ವಿನಯ್ ಖೋ ಖೋ ಆಟದ ಅದ್ಭುತ ಆಟಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ ಇವರು ತಮ್ಮ ಶ್ರೇಷ್ಠ ಆಟದಿಂದಲೆ ಭಾರತ ಖೋ ಖೋ ತಂಡವನ್ನು ಪ್ರತಿನಿಧಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದರು.
ಆದರೆ ವಿಧಿ ಆಟದ ಮುಂದೆ ಎಲ್ಲಾ ಆಟವು ಶೂನ್ಯ ಎನ್ನುವುದು ವಿನಯ್ ಅವರ ಅನಿರೀಕ್ಷಿತ ಸಾವಿನಿಂದ ಸಾಭಿತಾಗಿದೆ.
ಖೋ ಖೋ ಆಟಗಾರ ವಿನಯ್ ಇತ್ತೀಚೆಗೆ ಜ್ವರದಿಂದ ಬಳಲುತಿದ್ದರು ತೀರ್ಥಹಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದ ಕಾರಣ ಇವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆಷ್ಟೋತ್ತಿಗಾಗಲೆ ವಿನಯ್ ಅವರಿಗೆ
– ಜ್ವರ ಮೆದುಳಿಗೆ ತಗುಲಿ ಸಾವು ಬದುಕಿನೊಡನೆ ಹೊರಾಡುತ್ತಿದ್ದರು ಇಂದು ಪ್ರತಿಭಾನ್ವಿತ ಖೋ ಖೋ ಆಟಗಾರ ವಿನಯ್ ವಿಧಿಯ ಆರ್ಭಟದ ಆಟದ ಎದುರು ಮಣಿಪಾಲದ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿ ತಮ್ಮ ಬದುಕಿಗೆ ಅಂತ್ಯವಾಡಿ ಹೊಗಿದ್ದಾರೆ
ತೀರ್ಥಹಳ್ಳಿ ತಾಲೂಕಲ್ಲಿ ನೀರವ ಮೌನ ಅವರಿಸಿದೆ
ರಾಷ್ಟ್ರೀಯ ಖೋ ಖೋ ಆಟಗಾರರಾಗಿದ್ದ ವಿನಯ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ವಿನಯ್ ಅವರಿಗೆ ತೀವ್ರ ಜ್ವರ ಮೆದುಳಿಗೆ ಏರಿ ಇತ್ತೀಚೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಕಳೆದ ಏಳೆಂಟು ದಿನಗಳಿಂದ ದಾಖಲಾಗಿದ್ದರು ತೀವ್ರವಾದ ಜ್ವರ ಇವರನ್ನು ಮೇಲೆಳಲು ಬಿಡಲಿಲ್ಲ ಬಾಳಿ ಬದುಕಬೇಕಾಗಿದ್ದ ಯುವಕ ನಡುಹಾದಿಯಲ್ಲೆ ಬದುಕಿನ ಕೋಟಾ ಮುಗಿಸಿ ಹೊಗಿದ್ದು ಮಾತ್ರ ನಂಬಲು ಸಾಧ್ಯವಿಲ್ಲ..!
ವಿನಯ್ ಇನ್ನೂ ಮೂವತ್ತಮೂರರ ಹರಯ ಬಾಳಿ ಬದುಕಬೇಕಾಗಿದ್ದ ಯುವ ಕ್ರೀಡಾಪಟು ವಿನಯ್ ಸಾವಿನಂಚಿಗೆ ಸರಿದದ್ದು ದುರಂತವೆ ಹೌದು.
ವಿನಯ್ ವಿದ್ಯಾರ್ಥಿಯಾಗಿದ್ದಾಗಲೇ ಉತ್ತಮ ಖೋ ಖೋ ಕ್ರೀಡಾಪಟುವಾಗಿದ್ದರು ವಿನಯ್ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟವನ್ನು ಖೋ ಖೋ ಕ್ರೀಡೆಯಲ್ಲಿ ಪ್ರತಿನಿಧಿಸಿ ಹುಟ್ಟೂರು ತೀರ್ಥಹಳ್ಳಿಯ ಜೋತೆಗೆ ರಾಜ್ಯಕ್ಕೂ ಕೀರ್ತಿ ತಂದಿದ್ದರು.
ಬೆಂಗಳೂರಿನಲ್ಲಿ ಉದ್ಯೋಗಲ್ಲಿದ್ದ ವಿನಯ್ ಕರೋನಾ ಬಳಿಕ ತೀರ್ಥಹಳ್ಳಿಯಲ್ಲಿದ್ದರು. ಇವರ ಮನೆ ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆಯಲ್ಲಿದೆ ಕಳೆದ ವರ್ಷ ವಿನಯ್ ತಂದೆ ಹೂವಪ್ಪ ಗೌಡರು ಸಾವಿಗೀಡಾಗಿದ್ದು ಇದೀಗ ಮನೆಯ ಪ್ರೀತಿಯ ಕಿರಿಮಗ ವಿನಯ್ ಅವರ ದೀಡಿರ್ ಸಾವು ಇಡೀ ಕುಟುಂಬವನ್ನು ದುಃಖದ ಒಡಲಿಗೆ ನೂಕಿದೆ.
ಮದುವೆಯಾಗಿ ಎರಡು ವರ್ಷವಾಗಿದ್ದು ವಿನಯ್ ಗೆ ಎಂಟು ತಿಂಗಳ ಹೆಣ್ಣು ಮಗುವಿದೆ.
ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ ಅಪಾರ ಸ್ನೇಹಿತ ಬಳಗವನ್ನು ಹೊಂದಿರುವ ವಿನಯ್ ಸಾವಿನ ಸುದ್ದಿ ಕೇಳಿ ಸಂಪೂರ್ಣ ತೀರ್ಥಹಳ್ಳಿಯಲ್ಲಿ ಸೂತಕದ ಛಾಯೆ ಅವರಿಸಿದೆ.
*ಮಲೆನಾಡಿನ ಹೆಮ್ಮೆಯ ಕ್ರೀಡಾ ಪ್ರತಿಭೆ ಇನ್ನೂ ನೆನಪು ಮಾತ್ರ..*
ವಿನಯ್ ತನ್ನ ಉತ್ತಮ ಆಟದಿಂದಲೆ ತೀರ್ಥಹಳ್ಳಿಯಿಂದ ಕ್ರೀಡಾ ಕ್ಷೇತ್ರದಲ್ಲಿ ಭಾರತ ಮಟ್ಟಕ್ಕೆ ಬೆಳೆದು ನಿಂತಿದ್ದರು ಅವರ ಅದ್ಭುತವಾದ ಖೋ ಖೋ ಆಟದಿಂದಲೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಸ್ಟಾರ್ ಆಟಗಾರನಾಗಿ ಮಿಂಚಿದ್ದರು.
ತೀರ್ಥಹಳ್ಳಿಯ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಹಾಗೂ ಕರ್ನಾಟಕವನ್ನು ಪ್ರತಿನಿಧಿಸಿ 2 ಬಾರಿ ರನ್ನರ್ ಆಗಿದ್ದರು. ವಿನಯ್ ಅವರ ಸಾಧನೆಗಾಗಿ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವ ನೀಡಿತ್ತು. ಇನ್ನೂ ವಿನಯ್ ನೆನಪು ಮಾತ್ರ ಇವರು ತಮ್ಮ ಕುಟುಂಬದ ಜೋತೆಗೆ ಅಪಾರ ಸ್ನೇಹಿತರ ಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತ ವಿನಯ್ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