ಕ್ರಿಕೆಟ್ಗೋಡೆ ಏರಿ ಕುಳಿತು ವಿದಾಯ ಹೇಳಿದ ದಿಗ್ಗಜರು!

ಗೋಡೆ ಏರಿ ಕುಳಿತು ವಿದಾಯ ಹೇಳಿದ ದಿಗ್ಗಜರು!

-

- Advertisment -spot_img
ವಾವ್..! ಇಂತದ್ದೊಂದು ಕ್ಷಣಕ್ಕೆ ಅದೆಷ್ಟು ವರ್ಷಗಳಿಂದ ಕಾದಿದ್ವೋ..! ಬಾಲ್ಯದಿಂದಲೂ ರಾಹುಲ್ ದ್ರಾವಿಡ್ ಅಂದ್ರೆ ಅಷ್ಟು ಇಷ್ಟ. Cricket is a gentleman’s game ಅಂತ ದ್ರಾವಿಡ್ ನೋಡಿ ಹೇಳಿರಬೇಕು ಎಂಬಂತಹ ನಡತೆ, ಗಂಭೀರತೆ..
ಅಂತದ್ದೊಂದು ವ್ಯಕ್ತಿತ್ವಕ್ಕೆ ಅದೃಷ್ಟ ಅನ್ನೋದು ಯಾಕೆ ಕೈಹಿಡಿಯಲಿಲ್ಲ ಅಂತ ಯಾವಾಗಲೂ ಬೇಸರವಾಗ್ತಿತ್ತು.. ಅವರ ವ್ಯಕ್ತಿಗತ ಸಾಧನೆ ಏನೇ ಇದ್ರೂ ವಿಶ್ವಕಪ್ ಅಂತ ಬಂದಾಗ ಗೆದ್ದ ತಂಡದಲ್ಲಿ ಒಮ್ಮೆಯೂ ಇರಲಿಲ್ಲ ಅಂತ ಪದೇ ಪದೇ ಕಾಡ್ತಿದ್ದ ಬೇಸರ. ವ್ಯಕ್ತಿಗತವಾದ ಸಾಧನೆಯಲ್ಲೂ ಸಹ ಅವ್ರ ಸಮಕಾಲೀನ ಬೇರವರೊಡನೆ ಮರೆಮಾಚಿಬಿಡ್ತಿತ್ತು.. ಕೊನೆಗೆ ಒಂದು ಸರಿಯಾದ ವಿದಾಯ ಸಹ ಸಿಗಲಿಲ್ಲ.
.ಸರಿ ಅಧ್ಯಾಯ ಮುಗಿಯಿತು ಇನ್ಯಾರು ಎಂದು ಆಲೋಚಿಸುವ ಹೊತ್ತಿಗೆ ಕೊಹ್ಲಿ ಎಂಬ ಅತ್ಯುತ್ತಮ ಆಟಗಾರನ ಆಗಮನ.. ಬ್ರಾಡ್ಮಾನ್ ಕಥೆಗಳನ್ನು ಕೇಳ್ತಿದ್ದ ನಮಗೆ ಕೊಹ್ಲಿಯಲ್ಲಿ ಬ್ರಾಡ್ಮಾನ್ ಕಂಡಂತ ಅನುಭವ.. Consistency throughout the career, fitness, energy, aggressiveness.. ಗಂಗೂಲಿ ಇತ್ತೀಚಿಗೆ ಹೇಳಿದಂತ Kohliಯಂತಹ ಆಟಗಾರ one time special.. ಮತ್ತೆ ಯಾರೂ replace ಮಾಡದಂತಹ ಆಟಗಾರ‌. ಆದ್ರೆ ಇಲ್ಲೂ ಸಹ ವಿಶ್ವಕಪ್ ಗೆದ್ದ ತಂಡದಲ್ಲಿ ಇವ ಇಲ್ಲ ಎಂಬ ಕೊರತೆ ಕಾಡುತ್ತಲೇ ಇತ್ತು.. ಕಳೆದ ವರ್ಷದ ಏಕದಿನ ವಿಶ್ವಕಪ್ನಲ್ಲಿ ನನ್ನ ಇಷ್ಟು ದಿನದ ಕಾಯಿವಿಕೆ ಮುಗೀತು.. ಭಾರತದ ನೆಲದಲ್ಲಿ ಇಬ್ರನ್ನು ಹೊತ್ತು ಮೆರೆಸೋ ಕಾಲ ಬಂದೇ ಬಿಡ್ತು ಅಂದ್ಕೊಂಡಿದ್ದೆ ಆದ್ರೆ ಆಸ್ಟ್ರೇಲಿಯಾ ಅದನ್ನು ಕಸಿದುಬಿಡ್ತು..
ನಿಜಕ್ಕೂ ಈ ವಿಶ್ವಕಪ್ ಶುರುವಾದಾಗಿಂದ ಇವರು ಗೆಲ್ಲಬಹುದು ಅಂತ ನಿರೀಕ್ಷೆ ಇಟ್ಕೊಂಡಿರಲಿಲ್ಲ‌. ಒಂದು ಪೋಸ್ಟ್ ಸಹ ಯಾವ ಮ್ಯಾಚ್ ಬಗ್ಗೆ ಹಾಕ್ಲಿಲ್ಲ.. ಚೋಕರ್ಸ್ ಎಂಬ ಹಣೆಪಟ್ಟಿಯ ಸೌತಾಫ್ರಿಕ ಎದುರಾಳಿ ಅಂತ ಗೊತ್ತಾದ್ಮೇಲೂ ಸಹ ಕಳೆದ ವರ್ಷದ ಕಹಿನೆನಪು ಮತ್ತೇ ಕಾಡ್ತಾನೇ ಇತ್ತು.. ಮೂವತ್ತು ಬಾಲಿಗೆ ಮೂವತ್ತು ರನ್ನಿನ ಪರಿಸ್ಥಿತಿಯಲ್ಲಂತೂ ರಾಹುಲ್ ಮತ್ತು ಕೊಹ್ಲಿ ಹಣೆಯಲ್ಲೇ ಬರೆದಿದ್ದದ್ದು ನಾವು ಎಷ್ಟು ಬಯಸಿದರೆ ಏನು ಪ್ರಯೋಜನ ಅಂತಲೇ ಮ್ಯಾಚ್ ನೋಡ್ತಿದ್ದೆ.. ಆದರೆ ಪವಾಡ ನಡೆದೇ ಹೋಯಿತು.. ❤
ಸಂತಸದ ವಿಷಯ ಏನಂದ್ರೆ ಯಾವ ಕ್ರಿಕೆಟ್‌ ಜಗತ್ತು ಕೊಹ್ಲಿ unlucky player.. ವಿಶ್ವಕಪ್ನಂತಹ ಪಂದ್ಯಾವಳಿ ಗೆಲ್ಲಲಾರ ಅಂತಿತ್ತೋ ಅದೇ ಜಗತ್ತಿನ ಮುಂದೆ ಫೈನಲ್ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮನಾಗಿ ಗೆಲ್ಲೋದು..❤
ಯಾವ ಕ್ರಿಕೆಟ್ ಜಗತ್ತು ಟಿಟ್ವೆಂಟಿ ಫಾರ್ಮ್ಯಾಟ್ ಶುರುವಾದಾಗ ದ್ರಾವಿಡ್ನಂತಹ ಆಟಗಾರನಿಗೆ ಇವೆಲ್ಲಾ ಆಗಲ್ಲ ಅಂತಿಂತ್ತೋ ಅದೇ ಜಗತ್ತಿನ ಮುಂದೆ ದ್ರಾವಿಡ್ ಕೋಚ್ ಆಗಿ ಟಿಟ್ವೆಂಟಿ ವಿಶ್ವಕಪ್ ಗೆಲ್ಲೋದು.. ❤
We can’t expect more than this from God..! ಇಂತಹ ಒಂದು ಬೀಳ್ಕೊಡುಗೆ ಎಲ್ಲರಿಗೂ ಸಿಗಲ್ಲ.. ಅಂತದ್ದೊಂದು ಅದೃಷ್ಟ ದ್ರಾವಿಡ್ ಮತ್ತು ಕೊಹ್ಲಿಗೆ ಸಿಕ್ಕಿಬಿಡ್ತು ಮತ್ತು ನಾವೆಲ್ಲಾ ಅದಕ್ಕೆ ಸಾಕ್ಷಿಯಾಗಿಬಿಟ್ವಿ ❤
ಇದೊಂದು ಕೇವಲ ವಿಶ್ವಕಪ್ ಗೆಲುವು ಅಂತ ಅನ್ನಿಸ್ತಾನೇ ಇಲ್ಲ. ಇದು ನಮ್ಮ ಜನರೇಷನ್ನಿನ ಗೆಲುವು.. ದಶಕಗಳ ಕನಸು.. ಕಾಯುತ್ತಿದ್ದ ಕ್ಷಣ..
ತುಂಬಾ Emotional ಅಂತ ಹೇಳೋದು ಸಹ ಸಣ್ಣದೋ ಏನೊ.. ಹೇಳಲಿಕ್ಕಾಗದಷ್ಟು ಖುಷಿ.. Its an experience that never ends.. ❤

