ಭಾರತದ ಸ್ಟಾರ್ ಆಟಗಾರ್ತಿ ಎರಡು ಬಾರಿ ಒಲಿಂಪಿಕ್ ಕೂಟದಲ್ಲಿ ಪದಕ ವಿಜೇತೆ ಪಿವಿ ಸಿಂಧು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ತಮ್ಮ ಮೊದಲ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡು ತಮ್ಮ ಗುರಿಯನ್ನು ಸಾಧಿಸಿದ್ದಾರೆ.
ಮಹಿಳಾ ಸಿಂಗಲ್ಸ್‌ನ ಫೈನಲ್‌ನಲ್ಲಿ ಸಿಂಧು ಕೆನಡಾದ ಮಿಚೆಲ್ ಲಿ ಅವರನ್ನು 21-15, 21-13 ಅಂತರದಿಂದ ನೇರ ಸೆಟ್‌ಗಳಿಂದ ಸೋಲಿಸಿ ಚಿನ್ನದ ಪದಕವನ್ನು ಸುಲಭವಾಗಿ ಗೆದ್ದು ತಮ್ಮ ಮುಡಿಗೆರಿಸಿಕೊಂಡರು.
ಭಾನುವಾರ ನಡೆದಂತಹ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು, ಸಿಂಗಾಪುರದ ಯೆವೊ ಜಿಯಾ ಮಿನ್ ವಿರುದ್ಧ 21-19, 21-17 ಅಂತರದಲಿ 49 ನಿಮಿಷಗಳಲ್ಲೇ ಗೆಲುವು ದಾಖಲಿಸಿ ಫೈನಲ್ ಹಂತಕ್ಕೆ ತಲುಪಿದ್ದರು ಈ ಮೂಲಕ ಕಾಮನ್‌ವೆಲ್ತ್ ನಲ್ಲಿ ಸತತ 2ನೇ ಆವೃತ್ತಿಯಲ್ಲಿ ಫೈನಲ್‌ಗೇರಿದರು. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಸಿಂಧು ನಮ್ಮ ದೇಶದವರೆ ಅದ ಸೈನಾ ನೆಹ್ವಾಲ್ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟಿದ್ದರು.
*ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಬ್ಯಾಡ್ಮಿಂಟನ್, ಟಿಟಿಯಲ್ಲಿ ಚಿನ್ನ ಗೆದ್ದು, ಹಾಕಿಯಲ್ಲಿ ಬೆಳ್ಳಿ ಗೆದ್ದ ಭಾರತ*
ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬ್ಯಾಡ್ಮಿಂಟನ್ ನಲ್ಲಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಪಡೆದ ಭಾರತ ಪುರುಷರ ಡಬಲ್ಸ್ ನಲ್ಲೂ ಬಂಗಾರ ಪದಕ ಕೊರಳಿಗೇರಿಸಿಕೊಂಡಿದೆ. ಜೊತೆಗೆ ಟೇಬಲ್ ಟೆನಿಸ್ ನಲ್ಲಿ ಭಾರತದ ಶರತ್ ಕಮಲ್ ಸಿಂಗಲ್ಸ್ ನಲ್ಲೂ ಚಿನ್ನ ಗೆದ್ದಿದ್ದಾರೆ.
ಶರತ್ ಕಮಲ್-ಜ್ಞಾನಶೇಖರನ್ ಜೋಡಿ ಡಬಲ್ಸ್ ನಲ್ಲಿ ಕೂಡ ಚಿನ್ನ ಗೆದ್ದು ಭಾರತೀಯರು ಹೆಮ್ಮೆ ಪಡುವಂತೆ ಆಡಿದ್ದಾರೆ.
ಸಿಂಗಲ್ಸ್ ವಿಭಾಗದಲ್ಲೂ ಶರತ್ ಫೈನಲ್ ಗೆದ್ದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು, ಬ್ಯಾಡ್ಮಿಂಟನ್ ನಲ್ಲಿ ಪಿ.ವಿ. ಸಿಂಧು, ಲಕ್ಷ್ಯ ಸೇನ್ ಬಳಿಕ ಪುರುಷರ ಡಬಲ್ಸ್ ನಲ್ಲಿ ಚಿರಾಗ್ ಶೆಟ್ಟಿ-ಸಾತ್ವಿಕ್ ಜೋಡಿ ಫೈನಲ್ ಗೆದ್ದು ಚಿನ್ನದ ಪದಕ ತಮ್ಮದಾಗಿಸಿಕೊಂಡು ಚಿನ್ನದ ಬೇಟೆಯನ್ನು ಭರ್ಜರಿಯಾಗಿ ಮಾಡಿದ್ದರು.
ಆದರೆ ಪುರುಷರ ಹಾಕಿ ಫೈನಲ್ ನಲ್ಲಿ ಭಾರತ ನಿರಾಸೆ ಅನುಭವಿಸಿದೆ ಎನ್ನುವುದಕ್ಕಿಂತ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿ ತಾನೇ ತಲೆಬಾಗಿ ನಿರಾಯಾಸವಾಗಿ ಭಾರತ 0-7 ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.
ಒಟ್ಟಾರೆ ಕಾಮನ್‌ವೆಲ್ತ್ ಗೇಮ್ಸ್ ನ ಮುಕ್ತಾಯದ ದಿನದಂದು ಭಾರತ ನಾಲ್ಕು ಚಿನ್ನದ ಪದಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಟ್ಟು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕದೊಂದಿಗೆ 61 ಪದಕ ಗೆದ್ದು ಈ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿ ವಿದಾಯ ಹೇಳಿತು.
ಒಟ್ಟಿನಲ್ಲಿ ಈ ಬಾರಿ ಭಾರತೀಯ ಕ್ರೀಡಾ ಪಟುಗಳು ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ತಮ್ಮ ಸಾಮಾರ್ಥ್ಯವನ್ನು ಪ್ರದರ್ಶಿಸುವ ಮುಖಾಂತರ 21 ಚಿನ್ನದ ಪದಕ ಸೇರಿ ಒಟ್ಟು 61 ಪದಕವನ್ನು ಗೆದ್ದು ನಮ್ಮ ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಕೆಲವೊಂದು ಕ್ರೀಡೆಗಳಲ್ಲಿ ಕೂದಲೆಳೆ ಅಂತರದಲ್ಲಿ ಪದಕದಿಂದ ವಂಚಿತರಾಗಿದ್ದಾರೆ.
ಅದೇನೇ ಇರಲಿ ಈ ಸಾಲಿನ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ 61 ಪದಕಗಳನ್ನು ಗೆದ್ದು ಪದಕದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕಂಗೊಳಿಸಿದ್ದು ಭಾರತೀಯರಿಗೆ ಹೆಮ್ಮೆಯ ವಿಷಯವೆ.