15.7 C
London
Tuesday, September 10, 2024
Homeಕ್ರಿಕೆಟ್ವಿಜಯ್ ಭಾರದ್ವಾಜ್ ಎಂದರೆ ಆ ರಣಜಿ ಪಂದ್ಯ ನೆನಪಾಗುತ್ತದೆ!

ವಿಜಯ್ ಭಾರದ್ವಾಜ್ ಎಂದರೆ ಆ ರಣಜಿ ಪಂದ್ಯ ನೆನಪಾಗುತ್ತದೆ!

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ವಿಜಯ್ ಭಾರದ್ವಾಜ್..
ಈ ಹೆಸರು ಕೇಳಿದಾಗ ಕಣ್ಮುಂದೆ ಬರುವುದು 90ರ ದಶಕದ ಕರ್ನಾಟಕ ಕ್ರಿಕೆಟ್’ನ ಆ ಗತವೈಭವ.

ಇವರ ಅಡ್ಡ ಹೆಸರು “ಪಿಂಗ”.. 90ರ ದಶಕದಲ್ಲಿ ಕರ್ನಾಟಕದ 3 ರಣಜಿ ವಿಜಯಗಳ ವಿಜಯಶಿಲ್ಪಿಗಳಲ್ಲೊಬ್ಬರು ವಿಜಯ್ ಭಾರದ್ವಾಜ್.

ಆ ಸಮಯದಲ್ಲಿ ದೇಶೀಯ ಕ್ರಿಕೆಟ್’ನಲ್ಲಿ ವಿಜಯ್ ಭಾರದ್ವಾಜ್ ಅವರ ಹೆಸರು ದೊಡ್ಡದಾಗಿ ಸದ್ದು ಮಾಡಲು ಕಾರಣಗಳಿದ್ದವು. ಆಡಿದ ಮೂರು ರಣಜಿ ಫೈನಲ್’ಗಳಲ್ಲಿ 2 ಶತಕ, 2 ಅರ್ಧಶತಕಗಳನ್ನು ಬಾರಿಸಿದ್ದ out & out ಮ್ಯಾಚ್ ವಿನ್ನರ್.

1996ರ ರಣಜಿ ಫೈನಲ್’ನಲ್ಲಿ 146 ರನ್,
1998ರ ರಣಜಿ ಫೈನಲ್’ನಲ್ಲಿ122 ರನ್, 1999ರ ರಣಜಿ ಫೈನಲ್’ನಲ್ಲಿ 86 ಮತ್ತು 75 ರನ್, ಜೊತೆಗೆ ಏಳು ವಿಕೆಟ್.

1998-99ರ ರಣಜಿ ಟ್ರೋಫಿ ಟೂರ್ನಿಯಲ್ಲಿ ವಿಜಯ್ ಭಾರದ್ವಾಜ್ ಗಳಿಸಿದ್ದ 1260 ರನ್’ಗಳು ಕರ್ನಾಟಕದ ಮಟ್ಚಿಗೆ ಇವತ್ತಿಗೂ ದಾಖಲೆ.

ವಿಜಯ್ ಭಾರದ್ವಾಜ್ ಬಗ್ಗೆ ಬರೆಯುವಾಗ 1999ರ ರಣಜಿ ಫೈನಲ್’ನಲ್ಲಿ ಅವರ ಆ ಮಾಂತ್ರಿಕ ಸ್ಪಿನ್ ದಾಳಿಯ ಬಗ್ಗೆ ಉಲ್ಲೇಖಿಸದೇ ಇದ್ದರೆ ಬರಹ ಅಪೂರ್ಣ.

ನಾನು ಕೇಳಿದ, ನೋಡಿದ ರಣಜಿ ಫೈನಲ್’ಗಳಲ್ಲಿ ಅತ್ಯಂತ ರೋಚಕ 1999 ಮತ್ತು 2010ರ ಫೈನಲ್ಸ್. ಅದರಲ್ಲೂ 1999ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯವಿದೆಯಲ್ಲಾ.. ಕ್ರಿಕೆಟ್’ನಲ್ಲಿ ಏನು ಬೇಕಾದರೂ ಅಗಬಹುದು ಎಂಬುದಕ್ಕೆ ಸಾಕ್ಷಿ ನುಡಿದ ಪಂದ್ಯವದು.

ಫೈನಲ್ ಪಂದ್ಯದಲ್ಲಿ 75 ರನ್’ಗಳ ಇನ್ನಿಂಗ್ಸ್ ಹಿನ್ನಡೆಗೊಳಗಾಗಿದ್ದ ಕರ್ನಾಟಕ 2ನೇ ಇನ್ನಿಂಗ್ಸ್’ನಲ್ಲಿ ಕೌಂಟರ್ ಅಟ್ಯಾಕ್’ಗೆ ಇಳಿದು ಬಿಟ್ಟಿತ್ತು. ಕರ್ನಾಟಕದ ಗೆಲುವಿಗೆ ಮುನ್ನುಡಿ ಬರೆದದ್ದು ಆರಂಭಿಕ ಬ್ಯಾಟ್ಸ್’ಮನ್ ಜೆ.ಅರುಣ್ ಕುಮಾರ್ ಬಾರಿಸಿದ ಅಮೋಘ 147 ರನ್’ಗಳು.

