ಗೆಲುವಿನ ಓಟವನ್ನು ಮುಂದುವರಿಸುವ ಆತ್ಮವಿಶ್ವಾಸದಲ್ಲಿರುವ ರೋಹಿತ್ ಬಳಗಕ್ಕೆ ಮುಂದಿನ ಪಂದ್ಯದಲ್ಲಿ ಎದುರಾಳಿಯಾಗಿರುವುದು ಇಂಗ್ಲೆಂಡ್.
ಲಕ್ನೋದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಭಾರತ ತನ್ನ ಮುಂದಿನ ದೊಡ್ಡ ಹಣಾಹಣಿಗೆ ಕಠಿಣ ತಯಾರಿ ನಡೆಸುತ್ತಿದೆ. ಭಾನುವಾರ ಮಧ್ಯಾಹ್ನ ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಭಾರತ ಇದುವರೆಗಿನ ಪಂದ್ಯಾವಳಿಯಲ್ಲಿ ತನ್ನ ಎಲ್ಲಾ ಐದು ಲೀಗ್ ಪಂದ್ಯಗಳನ್ನು ಗೆದ್ದಿದೆ ಮತ್ತು ಮುಂದಿನ ಸುತ್ತಿನಲ್ಲಿ ಸಾಗಲು ಸಜ್ಜಾಗಿದೆ. ಇಂಗ್ಲೆಂಡ್ ಸತತ ಮೂರು ಪಂದ್ಯಗಳನ್ನು ಕಳೆದುಕೊಂಡು ಪಾಯಿಂಟ್ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ. ಒಂದು ಸೋಲು ಎಂದರೆ ಮೆಗಾ ಈವೆಂಟ್‌ನಲ್ಲಿ ಇಂಗ್ಲೆಂಡ್‌ನ ಅಭಿಯಾನ ಮುಗಿಯಲಿದೆ.
ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸತತ ಐದು ಗೆಲುವು ಸಾಧಿಸಿದ್ದು ಅದ್ಬುತ ಲಯದಲ್ಲಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಇದುವರೆಗೆ ಒಟ್ಟು 5 ಪಂದ್ಯಗಳನ್ನಾಡಿದ್ದು, ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಸದ್ಯ ಇಂಗ್ಲೆಂಡ್ ತಂಡ ಸಂಕಷ್ಟದ ಹಾದಿಯಲ್ಲಿದೆ. ಭಾರತದ ವಿರುದ್ಧ ಅವರ ಪಂದ್ಯ ಸುಲಭವಲ್ಲ.2023ರ ವಿಶ್ವಕಪ್‌ನಲ್ಲಿ ಜೀವಂತವಾಗಿರಲು ಇಂಗ್ಲೆಂಡ್‌ಗೆ ಯಾವುದೇ ಬೆಲೆ ತೆತ್ತಾದರೂ ಭಾರತದ ವಿರುದ್ಧ ಜಯಗಳಿಸಬೇಕಾಗಿದೆ.
ಸತತ ಸೋಲಿನ ಸುಳಿಗೆ ಸಿಲುಕಿ ಟೀವ್ರ ಟೀಕೆಗೆ ಗುರಿಯಾಗಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ ಸ್ಥಿತಿ ಅತ್ಯಂತ ಹೀನಾಯವಾಗಿದೆ. ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಸೋತಿರುವ ಇಂಗ್ಲೆಂಡ್ ತಂಡ ಬಹುತೇಕ ಟೂರ್ನಿಯಿಂದ ಹೊರಬೀಳುವ ಹಂತದಲ್ಲಿದೆ. ಇಂಥಾ ಸಂದರ್ಭದಲ್ಲಿ ಟೀಮ್ ಇಂಡಿಯಾ ಎದುರಾಳಿಯಾಗಿರುವುದು ಇಂಗ್ಲೆಂಡ್ ತಂಡಕ್ಕೆ ದೊಡ್ಡ ಸವಾಲಾಗಿರುವುದರಲ್ಲಿ ಅನುಮಾನವಿಲ್ಲ.
ಸ್ಪಿನ್ ಮಾಂತ್ರಿಕನಿಗೆ ಚಾನ್ಸ್- ಇಂಗ್ಲೆಂಡ್ ವಿರುದ್ಧದ ಸೆಣೆಸಾಟಕ್ಕೆ ಮತ್ತೊಂದು ಬ್ರಹ್ಮಾಸ್ತ್ರ ಹೊರತೆಗೆಯಲಿದೆ ಟೀಮ್ ಇಂಡಿಯಾ!
ಇದೀಗ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್’ರಿಗೆ ಸ್ಥಾನ ನೀಡುವ ಬಗ್ಗೆ ಟೀಂ ಮ್ಯಾನೇಜ್ಮೆಂಟ್ ಚಿಂತಿಸಿದೆ. ಲಕ್ನೋದ ಏಕನಾ ಮೈದಾನವು ಸ್ಪಿನ್ ಸ್ನೇಹಿಯಾಗಿದೆ. ಇದೇ ಕಾರಣದಿಂದ ಹೆಚ್ಚುವರಿ ಬ್ಯಾಟರ್ ಬದಲಿಗೆ ಸ್ಪಿನ್ನರ್’ಗಳನ್ನು ಕಣಕ್ಕಿಳಿಸಲು ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಆಫ್ ಸ್ಪಿನ್ನರ್ ಆರ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಸ್ಪಿನ್ನರ್’ಗಳಾಗಿ ಟೀಂ ಇಂಡಿಯಾಗೆ ಶಕ್ತಿ ತುಂಬಲಿದ್ದಾರೆ. ಸ್ಪಿನ್ನರ್ ಆರ್ ಅಶ್ವಿನ್ ಈ ಪಂದ್ಯದಲ್ಲಿ ಭಾರತದ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಆಕಾಂಕ್ಷಿಯಾಗಿದೆ. ಟೀಂ ಇಂಡಿಯಾ ಎಲ್ಲಾ ವಿಭಾಗದಲ್ಲೂ ಫಾರ್ಮ್ ನಲ್ಲಿದೆ. ಮತ್ತೊಂದೆಡೆ, ಆಂಗ್ಲರ ತಂಡದ ಪ್ರದರ್ಶನ ವಿಶೇಷವಾಗಿಲ್ಲ. ಇಂಗ್ಲೆಂಡ್ ತಂಡ ನಿಯಮಿತವಾಗಿ ಸೋಲುಗಳನ್ನು ಎದುರಿಸುತ್ತಿದೆ.
‘ ಗುಡ್ ಲಕ್ ಬಾಯ್ಸ್’ , ಸಮರಕ್ಕೆ ಸಿದ್ದರಾಗಿ….
ಸುರೇಶ್ ಭಟ್, ಮೂಲ್ಕಿ
ಟೀಂ ಸ್ಪೋರ್ಟ್ಸ್ ಕನ್ನಡ