LEAVE A REPLY

Please enter your comment!
Please enter your name here

fifteen + five =

Latest news

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ?

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ? ಐಪಿಎಲ್‌ನ ಅತ್ಯಂತ ಜನಪ್ರಿಯ ಮತ್ತು ವ್ಯಾಪಾರಿಕವಾಗಿ ಯಶಸ್ವಿಯಾದ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೊಸ...

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..!

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..! ಪಶ್ಚಿಮ ಬಂಗಾಳದಲ್ಲಿ ಕ್ರಿಕೆಟ್ ಎಂದಾಕ್ಷಣ ಕಿವಿಗಪ್ಪಳಿಸುವ ಮೊದಲ ಹೆಸರು ‘ದಾದಾ’.. ಬಂಗಾಳದ ಮನೆ...

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ ಇತ್ತೀಚೆಗೆ ನಡೆದ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರತಿಭಾವಂತ ಕ್ರಿಕೆಟರ್ ಜೆಮೀಮಾ...

ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು

  ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು ಇತ್ತೀಚೆಗೆ ನಡೆದ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತದ ಪ್ರತಿಭಾವಂತ ಬ್ಯಾಟ್ಸ್‌ವುಮನ್ ಜೆಮೀಮಾ ರೊಡ್ರಿಗಸ್ ಮಿಂಚಿ...
- Advertisement -spot_imgspot_img

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್ “ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್ –2” ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 27 ಮತ್ತು 28ರಂದು ಬಂಟ್ವಾಳ ಮೈದಾನದಲ್ಲಿ ಜರುಗಲಿದೆ. ‘ಟೀಮ್ ಬ್ರದರ್ಸ್ ವತಿಯಿಂದ ಆಯೋಜಿಸಲಾದ...

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ!

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ! ಹೊಳೆನರಸೀಪುರದಲ್ಲಿ ನಡೆದ ಜೈ ಭೀಮ್ ಟ್ರೋಫಿ 2025 ಕ್ರಿಕೆಟ್ ಟೂರ್ನಿಯಲ್ಲಿ,...

Must read

- Advertisement -spot_imgspot_img

You might also likeRELATED
Recommended to you