ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪೂರ್ಣ ವಿರಾಮವಿಟ್ಟ ಭಾರತದ ವೇಗಿ ಇರ್ಫಾನ್ ಪಠಾಣ್…
2006 ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಅಂದು ಮೂರನೇ ಟೆಸ್ಟ್ ಪಂದ್ಯದ ಹಣಾಹಣಿಗೆ ಕರಾಚಿಯ ಮೈದಾನ ಸಿದ್ದವಾಗಿತ್ತು. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಅಚ್ಚರಿ ಎಂಬಂತೆ ಆ ದಿನ ಟಾಸ್ ಜಯಿಸಿದರೂ ನಾಯಕ ರಾಹುಲ್ ದ್ರಾವಿಡ್ ಪಾಕ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ನಾಯಕನ ಧೃಡ ನಿರ್ಧಾರವನ್ನು ಬೆಂಬಲಿಸಿ ಮೊದಲ ಓವರ್ ಎಸೆಯಲು ಬಾಲ್ ಕೈಗೆತ್ತಿಕೊಂಡ #ಇರ್ಫಾನ್_ಪಠಾಣ್ ಮೊದಲ ಮೂರು ಎಸೆತಗಳನ್ನು ಚುಕ್ಕಿಯಾಗಿಸಿ ಉಳಿದ ಮೂರನ್ನು ಸಲ್ಮಾನ್ ಬಟ್, ಯೂನಿಸ್ ಖಾನ್ ಮತ್ತು ಮೊಹಮ್ಮದ್ ಯೂಸಫ್ ಈ ಮೂವರಿಗೆ ಟೆಸ್ಟ್ ಪಂದ್ಯಾಟದಲ್ಲಿ ಬಹುಬೇಗನೆ ರೆಸ್ಟ್ ನೀಡಲು ಬಳಸಿದರು. ಆ ಟೆಸ್ಟ್ ಸೋತರೂ ಇರ್ಫಾನ್ ರ ಆ ಬೆಸ್ಟ್ ಪರ್ಫಾರ್ಮಿಂಗ್ ಗೆ ಅಂದು ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಂತು ಸತ್ಯ.
2007 ಭಾರತ ಮರೆಯದ ಮತ್ತೊಂದು ಐತಿಹಾಸಿಕ ಪಂದ್ಯ, ಚೊಚ್ಚಲ T20 ಪ್ರಶಸ್ತಿ ಎತ್ತಿ ಹಿಡಿದ ಅವಿಸ್ಮರಣೀಯ ದಿನ. ಮತ್ತದೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಫೈನಲ್ ಹಣಾಹಣಿಯಲ್ಲಿ ನಾಲ್ಕು ಓವರಿನ ತನ್ನ ಕೂಟದಲ್ಲಿ ಕೇವಲ 16 ರನ್ ನೀಡಿ 3 ವಿಕೆಟ್ ಉರುಳಿಸಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿ ಭಾರತ T20 ವಿಶ್ವಕಪ್ ಎತ್ತುವಲ್ಲಿ ತಮ್ಮ ಬಹುಮೂಲ್ಯ ಕೊಡುಗೆ ಕೂಡ ಭಾರತೀಯರು ಹೆಮ್ಮೆ ಪಡುವ ವಿಚಾರ.
ಸವ್ಯಸಾಚಿಗಳಿಲ್ಲದ ಆ ಸಮಯದಲ್ಲಿ ಭಾರತ ತಂಡಕ್ಕೆ ಜವಬ್ದಾರಿಯುತ ಆಲ್ ರೌಂಡರ್ ಸ್ಥಾನವನ್ನು ನಿಭಾಯಿಸುವಲ್ಲಿ ಯಶಸ್ವಿಯಾದ ಇರ್ಫಾನ್ ಪಠಾಣ್ ಇಂದು ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯದ ಪೂರ್ಣವಿರಾಮ ಇಟ್ಟರು.
Test hat-trick ✅
T20I World Championship triumph ✅
Over 300 wickets in international cricket ✅
ನವೀನ್ ಕುಮಾರ್ ಬೀಜಾಡಿ.