ಬೈಂದೂರು-ವಿ.ಆರ್.ಎಲ್ ಸಮೂಹ ಸಂಸ್ಥೆಯಿಂದ ಉದ್ಯಮ,ಶಿಕ್ಷಣ, ಆರೋಗ್ಯ,ಪರಿಸರ ಕಾಳಜಿ,ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುವ ವಿಜಯರತ್ನ ಪ್ರಶಸ್ತಿ ಪ್ರಸಿದ್ಧ ಉದ್ಯಮಿ,ಸಮಾಜರತ್ನ ಡಾ.ಗೋವಿಂದ ಬಾಬು ಪೂಜಾರಿ ಇವರಿಗೆ ದೊರೆತಿದೆ.

ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ಅಧ್ಯಕ್ಷರಾಗಿರುವ ಗೋವಿಂದ ಬಾಬು ಪೂಜಾರಿ ಚೆಫ್‌ಟಾಕ್ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ.ಸಾವಿರಾರು ಜನರಿಗೆ ಉದ್ಯೋಗ, 25 ಕ್ಕೂ ಅಧಿಕ ಬಡ ಕುಟುಂಬ ಗಳಿಗೆ ಮನೆ ನಿರ್ಮಾಣ,ಸಾವಿರಾರು ಆಸಕ್ತರಿಗೆ ನೆರವು ಸೇರಿದಂತೆ ಯುವ ಉದ್ಯಮಿಯಾಗಿ ಬೈಂದೂರು ಕ್ಷೇತ್ರದ ಜನಮನ್ನಣೆ ಪಡೆದ ಯುವ ನಾಯಕರಾಗಿದ್ದಾರೆ.

ಧಾರ್ಮಿಕ,ಶೈಕ್ಷಣಿಕ,ಕ್ರೀಡೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಇವರು ಕೊಡುಗೈ ದಾನಿ
ಯಾಗಿದ್ದಾರೆ.ಡಾ.ಗೋವಿಂದ ಬಾಬು ಪೂಜಾರಿಯವರ ಸಾಧನೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆತಿರುವುದು ಇನ್ನಷ್ಟು ಸಮಾಜಸೇವೆಗೆ ಪ್ರೇರಣೆ ನೀಡಿದಂತಾಗಿದೆ.
ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ನಿಮಗೆ ಅಭಿನಂದನೆಗಳು..