14.6 C
London
Monday, September 9, 2024
Homeಕ್ರಿಕೆಟ್6 ತಿಂಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕಿತ್ತೆಸೆಯಲ್ಪಟ್ಟವನು ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿದ!

6 ತಿಂಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕಿತ್ತೆಸೆಯಲ್ಪಟ್ಟವನು ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿದ!

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಸಮಯಕ್ಕಿಂತ ದೊಡ್ಡ ನ್ಯಾಯಾಧೀಶ ಈ ಜಗತ್ತಿನಲ್ಲಿ ಯಾರೂ ಇಲ್ಲ.
ಆರೇ ಆರು ತಿಂಗಳ ಹಿಂದೆ..
ಮುಂಬೈ ಇಂಡಿಯನ್ಸ್ ತಂಡಕ್ಕೆ 5 ಐಪಿಎಲ್ ಟ್ರೋಫಿಗಳನ್ನು ಗೆದ್ದು ಕೊಟ್ಟಿದ್ದ ನಾಯಕನನ್ನು ನಿರ್ದಾಕ್ಷಿಣ್ಯವಾಗಿ ನಾಯಕ ಪಟ್ಟದಿಂದ ಕಿತ್ತು ಹಾಕಲಾಗಿತ್ತು.
“ನೀವು ಇನ್ನು ಮುಂದೆ ತಂಡದ ನಾಯಕನಾಗಿರುವುದಿಲ್ಲ, ನಿಮ್ಮ ಸೇವೆ ಸಾಕು, ಬೇರೆಯವರಿಗೆ ಪಟ್ಟಾಭಿಷೇಕಕ್ಕೆ  ನಾವು ನಿರ್ಧರಿಸಿದ್ದೇವೆ”. ಹೀಗೆಂದು ಒಂದು ಮಾತು ಹೇಳಿದರೂ ಸಾಕಿತ್ತು. ರೋಹಿತ್ ಶರ್ಮಾ ತಾನೇ ತಾನಾಗಿ ನಾಯಕತ್ವ ತ್ಯಜಿಸಿ ಬಿಡುತ್ತಿದ್ದ. ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದು ನಾಯಕರ ನಾಯಕ ಧೋನಿಗೆ ಸರಿಸಮನಾಗಿ ನಿಂತಿದ್ದವನಿಗೆ ಇನ್ನೂ ಸಾಧಿಸುವುದು ಏನೂ ಇರಲಿಲ್ಲ.
ಆದರೆ ದುಡ್ಡಿನ ಮದದಲ್ಲಿ ಕೊಬ್ಬಿದ, ಎಲ್ಲವನ್ನೂ ದುಡ್ಡಲ್ಲೇ ಅಳೆಯುವ ಮಂದಿಗೆ ಒಬ್ಬ ದಿಗ್ಗಜನನ್ನು ಗೌರವದಿಂದ ನಡೆಸಿಕೊಳ್ಳಬೇಕೆಂಬ ಸೂಕ್ಷ್ಮತೆ ಎಲ್ಲಿಂದ ಬರಬೇಕು..?
ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾನಿಗೆ ಮುಜುಗರ, ಅವಮಾನವಾಗುವಂಥಾ ಘಟನೆಗಳು ನಡೆದವು. ಮೈದಾನದಲ್ಲಿ ತನ್ನದಲ್ಲದ ಜಾಗದಲ್ಲಿ ರೋಹಿತ್ ನಿಲ್ಲುವಂತಾಯಿತು. ಬ್ಯಾಟ್’ನಿಂದ ರನ್ನೂ ಬರಲಿಲ್ಲ.
