೌನ ಅವರಿಸಿದೆ
 ರಾಷ್ಟ್ರೀಯ ಖೋ ಖೋ ಆಟಗಾರರಾಗಿದ್ದ ವಿನಯ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು.  ವಿನಯ್ ಅವರಿಗೆ ತೀವ್ರ ಜ್ವರ ಮೆದುಳಿಗೆ ಏರಿ ಇತ್ತೀಚೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಕಳೆದ ಏಳೆಂಟು ದಿನಗಳಿಂದ ದಾಖಲಾಗಿದ್ದರು  ತೀವ್ರವಾದ ಜ್ವರ ಇವರನ್ನು ಮೇಲೆಳಲು ಬಿಡಲಿಲ್ಲ  ಬಾಳಿ ಬದುಕಬೇಕಾಗಿದ್ದ ಯುವಕ ನಡುಹಾದಿಯಲ್ಲೆ ಬದುಕಿನ ಕೋಟಾ ಮುಗಿಸಿ ಹೊಗಿದ್ದು ಮಾತ್ರ ನಂಬಲು ಸಾಧ್ಯವಿಲ್ಲ..!
ವಿನಯ್ ಇನ್ನೂ ಮೂವತ್ತಮೂರರ ಹರಯ ಬಾಳಿ ಬದುಕಬೇಕಾಗಿದ್ದ ಯುವ ಕ್ರೀಡಾಪಟು ವಿನಯ್ ಸಾವಿನಂಚಿಗೆ ಸರಿದದ್ದು ದುರಂತವೆ ಹೌದು.
ವಿನಯ್ ವಿದ್ಯಾರ್ಥಿಯಾಗಿದ್ದಾಗಲೇ ಉತ್ತಮ ಖೋ ಖೋ ಕ್ರೀಡಾಪಟುವಾಗಿದ್ದರು ವಿನಯ್ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟವನ್ನು ಖೋ ಖೋ ಕ್ರೀಡೆಯಲ್ಲಿ ಪ್ರತಿನಿಧಿಸಿ ಹುಟ್ಟೂರು ತೀರ್ಥಹಳ್ಳಿಯ ಜೋತೆಗೆ ರಾಜ್ಯಕ್ಕೂ ಕೀರ್ತಿ ತಂದಿದ್ದರು.
ಬೆಂಗಳೂರಿನಲ್ಲಿ ಉದ್ಯೋಗಲ್ಲಿದ್ದ ವಿನಯ್ ಕರೋನಾ ಬಳಿಕ ತೀರ್ಥಹಳ್ಳಿಯಲ್ಲಿದ್ದರು. ಇವರ ಮನೆ ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆಯಲ್ಲಿದೆ   ಕಳೆದ ವರ್ಷ ವಿನಯ್ ತಂದೆ ಹೂವಪ್ಪ ಗೌಡರು ಸಾವಿಗೀಡಾಗಿದ್ದು ಇದೀಗ ಮನೆಯ ಪ್ರೀತಿಯ ಕಿರಿಮಗ ವಿನಯ್ ಅವರ ದೀಡಿರ್ ಸಾವು ಇಡೀ ಕುಟುಂಬವನ್ನು ದುಃಖದ ಒಡಲಿಗೆ ನೂಕಿದೆ.
ಮದುವೆಯಾಗಿ ಎರಡು ವರ್ಷವಾಗಿದ್ದು ವಿನಯ್ ಗೆ ಎಂಟು ತಿಂಗಳ ಹೆಣ್ಣು ಮಗುವಿದೆ.
ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ ಅಪಾರ ಸ್ನೇಹಿತ ಬಳಗವನ್ನು  ಹೊಂದಿರುವ ವಿನಯ್ ಸಾವಿನ ಸುದ್ದಿ ಕೇಳಿ ಸಂಪೂರ್ಣ ತೀರ್ಥಹಳ್ಳಿಯಲ್ಲಿ ಸೂತಕದ ಛಾಯೆ ಅವರಿಸಿದೆ.
*ಮಲೆನಾಡಿನ ಹೆಮ್ಮೆಯ ಕ್ರೀಡಾ ಪ್ರತಿಭೆ ಇನ್ನೂ ನೆನಪು ಮಾತ್ರ..*
ವಿನಯ್ ತನ್ನ ಉತ್ತಮ ಆಟದಿಂದಲೆ ತೀರ್ಥಹಳ್ಳಿಯಿಂದ ಕ್ರೀಡಾ ಕ್ಷೇತ್ರದಲ್ಲಿ ಭಾರತ ಮಟ್ಟಕ್ಕೆ ಬೆಳೆದು ನಿಂತಿದ್ದರು ಅವರ ಅದ್ಭುತವಾದ ಖೋ ಖೋ ಆಟದಿಂದಲೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಸ್ಟಾರ್ ಆಟಗಾರನಾಗಿ  ಮಿಂಚಿದ್ದರು.
ತೀರ್ಥಹಳ್ಳಿಯ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಹಾಗೂ ಕರ್ನಾಟಕವನ್ನು ಪ್ರತಿನಿಧಿಸಿ 2 ಬಾರಿ ರನ್ನರ್ ಆಗಿದ್ದರು. ವಿನಯ್ ಅವರ ಸಾಧನೆಗಾಗಿ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವ ನೀಡಿತ್ತು. ಇನ್ನೂ ವಿನಯ್ ನೆನಪು ಮಾತ್ರ ಇವರು ತಮ್ಮ ಕುಟುಂಬದ ಜೋತೆಗೆ ಅಪಾರ ಸ್ನೇಹಿತರ ಬಳಗವನ್ನು ಬಿಟ್ಟು  ಅಗಲಿದ್ದಾರೆ. ಮೃತ ವಿನಯ್ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

LEAVE A REPLY

Please enter your comment!
Please enter your name here

14 − seven =

Latest news

ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ

ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ ಕುಂದಾಪುರದ ಪ್ರತಿಷ್ಠಿತ  ನಕ್ಷತ್ರ ಜ್ಯುವೆಲ್ಲರ್ಸ್ ಪ್ರಸ್ತುತಪಡಿಸುವ ಕಲ್ಲು ಗಣಪತಿ ಟ್ರೋಫಿ 2026-27 ಕ್ರಿಕೆಟ್ ಟೂರ್ನಮೆಂಟ್‌ಗೆ...

ವಿಕ್ರಮ್ ಟ್ರೋಫಿ 2026 – ಉದಯೋನ್ಮುಖ ಕ್ರಿಕೆಟಿಗರಿಗೆ ಅದ್ಭುತ ವೇದಿಕೆ

ವಿಕ್ರಮ್ ಟ್ರೋಫಿ 2026 – ಉದಯೋನ್ಮುಖ ಕ್ರಿಕೆಟಿಗರಿಗೆ ಅದ್ಭುತ ವೇದಿಕೆ ಬೈಂದೂರಿನ ಪ್ರತಿಷ್ಠಿತ ವಿಕ್ರಮ್ ಕ್ರಿಕೆಟ್ ಕ್ಲಬ್ (VCC) ವತಿಯಿಂದ, ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (UDCA)...

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...
- Advertisement -spot_imgspot_img

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...

Must read

- Advertisement -spot_imgspot_img

You might also likeRELATED
Recommended to you