Home ಕ್ರಿಕೆಟ್ ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ

ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ

ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ

ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ

ಕುಂದಾಪುರದ ಪ್ರತಿಷ್ಠಿತ  ನಕ್ಷತ್ರ ಜ್ಯುವೆಲ್ಲರ್ಸ್ ಪ್ರಸ್ತುತಪಡಿಸುವ ಕಲ್ಲು ಗಣಪತಿ ಟ್ರೋಫಿ 2026-27 ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಟೂರ್ನಮೆಂಟ್‌ 16 ತಂಡಗಳ ಲೀಗ್ ಕಮ್ ನಾಕ್‌ಔಟ್ ಮಾದರಿಯಲ್ಲಿ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಈಗಾಗಲೇ ಅಪಾರ ಕುತೂಹಲ ಮೂಡಿಸಿದೆ.

ಈ ಬಾರಿ ಟೂರ್ನಮೆಂಟ್‌ಗೆ ವಿಶೇಷ ಆಕರ್ಷಣೆಯಾಗಿ ಭಾರೀ ಬಹುಮಾನ ಮೊತ್ತ ಘೋಷಿಸಲಾಗಿದೆ. ವಿಜೇತ ತಂಡಕ್ಕೆ ₹1,01,000/-, ರನ್ನರ್-ಅಪ್ ತಂಡಕ್ಕೆ ₹50,555/-ನಗದು ಬಹುಮಾನ ನೀಡಲಾಗುತ್ತದೆ. ಜೊತೆಗೆ ಪ್ರತಿ ಪಂದ್ಯದಲ್ಲೂ “ಮ್ಯಾನ್ ಆಫ್ ದ ಮ್ಯಾಚ್” ಪ್ರಶಸ್ತಿಯಾಗಿ ಟ್ರ್ಯಾಕ್ ಪ್ಯಾಂಟ್ ನೀಡಿ ಆಟಗಾರರನ್ನು ಗೌರವಿಸಲಾಗುತ್ತದೆ.

ಪ್ರತಿ ತಂಡದ ನೋಂದಣಿ ಶುಲ್ಕವನ್ನು ₹15,000/- ಎಂದು ನಿಗದಿಪಡಿಸಲಾಗಿದೆ.

ಟೂರ್ನಮೆಂಟ್‌ನ ನಿಯಮಾನುಸಾರ, ಒಂದು ತಂಡದಲ್ಲಿ ಕೇವಲ ಒಬ್ಬ non-state ಆಟಗಾರನಿಗೆ ಮಾತ್ರ ಅವಕಾಶ ಇರುತ್ತದೆ. ಇದು ಬಿಡ್ಡಿಂಗ್ ಮಾದರಿಯ ಟೂರ್ನಮೆಂಟ್ ಆಗಿದ್ದು, ಸ್ಥಳೀಯ ನಿರ್ದಿಷ್ಟ ಪ್ರದೇಶದ ಆಟಗಾರರಿಗೆ ಮಾತ್ರ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಆಟಗಾರರಿಗೆ ಯೂನಿಫಾರ್ಮ್ ಮತ್ತು ಆಹಾರವನ್ನು ಆಯೋಜಕರೇ ಒದಗಿಸಲಿದ್ದಾರೆ.

ಪಂದ್ಯಾವಳಿ ಮೇ 23 ರಂದು ಆಚ್ಲಾಡಿಯ ECR ಮೈದಾನದಲ್ಲಿ ನಡೆಯಲಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ರೋಚಕ ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ

ಪ್ರಜ್ವಲ್ ಶೆಟ್ಟಿ – 8904371231

 ಸೂರಜ್  ಬೇಳೂರು– 7760390882

ರಜನೀಶ್ ಸಾಸ್ತಾನ್ – 9686866878

ಇವರನ್ನು ಸಂಪರ್ಕಿಸಲು ಸಂಘಟಕರು ಮನವಿ ಮಾಡಿದ್ದಾರೆ.

ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಟಗಾರರನ್ನು ಪ್ರೋತ್ಸಾಹಿಸಿ, ಈ ಮಹಾ ಟೂರ್ನಮೆಂಟ್‌ನ ಯಶಸ್ಸಿಗೆ ಕೈಜೋಡಿಸುವಂತೆ ಆಯೋಜಕರು ವಿನಂತಿಸಿದ್ದಾರೆ.

ಈ ಪ್ರತಿಷ್ಠಿತ ಟೂರ್ನಮೆಂಟ್‌ನ ನೇರ ಪ್ರಸಾರವನ್ನು Sports Kannada  ಲೈವ್ ಟೆಲಿಕಾಸ್ಟ್ ಮಾಡಲಿದೆ.

LEAVE A REPLY

Please enter your comment!
Please enter your name here

fifteen + 1 =

ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ

ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ ಕುಂದಾಪುರದ ಪ್ರತಿಷ್ಠಿತ  ನಕ್ಷತ್ರ ಜ್ಯುವೆಲ್ಲರ್ಸ್ ಪ್ರಸ್ತುತಪಡಿಸುವ ಕಲ್ಲು ಗಣಪತಿ ಟ್ರೋಫಿ 2026-27 ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಟೂರ್ನಮೆಂಟ್‌ 16 ತಂಡಗಳ ಲೀಗ್ ಕಮ್ ನಾಕ್‌ಔಟ್ ಮಾದರಿಯಲ್ಲಿ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಈಗಾಗಲೇ ಅಪಾರ ಕುತೂಹಲ ಮೂಡಿಸಿದೆ. ಈ ಬಾರಿ ಟೂರ್ನಮೆಂಟ್‌ಗೆ ವಿಶೇಷ ಆಕರ್ಷಣೆಯಾಗಿ ಭಾರೀ ಬಹುಮಾನ ಮೊತ್ತ ಘೋಷಿಸಲಾಗಿದೆ. ವಿಜೇತ ತಂಡಕ್ಕೆ ₹1,01,000/-, ರನ್ನರ್-ಅಪ್ ತಂಡಕ್ಕೆ ₹50,555/-ನಗದು ಬಹುಮಾನ ನೀಡಲಾಗುತ್ತದೆ. ಜೊತೆಗೆ ಪ್ರತಿ ಪಂದ್ಯದಲ್ಲೂ “ಮ್ಯಾನ್ ಆಫ್ ದ ಮ್ಯಾಚ್” ಪ್ರಶಸ್ತಿಯಾಗಿ ಟ್ರ್ಯಾಕ್ ಪ್ಯಾಂಟ್ ನೀಡಿ ಆಟಗಾರರನ್ನು ಗೌರವಿಸಲಾಗುತ್ತದೆ. ಪ್ರತಿ ತಂಡದ ನೋಂದಣಿ ಶುಲ್ಕವನ್ನು ₹15,000/- ಎಂದು ನಿಗದಿಪಡಿಸಲಾಗಿದೆ. ಟೂರ್ನಮೆಂಟ್‌ನ ನಿಯಮಾನುಸಾರ, ಒಂದು ತಂಡದಲ್ಲಿ ಕೇವಲ ಒಬ್ಬ non-state ಆಟಗಾರನಿಗೆ ಮಾತ್ರ ಅವಕಾಶ ಇರುತ್ತದೆ. ಇದು ಬಿಡ್ಡಿಂಗ್ ಮಾದರಿಯ ಟೂರ್ನಮೆಂಟ್ ಆಗಿದ್ದು, ಸ್ಥಳೀಯ ನಿರ್ದಿಷ್ಟ ಪ್ರದೇಶದ ಆಟಗಾರರಿಗೆ ಮಾತ್ರ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಆಟಗಾರರಿಗೆ

Send this to a friend