ರೋಹಿತ್ ಶರ್ಮಾ ವಿಷಕಂಠನಂತೆ ಎಲ್ಲವನ್ನೂ ಹಲ್ಲು ಕಚ್ಚಿಕೊಂಡೇ ನುಂಗಿ ಬಿಟ್ಟ. ಅವನಿಗೆ ಗೊತ್ತಿತ್ತು ನನ್ನ ಸಮಯ ಬಂದೇ ಬರುವುದೆಂದು. ಐಪಿಎಲ್ ಮುಗಿಯಿತು, ರೋಹಿತ್ ಶರ್ಮಾನನ್ನು ನಾಯಕತ್ವದಿಂದ ಕೆಳಗಿಳಿಸಿದ ಪ್ರಮಾದಕ್ಕೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಏನಾಗಬೇಕೋ ಅದೇ ಆಯಿತು.
ತನ್ನ ಸಮಯಕ್ಕಾಗಿ ತಾಳ್ಮೆಯಿಂದ ಕಾದಿದ್ದ ರೋಹಿತ್ ಶರ್ಮಾ ಈಗ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾನೆ. 13 ವರ್ಷಗಳ ನಂತರ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿದ್ದಾನೆ.
ಐಪಿಎಲ್‘ನಲ್ಲಿ ತನಗೆ ಅವಮಾನವಾಗುವಂತೆ ನಡೆದುಕೊಂಡ ರೀತಿಗೆ, ಎಲ್ಲರಿಂದಲೂ ಟೀಕೆಗೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯನ ಕೈಗೆ ಕೊನೆಯ ಓವರ್ ಕೊಟ್ಟ ರೋಹಿತ್ ಶರ್ಮಾ ಭಾರತಕ್ಕೆ 17 ವರ್ಷಗಳ ನಂತರ ಟಿ20 ವಿಶ್ವಕಪ್ ಗೆದ್ದು ಕೊಟ್ಟಿದ್ದಾನೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಆಡಿದ ಆಟಕ್ಕೆ ಸಾಟಿಯೇ ಇಲ್ಲ. ಒತ್ತಡದಲ್ಲಿ ಕೆಚ್ಚೆದೆಯ ಆಟವಾಡುವ ಜೊತೆಗಾರ ವಿರಾಟ್ ಕೊಹ್ಲಿ ಪದೇ ಪದೇ ಮುಗ್ಗರಿಸುತ್ತಿದ್ದ. ಫೈನಲ್’ವರೆಗೆ ಗ್ರಹಣ ಹಿಡಿದ ಸೂರ್ಯನಂತೆ ಕೊಹ್ಲಿ ಆಟಕ್ಕೆ ಗ್ರಹಣ ಹಿಡಿದಿತ್ತು. ಅಂಥಾ ಸಂದರ್ಭದಲ್ಲಿ ರೋಹಿತ್ ಶರ್ಮಾ ನಿಭಾಯಿಸಿದ ಪಾತ್ರವಿದೆಯಲ್ಲಾ.., Unmatchable.
ಆಸ್ಟ್ರೇಲಿಯಾ ವಿರುದ್ಧ ಸೂಪರ್-8 ಪಂದ್ಯದಲ್ಲಿ ಆಡಿದ ಆ ವಿಧ್ವಂಸಕ 92 ರನ್’ಗಳ ಇನಿಂಗ್ಸ್.., ಸೆಮಿಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ ಅಬ್ಬರಿಸಿ ನಿಂತ ಪರಿ.. ಜಗತ್ತಿನ ಶ್ರೇಷ್ಠ ವೇಗದ ಬೌಲರ್’ಗಳನ್ನು ಚೆಂಡಾಡಿದ ರೀತಿ.. ರೋಹಿತ್ ಶರ್ಮಾನ ತಾಕತ್ತು, ಆತನ ಪ್ರಬುದ್ಧತೆ, ಜವಾಬ್ದಾರಿಗೆ ಎದೆಕೊಟ್ಟು ನಿಲ್ಲುವ ದೃಢತೆಗೆ ಸಾಕ್ಷಿ.
