ಕ್ರಿಕೆಟ್777 ಟ್ರೋಫಿ ಗೆ ಸಾಕ್ಷಿಯಾಗಲಿರುವ ಉಡುಪಿ; ಕರ್ನಾಟಕದ ಟೆನಿಸ್‌ಬಾಲ್ ಕ್ರಿಕೆಟ್ ದಿಗ್ಗಜರಿಗೆ...

777 ಟ್ರೋಫಿ ಗೆ ಸಾಕ್ಷಿಯಾಗಲಿರುವ ಉಡುಪಿ; ಕರ್ನಾಟಕದ ಟೆನಿಸ್‌ಬಾಲ್ ಕ್ರಿಕೆಟ್ ದಿಗ್ಗಜರಿಗೆ ಸನ್ಮಾನ!

-

- Advertisment -spot_img

 

777 ಟ್ರೋಫಿ ಗೆ ಸಾಕ್ಷಿಯಾಗಲಿರುವ ಉಡುಪಿ; ಕರ್ನಾಟಕದ ಟೆನಿಸ್‌ಬಾಲ್ ಕ್ರಿಕೆಟ್ ದಿಗ್ಗಜರಿಗೆ ಸನ್ಮಾನ!

ಉಡುಪಿ: ಕರ್ನಾಟಕದ ಟೆನಿಸ್‌ಬಾಲ್ ಕ್ರಿಕೆಟ್ ಲೋಕದ ದಿಗ್ಗಜರಿಗೆ ಸಮರ್ಪಿತವಾದ “777 ಟ್ರೋಫಿ 2025 – ಲೆಜೆಂಡರಿ ಕ್ರಿಕೆಟರ್ಸ್ ಟೂರ್ನಮೆಂಟ್” ಉಡುಪಿ ನಗರದಲ್ಲಿ ಈ ವಾರ ಅದ್ದೂರಿಯಾಗಿ ನಡೆಯಲಿದೆ.

ಈ ಟೂರ್ನಮೆಂಟ್ ನ ವಿಶೇಷತೆ ಎಂದರೆ – ಇದು ಒಂದು ಆಕ್ಷನ್‌ ಆಧಾರಿತ ಟೂರ್ನಮೆಂಟ್ ಆಗಿದ್ದು, ತಂಡಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಪ್ರತಿ ತಂಡವೂ ತಮ್ಮ ತಮ್ಮ ಆಕ್ಷನ್‌ನಲ್ಲಿ ಶ್ರೇಷ್ಠ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು, ಅಭಿಮಾನಿಗಳಲ್ಲಿ ಈಗಲೇ ಕುತೂಹಲ ಮೂಡಿಸಿದೆ – ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕು!

ಈ ಟೂರ್ನಿಯ ಆಯೋಜಕ ಸಂದೇಶ್ ಕುಂದರ್, ಅವರು ಹಿಂದಿನ ದಿನಗಳಲ್ಲಿ ಪ್ರಸಿದ್ಧ “ಸೀಶೆಲ್ಸ್ ಇಂಟರ್‌ನ್ಯಾಷನಲ್” ತಂಡವನ್ನು ಪ್ರತಿನಿಧಿಸಿದ್ದರೆ, ಅಂದಿನ ದಿನಗಳಲ್ಲಿ ಅವರು “777 ಕ್ರಿಕೆಟ್ ಕ್ಲಬ್” ಪರವೂ ಆಡಿದ್ದರು. ಆ ನೆನಪಿಗೆ ಗೌರವವಾಗಿ, ಅವರು ಈಗ ಇದೇ ಹೆಸರಿನಲ್ಲಿ ಈ ಅದ್ದೂರಿ ಟೂರ್ನಿಯನ್ನು ಆಯೋಜಿಸಿದ್ದಾರೆ. ಸಂದೇಶ್ ಕುಂದರ್ ಅವರು ಮುಂಚಿನ “ವಾಹಿನಿ ಪಡುಕರೆ” ತಂಡದ ಸ್ಟಾರ್ ಆಟಗಾರರಾಗಿದ್ದರು.

ಈ ಸಂದರ್ಭದಲ್ಲಿ, ಕರ್ನಾಟಕದ ಟೆನಿಸ್‌ಬಾಲ್ ಕ್ರಿಕೆಟ್‌ಗೆ ಮಹತ್ವದ ಕೊಡುಗೆ ನೀಡಿದ ಆರು ಹಿರಿಯ ಕ್ರಿಕೆಟಿಗರನ್ನು ಗೌರವಿಸುವ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.

