“ವೆಂಕಟರಮಣ ಟ್ರೋಫಿ-2020” ದ್ವಿತೀಯ ದಿನದಾಂತ್ಯದ ಫಲಿತಾಂಶ
ವೆಂಕಟರಮಣ ಸ್ಪೋಟ್ಸ್೯ & ಕಲ್ಚರಲ್ ರಿ. ಪಿತ್ರೋಡಿಯವರ 4ನೇ ಭಾರಿಯ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟದ 2ನೇ ದಿನದ ಪಂದ್ಯಾಟ ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆಯಿತು.
ದಿನದ ಮೊದಲ ಪಂದ್ಯಾಟ ವೀರಕೇಸರಿ ಅಲೆವೂರು ಪ್ರೆಂಡ್ಸ ವಿರುದ್ಧವಾಗಿ ಮೂಡುಬೆಳ್ಳೆಯ ತಂಡ ಜಯವನ್ನು ದಾಖಲಿಸಿತು. ಎರಡನೇಯ ಪಂದ್ಯಾಟ ಚಾಲೆಂಜ್ ಕುಂದಾಪುರ ತಂಡದ ವಿರುದ್ಧವಾಗಿ ಬಿ. ಎ ಕಾಪು ತಂಡ ಜಯವನ್ನು ದಾಖಲಿಸಿತು.
ಮೂರನೇಯ ಪಂದ್ಯಾಟ ಮೂಡುಬೆಳ್ಳೆಯ ವಿರುದ್ಧವಾಗಿ ಎಸ್.ಎಸ್ ಪಕ೯ಳ ತಂಡ ಜಯವನ್ನು ದಾಖಲಿಸಿತು. ನಾಲ್ಕನೆಯ ಪಂದ್ಯಾಟ ಕರಾವಳಿ ಕೋಟದ ವಿರುದ್ಧವಾಗಿ ಬಿ. ಎ ಕಾಪು ತಂಡ ಜಯವನ್ನು ದಾಖಲಿಸಿತು.
ಐದನೆಯ ಪಂದ್ಯಾಟ ಎಸ್.ಎಸ್ ಪಕ೯ಳ ತಂಡದ ವಿರುದ್ಧವಾಗಿ ಬಿ. ಎ ಕಾಪು ತಂಡ ಜಯವನ್ನು ದಾಖಲಿಸಿತು. ಆರನೆಯ ಪಂದ್ಯಾಟ ದುಗಾ೯ ಆತ್ರಾಡಿಯ ವಿರುದ್ಧವಾಗಿ ಜಾನ್ಸನ್ ಕುಂದಾಪುರದ ತಂಡ ಜಯವನ್ನು ದಾಖಲಿಸಿತು.
ಏಳನೇಯ ಪಂದ್ಯಾಟ ಜಾನ್ಸನ್ ಕುಂದಾಪುರದ ವಿರುದ್ಧವಾಗಿ ಬಿ. ಎ ಕಾಪು ತಂಡ ಜಯವನ್ನು ದಾಖಲಿಸಿತು. ಎಂಟನೇಯ ಪಂದ್ಯಾಟ ಪ್ರಕೃತಿ ವಿಘ್ನೇಶ್ವರ ಪೈಟರ್ಸ ವಿರುದ್ಧವಾಗಿ ಬಿ. ಎ ಕಾಪು ತಂಡ ಜಯವನ್ನು ದಾಖಲಿಸಿತು.
ರವಿವಾರ ರಾಜ್ಯದ ಪ್ರತಿಷ್ಟಿತ ತಂಡಗಳು ಸೆಣಸಾಡಲಿದ್ದು,
ಉದ್ಯಾವರ ಗ್ರಾಮ ಪಂಚಾಯತ್ ಮೈದಾನ ಕುತೂಹಲಕಾರಿ ಕದನಗಳಿಗೆ ಸಾಕ್ಷಿಯಾಗಲಿದೆ.
ಸಂಜೆಯ ಸಮಾರೋಪ ಸಮಾರಂಭದಲ್ಲಿ
ಗಣ್ಯ ಅತಿಥಿಗಳ ಉಪಸ್ಥಿತಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ರಂಗನ್ನು ಹೆಚ್ಚಿಸಲಿದೆ
ರಾಜಶೇಖರ್.ಪಿ.ಶ್ಯಾಮರಾವ್