ರೋಹಿತ್ ಶರ್ಮಾ ಕೆಳ ಮಧ್ಯಮ ವರ್ಗದಿಂದ ಬಂದಿದ್ದ ಯುವಕ. ತಾಯಿ ಪೂರ್ಣಿಮಾ ಶರ್ಮಾ ಆಂಧ್ರಪ್ರದೇಶದ ವಿಶಾಖಪಟ್ಟಣದವರು. ತಂದೆ ಗುರನಾಥ್ ಶರ್ಮಾ ಸಾರಿಗೆ ಸಂಸ್ಥೆಯ ಉಗ್ರಾಣದ ಉಸ್ತುವಾರಿಯಾಗಿ ಕೆಲಸ ಮಾಡುತ್ತಿದವರು. ದೊಂಬಿವಿಲ್ಲಿಯ ಸಿಂಗಲ್ ರೂಮ್ ಮನೆಯಲ್ಲಿ ವಾಸವಾಗಿದ್ದ ಕುಟುಂಬ. ಜೀವನ ನಿರ್ವಹಣೆಗೆ ತಂದೆಯ ಆದಾಯ ಸಾಕಾಗುತ್ತಿಲ್ಲವಾದ ಕಾರಣ, ರೋಹಿತ್ ಶರ್ಮಾನನ್ನು ಬೊರಿವಲಿಯ ಮಾವನ ಮನೆಯಲ್ಲಿ ಬಿಡಲಾಗಿತ್ತು. ಇಂತಹ humble backgroundನಿಂದ ಬಂದವನು ರೋಹಿತ್.
ಕ್ರಿಕೆಟ್ ಕನಸು ಕಾಣುವ ಬಡ ಹುಡುಗರನ್ನು ತಾಯಿಯಂತೆ ಪೋಷಿಸುತ್ತಾ ಬಂದಿರುವ ನಗರ ಮುಂಬೈ. ಆ ತಾಯಿ ರೋಹಿತ್ ಶರ್ಮಾನನ್ನು ಅಪ್ಪಿಕೊಂಡು ಬಿಟ್ಟಳು.
ಆಫ್’ಸ್ಪಿನ್ನರ್ ಆಗಿದ್ದ ರೋಹಿತ್ ಶರ್ಮಾ ತನ್ನ ಕ್ರಿಕೆಟ್ ಜೀವನದ ಆರಂಭದ ದಿನಗಳಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ. ಆತ ಬ್ಯಾಟಿಂಗ್ ಕೌಶಲ್ಯವನ್ನು ನೋಡಿದ್ದ ಕೋಚ್ ದಿನೇಶ್ ಲಾಡ್,  Harris and Giles Shield ಸ್ಕೂಲ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರೋಹಿತ್’ನನ್ನು ಓಪನರ್ ಆಗಿ ಆಡಿಸುತ್ತಾರೆ. ಮೊದಲ ಪಂದ್ಯದಲ್ಲೇ ರೋಹಿತ್ ಶತಕ ಬಾರಿಸುತ್ತಾನೆ.
ಅಲ್ಲಿಂದ ಶುರುವಾದ ಪ್ರಯಾಣ… ಇವತ್ತಿಗೆ ವೈಟ್ ಬಾಲ್ ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ ಜಗತ್ತಿನ ಶ್ರೇಷ್ಠ ಆರಂಭಿಕ ದಾಂಡಿಗರಲ್ಲಿ ಒಬ್ಬ. ವಿರಾಟ್ ಕೊಹ್ಲಿಯಿಂದ ಭಾರತ ತಂಡದ ನಾಯಕತ್ವದ ದಂಡವನ್ನು ಸ್ವೀಕರಿಸಿ, ಒಂದೇ ವರ್ಷದ ಅಂತರದಲ್ಲಿ ಮೂರು ಐಸಿಸಿ ಟ್ರೋಫಿ ಟೂರ್ನಿಗಳನ್ನು ತಂಡವನ್ನು ಫೈನಲ್’ಗೆ ಮುನ್ನಡೆಸಿದ್ದಾನೆ. ಎರಡು ಫೈನಲ್’ಗಳಲ್ಲಿ ಸೋತಾದ ಕಣ್ಣೀರಿಟ್ಟಿದ್ದ ರೋಹಿತ್, ಮೂರನೇ ಪ್ರಯತ್ನದಲ್ಲಿ ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ.

Latest stories

LEAVE A REPLY

Please enter your comment!
Please enter your name here

six + eighteen =