ಗೌರವಕ್ಕೆ ಆಯ್ಕೆಯಾದ ಆಟಗಾರರು:
➡️ ಪ್ರದೀಪ್ ವಾಜ್ ( ಚಕ್ರವರ್ತಿ ಕುಂದಾಪುರ)
➡️ ಸುರೇಂದ್ರ ( ವೀರಕೇಸರಿ ಸುರತ್ಕಲ್)
➡️ ದಿನೇಶ್ ಪೈ (ಸ್ವಾಮಿ ಗಂಗೊಳ್ಳಿ)
➡️ ಸತೀಶ್ ಕುಂದರ್ (ವಾಹಿನಿ ಪಡುಕರೆ)
➡️ ಸತೀಶ್.ಜಿ (ಸೀ ಶೋರ್ ಮಲ್ಪೆ)
➡️ ಡಾ. ವಿನೋದ್ ನಾಯಕ್ (ಸ್ಪಾರ್ಕ್ ಉಡುಪಿ)

777 ಕ್ರಿಕೆಟರ್ಸ್ ತೆಂಕನಿಡಿಯೂರು ಆಯೋಜಿಸುತ್ತಿರುವ ಈ ಟೂರ್ನಮೆಂಟ್‌ ಅಕ್ಟೋಬರ್ 31, ನವೆಂಬರ್ 1 ಮತ್ತು 2ರಂದು ನೇಜಾರು ಗ್ರೌಂಡ್ ನಲ್ಲಿ ನಡೆಯಲಿದ್ದು, ಪಂದ್ಯಗಳು Sports ಕನ್ನಡ ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ. Sports Mail ಕೂಡ ಈ ಟೂರ್ನಿಯ ಅಧಿಕೃತ ಪ್ರಸಾರಕರು.

ಉಡುಪಿ ಕ್ರಿಕೆಟ್ ಅಭಿಮಾನಿಗಳಿಗೆ ಇದು ನಿಜಕ್ಕೂ ವಿಶಿಷ್ಟ ಕ್ರಿಕೆಟ್ ಹಬ್ಬವಾಗಲಿದ್ದು, ಕರ್ನಾಟಕದ ಟೆನಿಸ್‌ಬಾಲ್ ಕ್ರಿಕೆಟ್‌ನ ಶ್ರೇಷ್ಠ ಪ್ರತಿಭೆಗಳ ಪ್ರದರ್ಶನ ಕಣ್ತುಂಬಿಕೊಳ್ಳಲು ಎಲ್ಲರೂ ಕಾಯುತ್ತಿದ್ದಾರೆ.

LEAVE A REPLY

Please enter your comment!
Please enter your name here

nine − three =

Latest news

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಯುವ...

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!   2026ರ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 92 ರನ್‌ಗಳಿಂದ ಮಣಿಸಿದ ರಾಯಲ್...

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ!

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇತಿಹಾಸದಲ್ಲಿ ಕೆಲವು ಆಟಗಾರರು ಕೇವಲ ಕ್ರಿಕೆಟಿಗರಾಗಿ ಮಾತ್ರ ಉಳಿಯುವುದಿಲ್ಲ; ಅವರು ಭಾವನೆಗಳಾಗುತ್ತಾರೆ....

RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ… ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ?

  RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ... ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ? ಈ ಋತುವಿನ ಐಪಿಎಲ್‌ನ ಮೊದಲ ಅರ್ಹತಾ ಸುತ್ತಿನಲ್ಲಿ ಬೆಂಗಳೂರು ಮತ್ತು ಗುಜರಾತ್...
- Advertisement -spot_imgspot_img

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ ಕರ್ನಾಟಕದ ಮಾಜಿ ಕ್ರಿಕೆಟಿಗ ಹಾಗೂ ಪ್ರತಿಭಾವಂತ ವೇಗದ ಬೌಲರ್ ಎಸ್.ಎಲ್. ಅಕ್ಷಯ್ ಅವರು ಭಾನುವಾರ ಲೀಗ್ ಪಂದ್ಯವೊಂದರ...

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್ ಅರಸೀಕೆರೆಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಕ್ರೀಡಾ ರಸದೌತಣ ನೀಡಲು “ಅರಸೀಕೆರೆ ಚಾಂಪಿಯನ್ಸ್...

Must read

- Advertisement -spot_imgspot_img

You might also likeRELATED
Recommended to you