ಅವನ ಸಾಮರ್ಥ್ಯವನ್ನು ಪ್ರಶ್ನಿಸುವ ಧೈರ್ಯ ಮಾಡಿದವರಿಗೆ ಆತ ಕೊಟ್ಟ ಉತ್ತರವಿದು.ಅವನು ಬೆಂಕಿ.. ಕೆರಿಬಿಯನ್ ನೆಲದಲ್ಲಿ ಹೊತ್ತಿಕೊಂಡ ಆ ಜ್ವಾಲೆ ಭಾರತಕ್ಕೆ 13 ವರ್ಷಗಳ ನಂತರ ವಿಶ್ವಕಪ್ ಗೆಲ್ಲಿಸಿತು.
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 9 ರನ್ ಗಳಿಸಿ ಔಟಾಗಿದ್ದ ವಿರಾಟ್ ಕೊಹ್ಲಿ ಪೆವಿಲಿಯನ್’ನಲ್ಲಿ ಹತಾಶನಾಗಿ ಕೂತು ಬಿಟ್ಟಿದ್ದ. ವಿರಾಟನನ್ನು ಕೋಚ್ ರಾಹುಲ್ ದ್ರಾವಿಡ್ ಸಂತೈಸಿದ್ದರು. ಒಬ್ಬ ದಿಗ್ಗಜನ ಮನಸ್ಥಿತಿ ಮತ್ತೊಬ್ಬ ದಿಗ್ಗಜನಿಗಷ್ಟೇ ಅರ್ಥವಾಗಲು ಸಾಧ್ಯ.
ಫೈನಲ್’ಗೂ ಮುನ್ನ ಏಳು ಪಂದ್ಯಗಳಲ್ಲಿ ಕೇವಲ 75 ರನ್. ಬ್ಯಾಟಿಂಗ್ ಸಾಮ್ರಾಟನ ಸಾಮರ್ಥ್ಯಕ್ಕೇ ಸವಾಲು ಎದುರಾಗಿದ್ದ ಸಮಯ. ಕೊಹ್ಲಿಯಂಥಾ ಒಬ್ಬ ಕ್ರಿಕೆಟಿಗನಿಗೆ, ಪ್ರತೀ ಪಂದ್ಯದಲ್ಲೂ ಭಾರತವನ್ನು ಗೆಲ್ಲಿಸಲೇಬೇಕೆಂಬ ಒಂದೇ ಒಂದು ಅಜೆಂಡಾದೊಂದಿಗೆ ಆಡುವ ಆಟಗಾರನಿಗೆ ತನ್ನ ಸಾಮರ್ಥ್ಯದ ಬಗ್ಗೆಯೇ ಅಪನಂಬಿಕೆ ಮೂಡಿದ್ದ ಸಂದರ್ಭ. ತಾನು ತಂಡಕ್ಕೆ ಹೊರೆಯಾಗುತ್ತಿರುವೆನೇ ಎಂಬ ಪರಿಸ್ಥಿತಿ. ಕಾರಣ, ಯಾರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವೋ, ಆತ ರನ್ ಗಳಿಸಲು ಪರದಾಡುತ್ತಿದ್ದ.
ಒಂದು ಮಾತಿದೆ. Comeback is greater than setback ಅಂತ.
ವಿರಾಟ್ ಕೊಹ್ಲಿ ತನ್ನೆಲ್ಲಾ ಶಕ್ತಿಯನ್ನು ದೊಡ್ಡ ಪಂದ್ಯಕ್ಕಾಗಿಯೇ ಮೀಸಲಿಟ್ಟು ಬಿಟ್ಟಿದ್ದ. ಫೈನಲ್’ವರೆಗೆ ಒಂದು ಲೆಕ್ಕವಾದರೆ, ಫೈನಲ್ ಲೆಕ್ಕವೇ ಬೇರೆ. ದೊಡ್ಡ ಆಟಗಾರರು ದೊಡ್ಡ ಪಂದ್ಯಗಳಲ್ಲಿ ಆಡುವುದೇ ಹಾಗೆ.
ಟನ್’ಗಟ್ಟಲೆ ಗಳಿಸುವ ರನ್’ಗಳಿಗಿಂತ ತಂಡಕ್ಕೆ ತುಂಬಾ ಅವಶ್ಯಕತೆ ಇದ್ದಾಗ ಗಳಿಸುವ ರನ್’ಗಳ ಮೌಲ್ಯವೇ ಬೇರೆ. ವಿರಾಟ್ ಆಡಿದ್ದು ಅಂಥದ್ದೇ ಆಟ.
THE GOAT in big stages standing tall for India:
– 72*(44) in 2014 T20 World Cup Semifinal
– 77(58) in 2014 T20 World Cup Final.
– 89*(47) in 2016 T20 World Cup Semifinal
– 50(40) in 2022 T20 World Cup Semifinal
– 78(59) in 2024 T20 World Cup Final
ಇದು ಒಬ್ಬ ಶ್ರೇಷ್ಠ ಆಟಗಾರನ ಶ್ರೇಷ್ಠತೆ. ಭಾರತಕ್ಕೆ 17 ವರ್ಷಗಳ ನಂತರ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟು, ತನ್ನ ಪಾಲಿಗೆ ಮರೀಚಿಕೆಯಾಗಿದ್ದ ಟಿ20 ವಿಶ್ವಕಪ್ ಗೆದ್ದ ಕ್ಷಣ ಇನ್ನೆೆಂದೂ ಭಾರತ ಪರ ಟಿ20 ಪಂದ್ಯವಾಡಲಾರೆನೆಂದು ಹೇಳಿ ಎದ್ದು ನಡೆದಿದ್ದಾನೆ ವಿರಾಟ್ ಕೊಹ್ಲಿ.
Thank you Legend King Kohli ನೀನು ಬರೀ ಗ್ರೇಟ್ ಅಲ್ಲ, greatest.. Greatest of all time. ನಿನ್ನನ್ನು ಈ ಕ್ರಿಕೆಟ್ ಜಗತ್ತು ಎಂದಿಗೂ ಮರೆಯದು..!