ಪಂದ್ಯ ಡ್ರಾ ಆದರೂ ಸಾಕಿತ್ತು, ರಣಜಿ ಟ್ರೋಫಿ ಮಧ್ಯಪ್ರದೇಶದ್ದಾಗುತ್ತಿತ್ತು. ರಣಜಿ ಟ್ರೋಫಿ ಗೆಲ್ಲಲು ಕರ್ನಾಟಕದ ಮುಂದಿದ್ದ ದಾರಿ ಒಂದೇ.. victory.

ಮಧ್ಯಪ್ರದೇಶಕ್ಕೆ ಕೊನೇ ದಿನ 90 ಓವರ್’ಗಳಲ್ಲಿ 247 ರನ್’ಗಳ ಟಾರ್ಗೆಟ್. ಮನಸ್ಸು ಮಾಡಿದ್ದರೆ ಗೆಲುವು ಕಷ್ಟವಾಗಿರಲಿಲ್ಲ. ಆದರೆ ಮಧ್ಯಪ್ರದೇಶ ಆಟಗಾರರು ಗೆಲುವಿನ ಬದಲು draw ಅನ್ನು ಆಯ್ಕೆ ಮಾಡಿಕೊಂಡಿದ್ದರು.

ಮಧ್ಯಪ್ರದೇಶದವರ ಗೇಮ್ ಪ್ಲಾನ್’ಗೆ ತಕ್ಕಂತೆ ಪಂದ್ಯ ಸ್ಪಷ್ಟವಾಗಿ ಡ್ರಾದತ್ತ ಸಾಗುತ್ತಿದ್ದ ಸಮಯ.
66 ಓವರ್, 130/4. ಮುಂದಿನ 24 ಓವರ್’ಗಳನ್ನು ನಿಭಾಯಿಸಿದರೆ ರಣಜಿ ಟ್ರೋಫಿ ಮಧ್ಯಪ್ರದೇಶದ್ದು.
200ಕ್ಕೂ ಹೆಚ್ಚು ಎಸೆತಗಳನ್ನೆದುರಿಸಿದ್ದ ಅಬ್ಬಾಸ್ ಅಲಿ ನೆಲ ಕಚ್ಚಿ ಆಡುತ್ತಿದ್ದ.

ಆ ಸಮಯದಲ್ಲಿ ಚೆಂಡನ್ನು ವಿಜಯ್ ಭಾರದ್ವಾಜ್ ಕೈಗೆ ನೀಡುತ್ತಾರೆ ನಾಯಕ ಸುನೀಲ್ ಜೋಶಿ. ಅದಾಗಲೇ ದೇವೇಂದ್ರ ಬುಂದೇಲಾ ವಿಕೆಟ್ ಪಡೆದಿದ್ದ ವಿಜಯ್ ಭಾರದ್ವಾಜ್ ಪೆವಿಲಿಯನ್ ತುದಿಯಿಂದ ದಾಳಿಗಿಳಿಯುತ್ತಾರೆ… ಅಷ್ಟೇ.. ಮಧ್ಯಪ್ರದೇಶದ ಕೆಳ ಕ್ರಮಾಂಕದ ಆಟಗಾರರು ವಿಜಯ್ ಅವರ ಆಫ್’ಸ್ಪಿನ್ ದಾಳಿಗೆ ತರಗೆಲೆಗಳಂತೆ ಉದುರಿ ಹೋಗಿದ್ದರು . 4 ವಿಕೆಟ್’ಗೆ 130 ರನ್ ಗಳಿಸಿದ್ದ ಮಧ್ಯಪ್ರದೇಶ 150ಕ್ಕೆ ಆಲೌಟ್. ನಂಬಲಸಾಧ್ಯ ರೀತಿಯಲ್ಲಿ 96 ರನ್’ಗಳಿಂದ ಪಂದ್ಯ ಗೆದ್ದ ಕರ್ನಾಟಕ ರಣಜಿ ಟ್ರೋಫಿಯನ್ನು ಮುಡಿಗೇರಿಸಿಕೊಂಡು ಬಿಟ್ಟಿತ್ತು. ಅಂದ ಹಾಗೆ ಆ ಇನ್ನಿಂಗ್ಸ್’ನಲ್ಲಿ ವಿಜಯ್ ಭಾರದ್ವಾಜ್ ಅವರ ಬೌಲಿಂಗ್ figure 6/24.

ಕರ್ನಾಟಕ ಕ್ರಿಕೆಟ್ ಕಂಡ ಶ್ರೇಷ್ಠ ರಣಜಿ ಯೋಧರಲ್ಲಿ ಒಬ್ಬರು. 90ರ ದಶಕದಲ್ಲಿ 3 ರಣಜಿ ಟ್ರೋಫಿ, 2 ಇರಾನಿ ಕಪ್ (1996, 1998) ಗೆದ್ದ ಕರ್ನಾಟಕ ತಂಡ ಬೆನ್ನೆಲುಬಾಗಿದ್ದವರು ವಿಜಯ್ ಭಾರದ್ವಾಜ್. ಭಾರತ ಪರ ಆಡಿದ್ದು ಕೆಲವೇ ಕೆಲ ಅಂತರಾಷ್ಟ್ರೀಯ ಪಂದ್ಯಗಳಾದರೂ ಆಡಿದ ಮೊದಲ ಸರಣಿಯಲ್ಲೇ man of the series ಪ್ರಶಸ್ತಿ ಗೆದ್ದಿದ್ದರು.

Latest stories

LEAVE A REPLY

Please enter your comment!
Please enter your name here

1 × one =